ಹೆಚ್ಚಿದ ಡೆಂಗ್ಯೂ, ಮಲೇರಿಯಾ: ಶುದ್ಧ ಕುಡಿವ ನೀರು ಪೂರೈಕೆಗೆ ಶಾಸಕರ ಸೂಚನೆ
ಪಾವಗಡ, ಜು. ೧೩- ಡೆಂಗ್ಯೂ ಮತ್ತು ಮಲೇರಿಯಾ ಕಾಯಿಲೆಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಡಿಪ್ಲೋರೈಡ್ ಸ್ಥಾವರಗಳಲ್ಲಿ ಗುಣಮಟ್ಟದ ಶುದ್ದ ಕುಡಿಯುವ ನೀರನ್ನು ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಹೆಚ್.ವಿ. ವೆಂಕಟೇಶ್ ಸೂಚಿಸಿದರು.
ಇಲ್ಲಿನ ತಾಲ್ಲೂಕು ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ತಾಲ್ಲೂಕು ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರು ನೈರ್ಮಲ್ಯ ಇಲಾಖೆ ಅಧಿಕಾರಿ ಓ. ಹನುಮಂತಪ್ಪ ಕಾಮಗಾರಿ ಬಗ್ಗೆ ವಿವರಣೆ ನೀಡುತ್ತಿರುವಾಗ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗ್ರಾಮ ಪಂಚಾಯ್ತಿಗಳಿಗೆ ವಹಿಸಿ ಅವರೇ ತಮ್ಮ ನಿಧಿಯಿಂದ ರಿಪೇರಿ ಮಾಡಿಸಿ ಗುಣಮಟ್ಟದ ನೀರನ್ನು ನೀಡುತ್ತಾರೆ ಎಂದು ತಿಳಿಸಿದರು.
ತಾಲ್ಲೂಕಲ್ಲಿ ನಡೆಯುತ್ತಿರುವ ನೀರು ಸರಬರಾಜು ಯೋಜನೆ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ವೆಂಕಟಮ್ಮನಹಳ್ಳಿಯಲ್ಲಿ ಪೈಪ್‌ಗಳು ಮೇಲೆ ಕಾಣುತ್ತಿವೆ ಮತ್ತು ಟಾರ್ ರಸ್ತೆಯಲ್ಲಿ ಟಾರ್ ಹಾಕಿ ಕಾಂಕ್ರೀಟ್ ರಸ್ತೆಯಲ್ಲಿ ಕಾಂಕ್ರೀಟ್ ಹಾಕಿ ರಿಪೇರಿ ಮಾಡಬೇಕು. ಗುಣಮಟ್ಟ ಕಾಮಗಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಪಾವಗಡ ನಗರಕ್ಕೆ ನಗರಾಭಿವೃದ್ಧಿ ಯೋಜನೆಯಿಂದ ನಡೆಯುವ ಕಾಮಗಾರಿಗೆ ನಿಮ್ಮ ಸಹಕಾರ ಅಗತ್ಯವಿದೆ. ಇಬ್ಬರು ಸೇರಿ ನಗರಕ್ಕೆ ಕುಡಿಯುವ ನೀರು ನೀಡಬೇಕು ಎಂದರು.
ಲ್ಯಾಂಡ್ ಅರ್ಮಿ ವತಿಯಿಂದ ತಾಲ್ಲೂಕಿನಲ್ಲಿ ಕೈಗೊಂಡಿರುವ ಕಾಮಗಾರಿಗಳು ಎರಡು ವರ್ಷಗಳಾದರೂ ಪ್ರಗತಿಯಲ್ಲಿವೆ ಮುಗಿಯುವುದು ಯಾವಾಗ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕೂಡಲೇ ಕಾಮಗಾರಿಗಳನ್ನು ಮುಗಿಸುವಂತೆ ಸೂಚಿಸಿದರು.
ಕಟ್ಟುನಿಟ್ಟಾಗಿ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಈ ವರ್ಷ ಫಲಿತಾಂಶ ಉತ್ತಮವಾಗಿರಬೇಕು. ನಿಮಗೆ ವಾಹನ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕರು ಬಿಇಒ ಇಂದ್ರಾಣಮ್ಮ ಅವರಿಗೆ ಭರವಸೆ ನೀಡಿದರು.
ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ೨೧೫ ಜನ ಶಿಕ್ಷಕರ ಕೊರತೆ ಇದೆ. ನೇಮಕಾತಿ ಸಂದರ್ಭದಲ್ಲಿ ಸಿರಾ, ಮಧುಗಿರಿ ತಾಲ್ಲೂಕನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪಾವಗಡವನ್ನು ಯಾವ ಶಿಕ್ಷಕರು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬಲವಂತಕ್ಕೆ ಬಂದವರು ಶಿಫಾರಸ್ಸುಗಳ ಮೇಲೆ ವರ್ಗ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿಯಾಗಿಲ್ಲ. ಆದಾಗ್ಯೂ ಈ ವರ್ಷ ಉತ್ತಮ ಗುಣಮಟ್ಟದ ಫಲಿತಾಂಶ ನೀಡುವ ಭರವಸೆ ಬಿಇಒ ಸಭೆಗೆ ನೀಡಿದರು.
ತಾಲ್ಲೂಕಿನಲ್ಲಿ ೧೦.೧೦ ಲಕ್ಷ ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ. ಇದುವರೆಗೆ ೧೦೭ ಕೋಟಿ ರೂ. ಗೃಹಲಕ್ಷಿ ಯೊಜನೆಯಿಂದ ತಾಲ್ಲೂಕಿಗೆ ಬಿಡುಗಡೆಯಾಗಿದೆ ಎಂದು ಸಿಡಿಪಿಒ ಸುನಿತಾ ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿರುವ ೧೯ ಕೇಂದ್ರಗಳ ಪಶುಪಾಲನ ಕೇಂದ್ರಗಳಲ್ಲಿ ೯ ಕೇಂದ್ರಗಳಲ್ಲಿ ಪಶು ವೈದ್ಯಾಧಿಕಾರಿಗಳ ಕೇಂದ್ರಗಳಿದ್ದು ೯ ಕೇಂದ್ರಗಳಲ್ಲಿ ವೈದ್ಯರು ಸ್ಥಾನಗಳು ಖಾಲಿ ಇವೆ. ಈಗ ನೇಮಕಾತಿ ನಡೆಯುತ್ತಿದ್ದು ಎಲ್ಲಾ ವೈದ್ಯರ ಸ್ಥಾನಗಳನ್ನು ತುಂಬಲು ಶಾಸಕರಲ್ಲಿ ಪಶು ವೈದ್ಯಾಧಿಕಾರಿಗಳು ಮನವಿ ಮಾಡಿದರು.
ತಾಲ್ಲೂಕಿನಲ್ಲಿ ಎರಡು ಸಂಚಾರಿ ಪಶು ವೈಧ್ಯ ಘಟಕಗಳು ನಿಡಗಲ್ಲು ಹೋಬಳಿ ಮತ್ತು ವೈ.ಎನ್. ಹೊಸಕೋಟೆ ಹೋಬಳಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ೧೯೬ಕ್ಕೆ ಫೋನ್ ಮಾಡಿದರೆ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕಿನಲ್ಲಿ ಡ್ರಾಗನ್ ಹಣ್ಣುಗಳನ್ನು ಯಶಸ್ವಿಯಾಗಿ ೧೯ ಜನ ರೈತರು ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದೆ. ಕಳೆದ ಎರಡು ವರ್ಷಗಳಿಂದ ಎಸ್ಟೀ ಯೋಜನೆಯಲ್ಲಿ ಹಣ ಬಿಡಗಡೆಯಾಗಿಲ್ಲ. ರೈತರು ಸ್ವಂತ ಹಣದಿಂದ ಯೋಜನೆಗೆ ವ್ಯಯ ಮಾಡಿದ್ದು, ಕಚೇರಿಗೆ ಅಲೆಯುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಹಣ ಬರುವಂತೆ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.
ರೇಷ್ಮೆ ಸಹಾಯಕ ನಿರ್ದೇಶಕ ಕೃಷ್ನಮೂರ್ತಿ ಸಭೆಗೆ ಮಾಹಿತಿ ನೀಡಿ, ತಾಲ್ಲೂಕಿನಲ್ಲಿ ಬೆಳೆಯುವ ರೇಷ್ಮೆ ಗೂಡುಗಳಿಗೆ ಶಿಡ್ಲಘಟ್ಟ ಮತ್ತು ರಾಮನಗರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು.
ಚಿತ್ರದುರ್ಗ ಡಿಪೋದಿಂದ ತುಮಕೂರು ಜಿಲ್ಲೆಯ ಮಧುಗಿರಿ ಡಿಪೋಗೆ ವರ್ಗಾಯಿಸುವಂತೆ ಸಾರಿಗೆ ಸಚಿವರಲ್ಲಿ ಮನವಿ ಮಾಡಲಾಗಿದೆ. ತಾಲ್ಲೂಕಿನಲ್ಲಿ ಪ್ರತಿ ಹಳ್ಳಿಗೂ ಬಸ್ ಸೌಲಭ್ಯ ಇರಬೇಕು ನಿಮಗೆ ಎಷ್ಟು ಬಸ್ಸುಗಳು ಸಿಬ್ಬಂದಿ ಎಷ್ಟು ಜನ ಬೇಕು ಎಂಬ ಮಾಹಿತಿ ನೀಡಿ ಕೊಡಿಸುವ ಜವಾಬ್ದಾರಿ ನನ್ನದು ಎಂದು ಶಾಸಕ ವೆಂಕಟೇಶ್ ಕೆಎಸ್‌ಅರ್‌ಟಿಸಿ ಡಿಪೊ ವ್ಯವಸ್ತಾಪಕ ಹನುಮಂತರಾಯಪ್ಪ ಅವರಿಗೆ ಸೂಚಿಸಿದರು ಳೆಯುವವರು ತೋಟಗಾರಿಕಾ ಅಧಿಕಾರಿಗಳು
ಸಭೆಯಲ್ಲಿ ಇ ಒ ಜಾನಕೀರಾಂ ತಾಹಸೀಲ್ದಾರ್ ವರದರಾಜು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.