ಬೆಟ್ಟದಪುರದಲ್ಲಿ ಕೆಂಪೇಗೌಡ ಜಯಂತೋತ್ಸವದ ಸಂಭ್ರಮ
ಸಂಜೆವಾಣಿ ವಾರ್ತೆ
ಬೆಟ್ಟದಪುರ:ಜು.13:- ಗ್ರಾಮದಲ್ಲಿ ಗುರುವಾರ 515ನೇ ನಾಡಪ್ರಭು ಕೆಂಪೇಗೌಡ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳ್ಳಿಯ ರಥದ ಮೇಲೆ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಕೆಂಪೇಗೌಡ ಸ್ನೇಹ ಬಳಗದ ವತಿಯಿಂದ ಚಾಲನೆ ನೀಡಲಾಯಿತು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಗಾಸೆ ನೃತ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು, ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದರು.
ಬಳಿಕ ಸಭೆಯ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಿಳಗುಲಿ ನಾಗರಾಜ್ ಮಾತನಾಡಿ ಕೆಂಪೇಗೌಡರು ಒಬ್ಬ ದೂರದೃಷ್ಟಿಯ ನಾಯಕರಾಗಿದ್ದರು, ಅವರ ಕಾರ್ಯಗಳು ಇಂದಿಗೂ ಕರ್ನಾಟಕ ರಾಜ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತಿವೆ. ಅವರನ್ನು ಬೆಂಗಳೂರಿನ ನಿರ್ಮಾತೃ ಎಂದು ಗೌರವಿಸಲಾಗುತ್ತದೆ, ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಮುಖಂಡ ಹರೀಶ್ ಮಾತನಾಡಿ ನಾಡಪ್ರಭು ಕೆಂಪೇಗೌಡರ ಜೀವನ ಮತ್ತು ಸಾಧನೆಗಳು ಕರ್ನಾಟಕದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ.
ಅವರ ದೂರದೃಷ್ಟಿ, ನಾಯಕತ್ವ ಮತ್ತು ಸಮರ್ಪಣೆಯು ಬೆಂಗಳೂರನ್ನು ಭಾರತದ ಪ್ರಮುಖ ಮಹಾನಗರಗಳಲ್ಲಿ ಒಂದನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅಲ್ಲದೆ ಅವರಿಗೆ ಕೃಷಿ ಯಲ್ಲಿ ಇದ್ದ ಪ್ರೀತಿ ಇಂದಿಗೂ ಅನುಕರಣೆಯಾಗುತ್ತಿರುವುದು ವಿಶೇಷ ಎಂದರು.
ಕೆಂಪೇಗೌಡ ಜಯಂತೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ, ಕನ್ನಡ ಬಾವುಟಗಳು ರಾಜಸುತ್ತಿದ್ದವು.
ನಾರಾಯಣ ಗೌಡ, ಗೋವಿಂದೇಗೌಡ, ದೀಪು,ಜಯರಾಮೇಗೌಡ, ಮಹೇಶ್ ನಟರಾಜ್ ಮಂಜಣ್ಣ ಸಾಲಿಗ್ರಾಮ ಮಂಜಣ್ಣ ಚೇತನ್ ನಾಗರಾಜ್ ವೆಂಕಟೇಶ್ ಮಾಸ್ಟರ್ ಚಂದ್ರೇಗೌಡ, ನಾಗೇಗೌಡ , ರಾಜು, ಕುಮಾರ್ ಕೃಷ್ಣೇಗೌಡ ನಾಗರಾಜು ಗೋವಿಂದೇಗೌಡ, ಶಿವಣ್ಣಗೌಡ, ದೇವರಾಜ ಬಿಜೆ ದೇವರಾಜು, ಉದಯ್, ಚಂದ್ರು, ಗಿರಿಗೌಡ, ಹೊನ್ನೇಗೌಡ, ನಂದೀಶ, ಶರತ್, ಕಾರ್ತಿಕ್, ಉಮೇಶ್, ಮಹೇಶ್, ಗೋಪಾಲ, ಯೋಗೇಶ, ರಾಜೇಗೌಡ, ಕೆಂಗಪ್ಪ, ಪ್ರವೀಣ್, ಪ್ರತಾಪ, ಕೃಷ್ಣ ವಿನೋದ ಆದಿ ಮನು
ರಾಮೇಗೌಡ, ಗಣೇಶ, ರಾಜೇಶ್,ವಿನಯ್, ರಘು, ಸತೀಶ್ ಭಾಗವಹಿಸಿದ್ದರು.