ರೂಂಟು ರೀಡ್ ಪ್ರೊಜೆಕ್ಟ್ ಮಕ್ಕಳ ಕಲಿಕೆಗೆ ಸಹಕಾರಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜು.13: ಜೆ.ಎಸ್. ಡಬ್ಲ್ಯೂನವರು ಅನುಷ್ಠಾನಕ್ಕೆ ತಂದ ರೂಂ ಟು ರೀಡ್ ಪ್ರೊಜೆಕ್ಟ್ ಮಕ್ಕಳ ಕಲಿಕಾ ದೃಷ್ಟಿಯಿಂದ ವಿನೂತನ ಕಾರ್ಯಕ್ರಮವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿ  ಮಕ್ಕಳಿಗೆ ವಿವಿಧ ಚಿತ್ರ, ಬಣ್ಣ ಹಾಗೂ ಪಂಚತಂತ್ರಗಳಿಂದ ಕೂಡಿದ  ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು ಈ ಯೋಜನೆಯಲ್ಲಿ ಮಕ್ಕಳ ಕಲಿಕಾ ಮಟ್ಟವನ್ನು ಬಣ್ಣಗಳ ಸಹಾಯದಿಂದ ತಿಳಿಯಲಾಗುತ್ತದೆ.
ಪುಸ್ತಕ ಹಸಿರು, ಕೆಂಪು, ಕಿತ್ತಳೆ, ಬಿಳಿ, ನೀಲಿ, ಹಾಗೂ ಹಳದಿ ಬಣ್ಣಗಳಿಂದ ಕೂಡಿರುತ್ತವೆ.
ಹಸಿರು ಪ್ರಾರಂಭಿಕ ಹಂತವಾದರೆ ಹಳದಿ ಗರಿಷ್ಠ ಮಟ್ಟದ ಕಲಿಕೆ ಸೂಚಿಸುತ್ತದೆ.
ಇದು ಮಕ್ಕಳ ಕಲಿಕಾ ಮಟ್ಟದ ಅಳತೆಗೆ ಅನುಕೂಲ.ಆದ್ದರಿಂದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಹಲಕುಂದಿ ಕ್ಲಸ್ಟರ್ ಸಿ.ಆರ್. ಪಿ.ಶ್ರೀನಿವಾಸ ,ಕನ್ನಡ ಭಾಷೆ ಬೋಧಿಸುವ ಶಿಕ್ಷಕರಾದ ಬಸವರಾಜ, ಚನ್ನಮ್ಮ, ಸುಮತಿ, ವೈಶಾಲಿ, ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.