ಕೆಲಸದಲ್ಲಿ ನಿರಾಸಕ್ತಿ ತೋರಿದರೆ ನಿರ್ದಾಕ್ಷಿಣ್ಯ ಕ್ರಮ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.13: ಸಾರ್ವಜನಿಕರ ಕೆಲಸದಲ್ಲಿ ನಿರಾಸಕ್ತಿ ತೋರಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ
ತಾಲ್ಲೂಕಿನ ಅಭಿವೃದ್ದಿ ದೃಷ್ಟಿಯಿಂದ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಎಚ್ಚರಿಕೆ ನೀಡಿದರು.
ಅವರು ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ರೇಷ್ಮೆ ಇಲಾಖೆಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಾಂತರ ಪೆÇಲೀಸ್ ಠಾಣೆಯ ಪಿಎಸ್‍ಐ ಸುಬ್ಬಯ್ಯ ವಿರುದ್ಧ ಅಸಭ್ಯ ವರ್ತನೆ, ಕರ್ತವ್ಯ ನಿರ್ಲಕ್ಷ್ಯದ ಮತ್ತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದು ಕೂಡಲೇ ಇವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ ಶಾಸಕರು ಅಧಿಕಾರಿಗಳು ತೊಂದರೆ ನೀಡಿದರೆ ಸಾರ್ವಜನಿಕರು ನನ್ನ ಕಚೇರಿಗೆ ಬಂದು ದೂರು ನೀಡುವಂತೆ ತಿಳಿಸಿದರು.
ಬಡ ಜನರಿಗಾಗಿ ಸ್ಲಂ ಬೋಡ್ರ್ನಲ್ಲಿ ನಿರ್ಮಿಸುತ್ತಿರುವ ಮನೆಗಳನ್ನು ಪೂರ್ಣಗೊಳಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡದೇ ಕಾಲಾಹರಣ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಶಾಸಕರು. ಸಾಲಸೋಲ ಮಾಡಿ ಒಂದು ಹಂತದವರೆಗೆ ಮನೆಗಳನ್ನು ನಿರ್ಮಿಸಿದ್ದು ಅವುಗಳನ್ನು ಪೂರ್ಣಗೊಳಿಸಲು ಪುರಸಭೆ, ಹಾಗೂ ನನ್ನ ಬಳಿಗೆ ಜನರು ಅಲೆಯುತ್ತಿದ್ದಾರೆ. ಸರ್ಕಾರ ಕೂಡಲೇ ಸ್ಲಂ ಬೋರ್ಡ್ ಗೆ ಅನುದಾನ ಒದಗಿಸಬೇಕು. ತಾಲ್ಲೂಕಿನ ಈಚಲುಗುಡ್ಡ ವಿದ್ಯುತ್ ಉಪ ವಿತರಣೆ ಕೇಂದ್ರ ನಿರ್ಮಾಣದ ಕಾಮಗಾರಿ ಬಗ್ಗೆ ಸಾಕಷ್ಟು ದೂರುಗಳು ಇರುವ ಕಾರಣ ಕೂಡಲೇ ಮರು ಟೆಂಡರ್ ಕೈಗೊಳ್ಳಬೇಕು ಎಂದು ಶಾಸಕರು ಸೂಚನೆ ನೀಡಿದರು. ನಾನು ಶಾಸಕನಾದ ಮೇಲೆ ಎಂಟು ಜನ ವಿದ್ಯುತ್ ತಂತಿ ಅವಘಡದಿಂದ ಸಾವನ್ನಪ್ಪಿದ್ದಾರೆ. ಪದೇ ಪದೇ ಚೆಸ್ಕಾಂ ಇಲಾಖೆಯಲ್ಲಿ ಇಂಥಹ ದೂರುಗಳು ಬರುತ್ತಿದ್ದರೂ ಹಳೆಯ ತಂತಿಗಳನ್ನು ಹಾಗೂ ಕಂಬಗಳನ್ನು ಬದಲಿಸಲು ಸೂಚಿಸಿದ್ದರೂ ಇನ್ನೂ ಹಲವು ಕಡೆಗಳಲ್ಲಿ ಈ ಕೆಲಸ ಆಗಿಲ್ಲ. ಜೀವಕ್ಕೆ ಬೆಲೆ ಇಲ್ಲವೇ. ಇನ್ನೂ ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಗೈರು ಹಾಜರಾದ ಅಧಿಕಾರಿಗಳ ವಿರುದ್ದ ಶಾಸಕರು ಗರಂ:-
ಕೆಡಿಪಿ ಸಭೆಗೆ ಕೈಗಾರಿಕಾ ವಿಸ್ತರಣಾಧಿಕಾರಿ, ಉಪ ಖಜನಾಧಿಕಾರಿ, ವಲಯ ಅರಣ್ಯಾಧಿಕಾರಿ, ಯೋಜನೆ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಕ್ಕೆ ಕೆರಳಿದ ಶಾಸಕರು ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೂ ಹಾಜರಾಗಲು ಆಗದ ಅಧಿಕಾರಿಗಳು ನನ್ನ ತಾಲ್ಲೂಕಿಗೆ ಅವಶ್ಯಕತೆಯಿಲ್ಲ. ಕೂಡಲೇ ಅವರುಗಳು ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ಅಬಕಾರಿ ಇಲಾಖೆಯ ವಿರುದ್ದ ದೂರುಗಳು ಬಂದಿದ್ದು ಅವುಗಳಿಗೆ ಉತ್ತರಿಸಲು ಅಬಕಾರಿ ನಿರೀಕ್ಷಕರೇ ಹಾಜರಾಗಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ನಿರೀಕ್ಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕ್ರೀಡಾಂಗಣದ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ:-
ಪಟ್ಟಣದ ಒಳಾಂಗಣ ಕ್ರೀಡಾಂಗಣ ಸಾಮಾಗ್ರಿ ಖರೀದಿಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು ಈ ಬಗ್ಗೆ ತನಿಖೆ ಮಾಡಬೇಕು. ಸಾಮಗ್ರಿಗಳ ಖರೀದಿಯಲ್ಲಿ ಮಾರುಕಟ್ಟೆ ದರಗಿಂತ ಮೂರು ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸಲಾಗಿದೆ. ಈ ಬಗ್ಗೆ ಇಲಾಖೆಯ ನಿರ್ದೇಶಕರ ಖರೀದಿ ಪ್ರಸ್ತಾವನೆಗೆ ತಿರಸ್ಕರಿಸಿದರು. ಹೊಸಹೊಳಲುನಲ್ಲಿ ಕಾಮಗಾರಿ ಮಾಡದೆ 70ಲಕ್ಷ ಬಿಲ್ ಮಾಡಿರುವುದಾಗಿ ಆರೋಪ ಮಾಡಿದರು.
ತತ್ಕಾಲ್ ಪೆÇೀಡಿ ಜತಗೆ ಹದ್ದು ಬಸ್ತು ಮಾಡಲು ಸೂಚನೆ:-
ರೈತರ ಜಮೀನಿನ ತತ್ಕಾಲ್ ಪೆÇೀಡಿಗಾಗಿ ಅರ್ಜಿ ಸಲ್ಲಿಸಿದರೆ ಹದ್ದುಬಸ್ತು ಮಾಡಿಕೊಡಲು ಸೂಚಿಸಿದ ಶಾಸಕರು ರೈತರನ್ನು ಪದೇ ಪದೇ ಅಲೆದಾಡಿಸುವ ಪದ್ದತಿಯನ್ನು ಕೈಬಿಡಬೇಕು. ನೀವು ಮಾಡಿರುವ ತಪ್ಪಿಗಾಗಿ ರೈತರು ಅಲೆದಾಡಬೇಕೇ ಎಂದು ಎಡಿಎಲ್‍ಆರ್ ಸಿದ್ದಯ್ಯ ರವರನ್ನು ಪ್ರಶ್ನಿಸಿದರು. ಕಂದಾಯದಲ್ಲಿ ಹಳೆ ದಾಖಲೆಗಳು ಲಭ್ಯವಿಲ್ಲದಿದ್ದರೆ ಮರು ಸೃಷ್ಠಿ ಮಾಡಿ ರೈತರಿಗೆ ಒದಗಿಸುವ ಕೆಲಸ ಮಾಡಿ ಎಂದರು. ಅಲ್ಲದೇ ಸರ್ಕಾರಿ ಜಾಗಗಳನ್ನು ದುರಸ್ಥಿ ಮಾಡಬೇಕು ಎಂದು ಸೂಚಿಸಿದರು. 1.60 ಲಕ್ಷ ತನಕ ರೈತರಿಗೆ ಸಾಲ ನೀಡಲು ಯಾವುದೇ ಗ್ಯಾರಂಟಿ ಇಲ್ಲ. ಮುದ್ರಾ ಯೋಜನೆಯಲ್ಲಿ 10 ಲಕ್ಷ ತನಕ ಗ್ಯಾರಂಟಿ ಇಲ್ಲದೆ ಸಾಲ ನೀಡುವಂತೆ ಸೂಚಿಸಿದರು. ತಾಲೂಕಿನಲ್ಲಿ ಹತ್ತು ಡೆಂಘೆ ಪ್ರಕರಣ ಪತ್ತೆಯಾಗಿದ್ದು. ಸೊಳ್ಳೆ ಉತ್ಪತ್ತಿಯ ತಾಣಗಳ ಪತ್ತೆ ಹಚ್ಚಿ ಸ್ವಚ್ಛತೆ ಮಾಡಬೇಕು. ಐದಕ್ಕಿಂತ ಹೆಚ್ಚು ದಿನಗಳ ಜ್ವರಕ್ಕೆ ಡೆಂಘೆ ಅನುಮಾನಿಸಿ ಪರೀಕ್ಷೆಗೊಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಘೆ ಸಮಸ್ಯೆಗೆ ಔಷಧಗಳ ಕೊರತೆಯಾಗದಂತೆ, ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ ಕಲ್ಪಿಸಿಕೊಳ್ಳಲು ಸೂಚನೆ ನೀಡಿದರು.
ಐದಾರು ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯನ್ನು ಹೆಚ್ಚುವರಿ ಅಂಗಡಿಗಳ ತೆರಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮೂರು ನಾಲ್ಕು ಕಿಮಿ ಅಂತರವಿರುವ ಗ್ರಾಮಗಳಿಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದರು. ಪುರಸಭೆಯಲ್ಲಿ ಹೆಚ್ಚು ಸಮಸ್ಯೆಗಳು ತಾಂಡವವಾಡುತ್ತಿವೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಮ್ಮ ಜವಾಬ್ದಾರಿ ಎಂಬುದನ್ನು ಅರಿತು ಕೆಲಸ ನಿರ್ವಹಿಸಬೇಕು. ಎಂದು ಎಚ್ಚರಿಕೆ ನೀಡಿದರು.
ಕೆಡಿಪಿ ಸಭೆಯಲ್ಲಿ ಉಪವಿಬಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಜಮೂರ್ತಿ, ತಾಪಂ ಇಓ ಸತೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.