ನಿಲುಗಡೆಯಾಗಿರುವ ರೈಲುಗಳ ಪುನರಾರಂಭಿಸಲು ಮನವಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.13: ಬಳ್ಳಾರಿ ಭಾಗದ ಜನತೆಯ ಪರವಾಗಿ ಹಾಗೂ ಬಿಜೆಪಿ ಪಕ್ಷದ ಪರವಾಗಿ ನಿಲುಗಡೆಯಾಗಿರುವ ರೈಲುಗಳನ್ನು ಪುನರಾರಂಭಿಸುವಂತೆ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾಸಮಿತಿ ಕೇಂದ್ರ ರೈಲ್ವೆ ಮಂತ್ರಿಗಳಾದ ವಿ.ಸೋಮಣ್ಣನವರಲ್ಲಿ ಮನವಿ ಮಾಡಿದೆ.
ರೈಲು ಸಂಖ್ಯೆ 07335 07336 ಬೆಳಗಾವಿ ಸಿಕಂದ್ರಾಬಾದ್ ಭದ್ರಾಚಲಂ ಬೆಳಗಾವಿ ದಿನನಿತ್ಯದ ಎಕ್ಸ್ಪ್ರೆಸ್ ರೈಲು, ರೈಲು ಸಂಖ್ಯೆ 07589 07590, ಕದರಿದೇವನಪಲ್ಲಿ ಬಳ್ಳಾರಿ ತಿರುಪತಿ, ಕದರಿದೇವನಪಲ್ಲಿ
ದಿನನಿತ್ಯದ ರೈಲು ರೈಲು ಸಂಖ್ಯೆ 06223 06224, ಶಿವಮೊಗ್ಗ ಬಳ್ಳಾರಿ ಚೆನ್ನೈ ಶಿವಮೊಗ್ಗ, ಬೈ ವೀಕ್ಲಿ ಎರಡು ದಿನದ ಎಕ್ಸ್ಪ್ರೆಸ್ ರೈಲು
ಈ ರೈಲುಗಳು ವಿಶೇಷ ರೈಲುಗಳಾಗಿ ಸಂಚರಿಸುತ್ತಿದ್ದು ನೈರುತ್ಯ ರೈಲ್ವೆ ಅಧಿಕಾರಿಗಳು ಕಾರಣಾಂತರದಿಂದ ಇವುಗಳನ್ನು ರದ್ದು ಮಾಡಿದ್ದಾರೆ ಕೂಡಲೇ ಈ ರೈಲುಗಳು ಪುನರಾರಂಭವಾಗಬೇಕು ಜೊತೆಗೆ
ರೆಗುಲರ್ ರೈಲುಗಳಾಗಿ  ಸಂಚರಿಸಬೇಕು ಬಳ್ಳಾರಿ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೇಕೇ ಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಬಳ್ಳಾರಿ ಮಾರ್ಗದಲ್ಲಿ ಬೆಂಗಳೂರಿಗೆ ಹೋಗಿ ಹಿಂದಕ್ಕೆ ಬರಲು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು, ಬಳ್ಳಾರಿ ಮಾರ್ಗದಲ್ಲಿ ಕಲ್ಬುರ್ಗಿ ಹಾಗೂ ಬೀದರ್ ಗೆ ಹೋಗಿ ಬರಲು ವಂದೇ ಭಾರತ್ ಇಲ್ಲವೇ ಎಕ್ಸ್ಪ್ರೆಸ್ ರೈಲು ಆರಂಭಿಸಲು ನೈರುತ್ಯ ರೈಲ್ವೆಗೆ ನಿರ್ದೇಶನ ನೀಡಲು ಸಚಿವರಲ್ಲಿ ಕೋರಲಾಗಿದೆ ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾಸಮಿತಿ ಅಧ್ಯಕ್ಷರಾದ ಕೆ.ಎಂ.ಮಹೇಶ್ವರಸ್ವಾಮಿ ತಿಳಿಸಿದ್ದಾರೆ.