ಹಬೋಹಳ್ಳಿ : ಪ್ರಾರ್ಥನ ವಿದ್ಯಾ ಮಂದಿರದಲ್ಲಿ ಗಾಳಿಪಟ ಉತ್ಸವ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.13 ಪಟ್ಟಣದ ಹೊರವಲಯದಲ್ಲಿರುವ ಪ್ರಾರ್ಥನ ವಿದ್ಯಾ ಮಂದಿರ  ಶಾಲೆಯಲ್ಲಿ ಶುಕ್ರವಾರ ಶಾಲಾ ಮಕ್ಕಳಿಗೆ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮಕ್ಕೆ ಚಾಲನೆ ನೀಡಿದ  ಶಾಲೆಯ ಮುಖ್ಯ ಗುರುಗಳಾದ ಭೀಮ ನಾಯ್ಕ್ ಎಲ್ ಒ ಮಾತನಾಡಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಗಾಳಿಪಟ ಉತ್ಸವ ನಡೆಸಿಕೊಂಡು ಬಂದಿದ್ದೇವೆ. ಬಾಲ್ಯ ಜೀವನದಲ್ಲಿ ಗಾಳಿಪಟ ಆರಿಸುವುದು ಒಂದು ಸಂಭ್ರಮ. ಇದರಲ್ಲಿ ಪಾಲ್ಗೊಳ್ಳುವ  ಮಕ್ಕಳ ಮತ್ತು ಪಾಲಕರ ಪಾಲ್ಗೊಳ್ಳವಿಕೆ ತುಂಬಾ ಖುಷಿ ತರಿಸುತ್ತದೆ ಎಂದರು.
 ಗಾಳಿಪಟ ಉತ್ಸವದಲ್ಲಿ ನೂರಾರು ಮಕ್ಕಳು ಮತ್ತು ಪಾಲಕರು ಪಾಲ್ಗೊಳ್ಳುವ ಮೂಲಕ ಸಂಭ್ರಮ ಪಟ್ಟರು.
 ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶಂಕರಗೌಡ, ದೈಹಿಕ ಶಿಕ್ಷಕ, ತೋಟಯ್ಯ  ಶಿಕ್ಷಕಿಯರಾದ ವಾಣಿ ಮೆಹರುನ್ನ  ಆಶಾ, ನಾಗರತ್ನ, ಇಂದಿರಾ, ಇತರರಿದ್ದರು