ಸಂಪೂರ್ಣ ಹದಗೆಟ್ಟ ಸೊನ್ನ – ಮೋರಿಗೆರೆ ರಸ್ತೆ  ಸವಾರರು ಹೈರಾಣ..
ಉಮಾಪತಿ ಶೆಟ್ಟರ್
 ಹಗರಿಬೊಮ್ಮನಹಳ್ಳಿ. ಜು.13 ಸುಮಾರು ವರ್ಷಗಳಿಂದ ದುರಸ್ತಿ ಮಾಡದೆ ಸಂಪೂರ್ಣ ಹಾಳಾಗಿ ಹೋಗಿರುವ ಸೊನ್ನ -ಮೊರಗೇರಿ ರಸ್ತೆಯಲ್ಲಿ ದಿನನಿತ್ಯ ಪ್ರಯಾಣಿಸುವ ಸವಾರರಿಗೆ ನರಕದರ್ಶನ ಆಗುವುದು ಗ್ಯಾರಂಟಿ. ತಾಲೂಕ ಆಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
 ಹಗರಿಬೊಮ್ಮನಹಳ್ಳಿಯಿಂದ ಪ್ರಾರಂಭವಾದ ರಸ್ತೆ ಸೊನ್ನ ಮೋರಿಗೇರಿ ಮುಖಾಂತರ ಹಡಗಲಿ ಮೈಲಾರದ ಈ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು. ಕ್ರಾಸ್ ನಿಂದ ಹಿಡಿದು ಸುಮಾರು 8 ಕಿ.ಮೀ ರಸ್ತೆ ದೊಡ್ಡ ದೊಡ್ಡ ಕುಣಿಗಳಿಂದ ತುಂಬಿ ಹೋಗಿದೆ. ಸರ್ಕಾರಗಳು ರಸ್ತೆಯ ಅಭಿವೃದ್ಧಿಗೆ ನೂರಾರು ಕೋಟಿ  ರೂ.  ಖರ್ಚು ಮಾಡುತ್ತಾರೆ. ಆದರೆ ಆ ಹಣ ಎಲ್ಲಿ ಹೋಗುತ್ತದೆ ಎಂದು ಪ್ರಜ್ಞಾವಂತರು ಮಾತನಾಡಿಕೊಳ್ಳುತ್ತಾರೆ  ಸರ್ಕಾರಗಳು ಸಾರ್ವಜನಿಕರ  ಮೂಲಭೂತ ಸೌಕರ್ಯಗಳಾದ ರಸ್ತೆ,ಚರಂಡಿ,ನೀರು ಕೊಡಲು ವಿಫಲವಾದರೆ. ಸರ್ಕಾರಗಳು ಇದ್ದು ಸತ್ತಂತೆ. ಮತಕ್ಕಾಗಿ ಓಲೈಸುವ ರಾಜಕಾರಣ ಬಿಟ್ಟು ಅಭಿವೃದ್ಧಿಯ ಕಡೆ ಗಮನ ಹರಿಸಿದರು. ಇಂತಹ ಎಷ್ಟೋ ರಸ್ತೆಗಳು ಚಿನ್ನದ ರಸ್ತೆಗಳನ್ನಾಗಿ ಮಾಡಬಹುದು. ಇದೇ ರೀತಿ ತಾಲೂಕು ಸೇರಿದಂತೆ  ರಾಜ್ಯದ ಅನೇಕ ಕಡೆ ರಸ್ತೆಗಳು ಸಂಪೂರ್ಣ ಹದಗೆಟ್ಟು  ಅಸ್ಥಿಪಂಜರದಂತೆ ಗೋಚರಿಸುತ್ತಿವೆ.
 ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಡರೂ ಕಾಣದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.