ಸಿರಿಧಾನ್ಯ ಬೇಸಾಯ, ಬಳಕೆ ಮಾಹಿತಿ ಕಾರ್ಯಕ್ರಮ
ಮಾಲೂರು.ಜು೧೩:ತಾಲೂಕಿನ ಕುಡಿಯನೂರು ವಲಯದ ದಿನ್ನೇರಿ ಹಾರೋಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸಿರಿಧಾನ್ಯ ಬೇಸಾಯ ಮತ್ತು ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ಕೃಷಿ ಅಧಿಕಾರಿ ಮಧುರಾಜ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಿರಿಧಾನ್ಯ ಬೇಸಾಯವು ಮಾಡುವುದರಿಂದ ಮಣ್ಣಿನ ಫಲವತ್ತತೆ ಮತ್ತು ಕಡಿಮೆ ನೀರು ಬಳಸಿ ಹೆಚ್ಚು ಆದಾಯ ಗಳಿಸಬಹುದು, ಕಳೆದ ೪೦ ವರ್ಷದ ಹಿಂದೆ ಮನು?ನಿಗೆ ಬೇಕಾದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು, ಮಣ್ಣಿನ ಫಲವತ್ತತೆ ಮತ್ತು ಕಡಿಮೆ ನೀರಿನ್ನು ಬಳಸಿ ಯಾವುದೇ ರಾಸಾಯನಿಕ ಗೊಬ್ಬರ ಹಾಕದೆ ಬೆಳೆಯುತ್ತಿದ್ದರು, ಆದರೆ ಈಗ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ಬೆಳೆದ ಆಹಾರ ಪದಾರ್ಥಗಳ ಸೇವನೆಯಿಂದ ಮನುಷಯನಿಗೆ ರೋಗಗಳು ಹೆಚ್ಚಾಗಿ ಪ್ರತಿದಿನ ಔಷಧಿಯನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದಾರೆ.
ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಉ?ರಾಣಿ, ಮೇಲ್ವಿಚಾರಕರಾದ ಕವಿತಾ, ಶಾಲೆಯ ಮುಖ್ಯ ಶಿಕ್ಷಕರಾದ ನಾಗೇಶ್, ಚೆನ್ನಪ್ಪ, ಕೇಂದ್ರದ ಅಧ್ಯಕ್ಷೆ ಗಿರಿಜಮ್ಮ, ಒಕ್ಕೂಟದ ಅಧ್ಯಕ್ಷೆ ಉಮಾದೇವಿ, ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.