ಕಮಾಯಿಗಿಳಿದು ಖಾತೆಯಲ್ಲಿ ಕರಾಮತ್ತು ನಡೆಸಿದ ಕಮೀಷರ್ ರಾಮದಾಸನ ಮುಗಿಯದ ರಾಮಾಯಣ
ಸಂಜೆವಾಣಿ ವಾರ್ತೆ
ಹನೂರು ಜು 13 :- ಚಾಮರಾಜನಗರ ನಗರಸಭೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲವೆಂಬಂತೆ ಮತ್ತಷ್ಟು ಮಗದಷ್ಟು ಅಕ್ರಮ ಇ- ಸ್ವತ್ತನ್ನು ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಗೆ ಸೇರಿದ ವಾರ್ಡ್ ನಂ 15 ಕ್ಕೆ ಸೇರಿದ ಚಾಮರಾಜನಗರ ಶಾಸಕರ ನಿವಾಸದ ಅನತಿ ದೂರದಲ್ಲೇ ಒಂದೇ ಜಾಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವ್ಯಕ್ತಿಗಳಿಗೆ ಎರಡು ಇ ಸ್ವತ್ತು ನೀಡಲಾಗಿದೆ.
ಡಿ.ವೈ.ಎಸ್.ಪಿ ರವರ ಕಛೇರಿಯಿಂದ ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ಮಾರ್ಗದಲ್ಲಿ ವಕೀಲ ಇಂದುಶೇಖರ್ ರವರ ಮನೆಯ ಪಕ್ಕದಲ್ಲಿ ಇರುವ ಸ್ಥಳವು ಈ ಹಿಂದೆ 2012 ರಿಂದ ಕೊತ್ತಲವಾಡಿಯ ಸೋಮಲಿಂಗಪ್ಪ.ಕೆ.ಎಸ್. ರವರಿಗೆ ಅಸೆಸ್ಮೆಂಟ್ ನಂ 1919/1816 ಖಾತೆ ಆಗಿದ್ದು , ಹೊಸ ಇ-ಸ್ವತ್ತಿನ ನಂ 15-2- 23-22ಎ ಸ್ವತ್ತಿಗೆ ನಗರಸಭೆಗೆ ಕಂದಾಯ ಪಾವತಿ ಮಾಡುತ್ತಿದ್ದಾರೆ.
ಆದರೆ ಈ ಜಾಗಕ್ಕೆ ಸೂಕ್ತವಾದ ದಾಖಲೆಗಳಾದ ಮೂಲ ಆರ್.ಟಿ.ಸಿ , ಸರ್ವೇ ಸ್ಕೆಚ್, ಅಟ್ಲಾಸ್ , ಅನ್ಯಕ್ರಾಂತ ನಕ್ಷೆ ಇರುವುದಿಲ್ಲ. ಆದರೆ ಸದರಿ ಜಾಗವನ್ನು ಮೈಸೂರಿನ ಕುಮಾರ್.ಎಸ್ ಎಂಬುವರು ಮೂಲ ಸರ್ವೆ ನಂಬರ್ 381/20 ಮಾಲೀಕರಾದ ಶ್ರೀಮತಿ ನಾಗಮ್ಮ ಕೋಂ ಸೋಮಣ್ಣ ರವರಿಂದ 3 ಗುಂಟೆ ಸದರಿ ಜಾಗವನ್ನು ದಿನಾಂಕ 13/12/2021 ರಂದು ಕ್ರಯಕ್ಕೆ ಪಡೆದು ತಾಲ್ಲೂಕು ತಹಶಿಲ್ದಾರರ ಕಛೇರಿಯಲ್ಲಿ ಖಾತೆ ಬದಲಾವಣೆ ಮಾಡಿ ತದನಂತರ ಆರ್.ಟಿ.ಸಿ ಮಾಡಿಸಿ ಅನ್ಯಕ್ರಾಂತ ನಕ್ಷೆ ಪಡೆದು ಮಾನ್ಯ ಜಿಲ್ಲಾಧಿಕಾರಿಗಳಿಂದ ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ ಆದೇಶ ಮಾಡಿಸಿ , ನಗರಾಭಿವೃದ್ಧಿ ಪ್ರಾಧಿಕಾರದಿಂದ ಏಕ ವಿನ್ಯಾಸದ ನಕ್ಷೆ ಅನುಮೋದನೆಗೊಂಡ ನಂತರ ನಗರಸಭೆ ಕಛೇರಿಯಲ್ಲಿ ಖಾತೆ ತೆರವು ಮಾಡಿಕೊಂಡು ಅಸೆಸ್ಮೆಂಟ್ ನಂ 3048/ 3048 ಇ ಸ್ವತ್ತು ನಂ 15-2-525-187ಎ ಆಗಿ ಇ-ಸ್ವತ್ತು ಸ್ವತಃ ನಗರಸಭೆ ಕಂದಾಯ ಅಧಿಕಾರಿ ಶರವಣರವರು ಹಾಗೂ ನಕ್ಷಾ ಪ್ರವೀಣ ಅಭಿಯಂತರ ಬಿ.ಜಿ.ಮಹದೇವಸ್ವಾಮಿರವರು ಸ್ಥಳ ಪರಿಶೀಲಿಸಿ ನೀಡಲಾಗಿದೆ.
ಪೌರಾಯುಕ್ತರು ಸಹ ಇಸ್ವತ್ತು ನೀಡಲು ಮುಂಚೆಯೇ ಸ್ಥಳಕ್ಕೆ ಭೇಟಿ ನೀಡಿ ನಂತರ ಅನುಮೋದನೆ ಮಾಡಿ ಇ- ಸ್ವತ್ತನ್ನು ದಿನಾಂಕ 01/06/2023 ರಂದು ನೀಡಿರುತ್ತಾರೆ. ಇದಕ್ಕೆ ಆದೇಶ ನೀಡುವ ಮೊದಲು ಪೌರಾಯುಕ್ತರಿಗೆ,ಕಂದಾಯಾಧಿಕಾರಿ ಶರವಣ ಅಥವಾ ಸ್ಥಳ ಗುರುತಿಸಿ ಪಿ.ಐ.ಡಿ. ನೀಡುವ ನಕ್ಷೆ ಪ್ರವೀಣ ಬಿ ಜಿ ಮಹದೇವಸ್ವಾಮಿಗೆ ಇದು ಯಾರ ಆಸ್ತಿ ಎಂಬುದು ತಿಳಿದಿರಲಿಲ್ಲವೆ….?
ಸದರಿ ಜಾಗವು ನನ್ನದೆಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಕೆ.ಎಸ್. ಸೋಮಲಿಂಗಪ್ಪ ತಾಲ್ಲೂಕು ಕಛೇರಿಯ ಖಾತೆ ಬದಲಾವಣೆಯಿಂದ ಕುಮಾರ್ ಎಂಬುವ ವ್ಯಕ್ತಿ ಗೆ ಇ-ಸ್ವತ್ತು ನೀಡಿ ತಂತಿಬೇಲಿ ಹಾಕಲು ಅನುಮತಿ ನೀಡುವವರೆಗೆ ತಕರಾರು ಸಲ್ಲಿಸಲು ವಿಳಂಬ ಧೋರಣೆ ಅನುಸರಿಸಲು ಅವರ ಬಳಿ ಇರುವ ಅಸಮರ್ಪಕ ದಾಖಲೆಗಳು ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ಇದರ ನಡುವೆ ನಡೆದದ್ದೆ ಪೌರಾಯುಕ್ತರ ಇ-ಸ್ವತ್ತಿನ ಕರಾಮತ್ತು ಸದರಿ ಸೋಮಲಿಂಗಪ್ಪ ಕೆ ಎಸ್ ರವರಿಗೆ ಮೈಸೂರಿನ ಕುಮಾರ್ ರವರಿಗೆ ನೀಡಿದ ಇ-ಸ್ವತ್ತಿನ ಜಾಗವನ್ನೆ ಮೇಲಿನ ನಗರಸಭೆ ಕಳಶಪ್ರಾಯ ಅಧಿಕಾರಿಗಳಾದ ಪೌರಾಯುಕ್ತ ರಾಮದಾಸ್ , ಕಂದಾಯಾಧಿಕಾರಿ ಶರವಣ ಅಥವಾ ಸ್ಥಳ ‘.
ನಗರಸಭೆಯ ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಣದಾಸೆಗಾಗಿ ಸಾರ್ವಜನಿಕರ ಖಾತೆಗಳನ್ನು ಅಕ್ರಮವಾಗಿ ಮಾಡಿ ನ್ಯಾಯಾಲಯದಲ್ಲಿ ಕಾಲಹರಣ ಮಾಡುವಂತೆ ಸಾರ್ವಜನಿಕರಿಗೆ ನರಕದರ್ಶನ ನೀಡುತ್ತಿದೆ. ಚಾಮರಾಜನಗರ ನಗರಸಭೆ. ವರುಷಗಳಗಟ್ಟಲೆ ಇ-ಸ್ವತ್ತು ಮಾಡಿಸಲು ಸಾರ್ವಜನಿಕರು ಹಿಡಿಶಾಪ ಹಾಕುತ್ತಲೆ ನಗರಸಬೆಗೆ ಅಲೆದು ಹೈರಾಣಾಗುತ್ತಿದ್ದಾರೆ.
ಪ್ರಸ್ತುತ ಪ್ರಕರಣವು ನ್ಯಾಯಾಲಯದಲ್ಲಿದ್ದರೂ ಸಹ ಮತ್ತೊಮ್ಮೆ ಇ ಸ್ವತ್ತು ಮಾಡಿದ್ದಾದರು ಹೇಗೆ..,? ಭಾಧಿತ ಮೈಸೂರಿನ ಕುಮಾರ್ ಎಂಬುವನು ಜಿಲ್ಲಾಧಿಕಾರಿಗಳಿಂದಲೇ ಭೂಪರಿವರ್ತನೆ ಆದೇಶ ತಂದು ಅನ್ಯಕ್ರಾಂತ ಮಾಡಿಸಿ ನಗರಸಭೆಯಲ್ಲೆ ಖಾತೆ ಮಾಡಿಸಿ ಪ್ರಸ್ತುತ ಮಾನ್ಯ ಜಿಲ್ಲಾಧಿಕಾರಿಗಳಿಗೆ ಈ ಮೇಲಿನ ಅಕ್ರಮದ ಬಗ್ಗೆ ಲಿಖಿತ ದೂರು ನೀಡುತ್ತಿರುವುದು ವಿಪರ್ಯಾಸವೆ ಸರಿ…!
ಆಡಳಿತಾಧಿಕಾರಿಗಳ ಸಡಿಲವಾದ ಆಡಳಿತ , ಪೌರಾಯುಕ್ತರ ಅಕ್ರಮಗಳ ಆಟಾಟೋಪ , ಆರೋಗ್ಯ ನಿರೀಕ್ಷಕನಿಂದ ಬಡ್ತಿ ಕಂದಾಯಾಧಿಕಾರಿಯಾದ ಖಾತೆಗಳ ಬಗ್ಗೆ ಅರಿವಿಲ್ಲದ ಶರವಣನ ಖಾತೆ ಕರಾಮತ್ತು ಮತ್ತು ದಿಕ್ಕಿಲ್ಲದೆ ಸ್ಥಳ ಗುರುತಿಸಿ ದಾರಿ ತಪ್ಪಿಸಲು ಕಂದಾಯಾಧಿಕಾರಿಯ ಜೊತೆಗಾರ ಬಿ ಜಿ ಮಹದೇವಸ್ವಾಮಿ ನಗರಸಭೆಯ ಅವನತಿಗೆ, ಅವಸಾನಕ್ಕೆ , ಮುಂದೊಂದು ದಿನ ನಗರಸಭೆಯ ಆಸ್ತಿಯನ್ನೇ ಮಾರಲು ಮುನ್ನುಡಿ ಬರೆಯುತ್ತಿರುವರೆ.?
ಕಾದು ನೋಡಿ ಮುಂದಿನ ನಗರಸಭೆ ಕರ್ಮಕಾಂಡದಲ್ಲಿ…