ನಿರಂತರ ಅಭ್ಯಾಸದಿಂದ ಸಂಗೀತ ಸಾಧನೆ
ಕಲಬುರಗಿ :ಜು.13: ನಿರಂತವಾಗಿ ಸಂಗೀತ ಅಭ್ಯಾಸ ಮಾಡುವುದರಿಂದ ಸಾಧನೆಗೈಯಲು ಸಾಧ್ಯವಿದೆ ಎಂದು ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ವೆಂಕಟೇಶ್ ಆಲ್ಕೂಡ ಅವರು ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಂಗೀತ ವಿಭಾಗದಿಂದ ಇತ್ತೀಚಿಗೆ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ, ಪದವಿ ಮಟ್ಟದಲ್ಲಿ ಸಂಗೀತ ಅಭ್ಯಾಸ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ವಚನಗಳು. ದಾಸರ ಪದಗಳು. ಹಿಂದೂಸ್ತಾನಿ ಸಂಗೀತದ ಕೇಲವು ರಾಗಗಳ ವಿಶೇಷವನ್ನು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೆ ಹೆಚ್ಚು ಸಮಯ ಬೇಕು. ಆ ಸಾಧನೆ ಮಾಡಿದಾಗ ಮಾತ್ರ ಸಂಗೀತಗಾರನು ಶ್ರೇಷ್ಠ ಕಲಾವಿದನಾಗಿ ಬೆಳೆಯುತ್ತಾನೆ. ಪೂಜ್ಯ ಅಪ್ಪಾಜಿಯವರು ಸಂಗೀತಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತೋಷಕುಮಾರ ಕಾಮಶೇಟ್ಟಿ. ವಹಿಸಿದರು, ವಿಭಾಗದ ಮುಖ್ಯಸ್ಥರಾದ ಡಾ ಸೀಮಾ ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಿದರು ವೀರಭದ್ರಯ್ಯ ಸ್ಥಾವರಮಠ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು ಕು. ಪೂಜಾ ಎಂ. ಎಂ. ಪ್ರಾಥಿಸಿದರು. ನಂತರ ವೆಂಕಟೇಶ ಆಲ್ಕೂಡ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು ಕಾರ್ಯಕ್ರಮ.