ಕಮ್ಮಾರ ಸಮುದಾಯ ಭವನದಲ್ಲಿ ನಾಮಫಲಕ ಕಾರ್ಯಕ್ರಮ
ಸಂಜೆವಾಣಿ ನ್ಯೂಸ್
ನಂಜನಗೂಡು:ಜು.13:- ನಂಜನಗೂಡು ತಾಲ್ಲೂಕಿನ ಮಹದೇವನಗರದಲ್ಲಿ ಕಮ್ಮಾರ ಸಮುದಾಯ ಭವನದ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ನಂಜನಗೂಡು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಪಾಲ್ಗೊಂಡು, ನಾಮಫಲಕ ಅನಾವರಣ ಮಾಡಿ ಶುಭ ಹಾರೈಸಿದರು
ಮುಂದುವರೆದು ಮಾತನಾಡಿದ ಶಾಸಕ ದರ್ಶನ್ ದ್ರುವ ನಾರಾಯಣ್ ನಿಮಗೆ ನೀಡಿರುವ 17 ಕುಂಟೆ ಜಾಗದಲ್ಲಿ ಉತ್ತಮವಾದ ಸಮುದಾಯ ಭವನ ನಿರ್ಮಿಸಲು ನನ್ನ ಶಾಸಕರ ನದಿಯಿಂದ ಮತ್ತು ಸಂಸದರ ನಿಧಿಯಿಂದ ಅಂತಂತವಾಗಿ ಹಣ ಬಿಡುಗಡೆ ಮಾಡಿ ಉತ್ತಮವಾದ ಸಮುದಾಯ ಭವನ ನಿರ್ಮಿಸಲು ಸಹಕರಿಸುತ್ತೇನೆ ಎಂದರು ನಿಮ್ಮ ಸಮುದಾಯ ರೈತರ ಜೊತೆ ಒಡನಾಟ ಇಟ್ಟುಕೊಂಡವರು ಆಧುನಿಕ ಕೃಷಿ ಉಪಕರಣ ಬಂದಿದ್ದರಿಂದ ನಿಮ್ಮ ಕುಲಕಸುಬು ತೊಂದರೆ ಆಗಿದೆ ನೀವು ಕೂಡ ಮಕ್ಕಳಿಗೆ ಮೊದಲು ವಿದ್ಯಾಭ್ಯಾಸವನ್ನು ಕೊಡಿಸಿ ಶಿಕ್ಷಣದಿಂದ ಮುಂದುವರಿಯಬಹುದು ನಿಮ್ಮ ಸಮುದಾಯ ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಹಿಂದೆ ಉಳಿದಿದೆ ನಮ್ಮ ತಂದೆಯವರು ಕೊಟ್ಟ ಮಾತಿನಂತೆ ನಾನು ಕೂಡ ನಿಮ್ಮ ಜೊತೆಯಲ್ಲೇ ಇರುತ್ತೇನೆ ಎಂದರು ಆದ್ದರಿಂದ ನಿಮ್ಮ ಸಮುದಾಯದ ಮುಖಂಡರಾದ ರಂಗಸ್ವಾಮಿಗೆ ರಾಜಕೀಯದಲ್ಲಿ ಉನ್ನತ ಹುದ್ದೆ ನೀಡಿದ್ದೇವೆ ಮುಂದಿನ ದಿನಗಳಲ್ಲಿ ನಿಮ್ಮ ಜೊತೆ ನಾನು ಇರುತ್ತೇನೆ ಎಂದು ಭರವಸೆ ನೀಡಿದರು
ಸಮಾಜದ ಮುಖಂಡ ರಂಗಸ್ವಾಮಿ ಮಾತನಾಡಿ ನಮ್ಮ ಸಮುದಾಯದಲ್ಲಿ ಜಿಲ್ಲೆಯಲ್ಲಿ ತಾಲೂಕಿನಲ್ಲೂ ಯಾವುದೇ ಸಮುದಾಯ ಭವನ ಇಲ್ಲ ನಾವು ಕಡಿಮೆ ಜನಸಂಖ್ಯೆ ಇದ್ದರೂ ಕೂಡ ಕೊಟ್ಟ ಮಾತಿನಂತೆ ಚುನಾವಣೆಯಲ್ಲಿ ನಡೆದುಕೊಂಡಿದ್ದೇವೆ ಮುಂದಿನ ಕೂಡ ನಿಮ್ಮ ಜೊತೆಯಲ್ಲೇ ಇರುತ್ತೇವೆ ಏನು ಇವತ್ತು ನಮಗೆ ಸಮುದಾಯ ಭವನ ನಿರ್ಮಿಸಲು ನಾಮಫಲಕ ಅನಾವರಣ ಮಾಡಿದ್ದೀರಿ ಆದಷ್ಟು ಬೇಗ ನಮ್ಮ ಜನಾಂಗಕ್ಕೆ ಉತ್ತಮವಾದ ಸಮುದಾಯ ಭವನ ಕಟ್ಟಲು ಹಣ ಬಿಡುಗಡೆ ಮಾಡಿಕೊಡಬೇಕೆಂದು ಮತ್ತೊಮ್ಮೆ ಮನೆಯ ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ಲತಾಸಿದ್ದ ಶೆಟ್ಟಿ ರವರು, ಕೆ. ಮಾರುತಿ ದೊರೆಸ್ವಾಮಿ ನಾಯಕ ವಿಜಯ್ ಕುಮಾರ್ ಶ್ರೀನಿವಾಸ್ ಮೂರ್ತಿ ರವರು, ಶಿವಪ್ಪ ದೇವರು ಸದಸ್ಯರಾದ ಶಿವು, ಶೃತಿ ಅಶೋಕ್, ಬೇಬಿ ಜಾನ್ ನಾಗರಾಜ್ ಸೋಮು ರಂಗದಾಸು ರವರು, ಉಖಿ ರಂಗಸ್ವಾಮಿ, ಸುರೇಶ್, ಪ್ರಭು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.