ಮಹಾಸಭೆಗೆ ಕಾರ್ಯಕಲ್ಪ ನೀಡಲು ನಮ್ಮನ್ನು ಗೆಲ್ಲಿಸಿ: ಅಧ್ಯಕ್ಷ ಸ್ಥಾನದ ಅಭ್ಯರ್ಥಿ ನಂಜಪ್ಪ ಮನವಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.13- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಾಗು ನಿರ್ದೇಶಕರ ಸ್ಥಾನಗಳಿಗೆ ನಾವು ಸ್ಪರ್ಧೆ ಮಾಡಿದ್ದು, ಸಮಾಜದ ಮತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ಮಹಾಸಭೆಗೆ ಹೊಸ ಕಾರ್ಯಕಲ್ಪ ನೀಡಲು ಒಂದು ಅವಕಾಶ ನೀಡಬೇಕೆಂದು ಮಹಾಸಭಾ ಜಿಲ್ಲಾಧ್ಯಕ್ಷ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹಂಗಳ ನಂಜಪ್ಪ ಮನವಿ ಮಾಡಿದರು.
ನಗರದ ವಿವಿಧ ಬಡಾವಣೆಗಳು ಹಾಗೂ ಅಂಗಡಿ ಬೀದಿಯಲ್ಲಿರುವ ಮಹಾಸಭಾದ ಮತದಾರರನ್ನು ಭೇಟಿ ಮಾಡಿದ ಅವರು, ಜು. 21 ರಂದು ನಡೆಯಲಿರುವ ಚುನಾವಣೆ ಮತದಾನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಂಗಳ ನಂಜಪ್ಪ ಹಾಗೂ ನಿರ್ದೇಶಕರ ಸ್ಥಾನಕ್ಕೆ ನಮ್ಮ ತಂಡದವರು ಸ್ಪರ್ಧೆ ಮಾಡಿದ್ದು, ಹೆಚ್ಚಿನ ಬಹುಮತದಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಸಮಾಜದ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು.
ಈಗಾಗಲೇ ಗುಂಡ್ಲುಪೇಟೆ ತಾಲೂಕು ಅಧ್ಯಕ್ಷನಾಗಿ ಅನುಭವ ಹೊಂದಿದ್ದು, ರಾಜಕೀಯವಾಗಿ ಕಾಡಾ ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜಿಲ್ಲೆಯ ಜನರಿಗೆ ಚಿರಪರಿಚತನಾಗಿದ್ದೇನೆ. ಜಿಲ್ಲಾ ಕೇಂದ್ರದಲ್ಲಿ ಬಸವ ಭವನ ನಿರ್ಮಾಣ, ಬಸವೇಶ್ವರರ ಪುತ್ಥಳಿ ಸ್ಥಾಪನೆ, ಸಮಾಜದ ಮಕ್ಕಳಿಗೆ ಉಚಿತ ಹಾಸ್ಟೆಲ್ ನಿರ್ಮಾಣ ಸೇರಿದಂತೆ ಜಿಲ್ಲೆಯಲ್ಲಿರುವ ಪ್ರತಿಯೊಂದು ವೀರಶೈವ ಲಿಂಗಾಯತ ಸಮಾಜದ ಎಲ್ಲರನ್ನು ಮಹಾಸಭಾದ ಸದಸ್ಯರನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಎನ್‍ರಿಚ್, ಮುಖಂಡರಾದ ಕೆ.ವೀರಭದ್ರಸ್ವಾಮಿ, ಆರ್. ಪುಟ್ಟಮಲ್ಲಪ್ಪ, ನಿರ್ದೇಶಕ ಸ್ಥಾನದ ಆಕಾಂಕ್ಷಿಗಳಾದ ಆನಂದಸ್ವಾಮಿ, ಎಂ.ಪಿ.ಇಂದ್ರ, ಟಿ. ಗುರು, ಕೆ.ಜಿ. ಗುರುಸ್ವಾಮಿ, ಎನ್. ಚಂದ್ರು, ಪುರುಷೋತ್ತಮ್, ಬಸಪ್ಪ, ಎಂ. ಮಂಜೇಶ್, ಕೆ.ಜಿ. ಮಂಜುನಾಥ್, ಮಲ್ಲಿಕಾರ್ಜುನಪ್ಪ, ಕೆ.ಎಲ್. ಮಹದೇವಸ್ವಾಮಿ, ಎಸ್. ಮಹದೇವಸ್ವಾಮಿ, ಮಹೇಶ್‍ಪಟೇಲ್, ಮುರುಡೇಶ್ವರಸ್ವಾಮಿ, ವೈ.ಪಿ. ರಾಜೇಂದ್ರಪ್ರಸಾದ್, ಎಂ. ಲಿಂಗರಾಜಮೂರ್ತಿ ಜಿ.ಎನ್. ಶಿವಪ್ರಸಾದ್, ಎನ್. ಸತೀಶ್, ಸಿದ್ದರಾಜು ಮೊದಲಾದವರು ಇದ್ದರು.