2ಎ ಮೀಸಲಾತಿ ಸಿಗೋವರೆಗೂ ನಮ್ಮ ಹೋರಾಟ ನಿಲ್ಲುವದಿಲ್ಲ: ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು
ಹೂವಿನಹಿಪ್ಪರಗಿ :ಜು.13: ಪಂಚಮಸಾಲಿ ಸಮಾಜದ ಲಕ್ಷಾಂತರ ಬಾಂಧವರು ಮನೆ ಮಠಗಳನ್ನು ಬಿಟ್ಟು ನಿರಂತರವಾಗಿ 3 ವರ್ಷಗಳಿಂದ ಚಳುವಳಿ ಮಾಡುತ್ತ ಬಂದಿದ್ದೇವೆ. ಇಷ್ಟೇಲ್ಲ ಚಳುವಳಿಗಳು ಯಶಸ್ವಿಯಾಗಲು ನಿಮ್ಮಗಳ ನಾಯಕತ್ವ ಹಾಗೂ ನಿರಂತರ ಸಹಕಾರ ಇತ್ತು ಎಂಬುವದನ್ನು ಸಮಾಜದ ಬಾಂಧವರು ಮರೆಯಲು ಸಾಧ್ಯವಿಲ್ಲ ಎಂದು ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಪೂಜ್ಯ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು. ಹೂವಿನಹಿಪ್ಪರಗಿ ಸಮೀಪದ ಕುದರಿ ಸಾಲವಾಡಗಿ ಗ್ರಾಮದಲ್ಲಿ ನಡೆದ ಶಾಸಕರುಗಳ ಮನೆಯಲ್ಲಿ ಪಂಚಮಸಾಲಿ ಆಗ್ರಹ ಪತ್ರ ಶಾಸಕ ರಾಜುಗೌಡ ಪಾಟೀಲರಿಗೆ ನೀಡಿ ಅವರು ಮಾತನಾಡಿದರು. ಪೂರ್ವ ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿಯವರ ನೇತೃತ್ವದ ಸರ್ಕಾರ ನಮ್ಮೆಲ್ಲರ ಹೋರಾಟಕ್ಕೆ ಮಣಿದು ಕೋನೆಯ ಗಳಿಗೆಯಲ್ಲಿ ”2ಡಿ” ಎನ್ನುವಂತಹ ಹೋಸ ಪ್ರವರ್ಗವನ್ನು ಸೃಷ್ಟಿಸಿ ಮೀಸಲಾತಿಯ ಆದೇಶ ಪತ್ರವನ್ನು ಘೋಷಿಸಿತ್ತು ಆದರೆ ಅದು ಇನ್ನುವರೇಗೂ ಅನುಷ್ಠಾನಗೊಂಡಿಲ್ಲ ಎಂದ ಅವರು ನೂತನವಾಗಿ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಸರ್ಕಾರಕ್ಕೆ ನಾವು ನೀವು ಎಲ್ಲರೂ ಕೋಡಿ 2023ರ ಡಿಸೆಂಬರ್ 12 ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಗಳಿಗೆ ಆಗ್ರಹ ಮಾಡಲಾಗಿತ್ತು ಆದರೆ ಅವರು ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಇದುವರೆಗೂ ಸಂಬಂಧಪಟ್ಟ ಕಾನೂನಾತ್ಮಕ ಸಭೆಯನ್ನು ಸಹ ಮಾಡಿಲ್ಲ ವೆಂದು ಬೇಸರ ವೆಕ್ತಪಡಿಸಿದರು.ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ನಿಮ್ಮೆಲ್ಲರ ಸಹಕಾರದಿಂದ ನಾವುಗಳು ರಾಜ್ಯದ 12 ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಇಷ್ಟಲಿಂಗ ಪೂಜೆಯ ಮಾಡುವ ಮೂಲಕ ಸರ್ಕಾರದ ಗಮನ ಸೆಳೆಯಲು ಹೋರಾಟವನ್ನು 9 ತಿಂಗಳುಕಾಲ ಮಾಡುತ್ತ ಬಂದಿದ್ದೇವೆ ಆದರೆ ಇಲ್ಲಿಯವರೆಗೂ ಯಾವದೇ ಸ್ಪಂದನೆ ಸಹ ದೊರೆತಿಲ್ಲ ಎಂದು ಬೇಸರ ವೆಕ್ತಪಡಿಸಿದರು. ನಮ್ಮ ಸಮುದಾಯ ಚುನಾಯಿತ ಎಲ್ಲ ಪಕ್ಷಗಳ ಶಾಸಕರುಗಳು ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಂತಹ ಮೂರು ಅಧಿವೇಶನದಲ್ಲಿ ಸಮಾಜದ ಬಗ್ಗೆ ಧ್ವನಿ ಎತ್ತದೇ ಇರುವುದು ಸಮಾಜದ ಇರುವುದು ಸಮಾಜದ ಬಾಂಧವರ ಅಸಮಾಧಾನಕ್ಕೂ ಕಾರಣವಾಗಿದೆ. ಆದ್ದರಿಂದ ತಮ್ಮ ಮೇಲೆ ಸಮಾಜದ ಋಣಭಾರ ಇದೆ. ಶೀಘ್ರದಲ್ಲಿ ನಡೆಯುವ ಮುಂಗಾರು ಅಧಿವೇಶನದಲ್ಲಿ ಪಕ್ಷಾತೀತವಾಗಿ ನಮ್ಮ ಸಮಾಜದ ಪರವಾಗಿ ಎಲ್ಲ ಲಿಂಗಾಯತ ಒಳ ಪಂಗಡಗಳ [ಓಬಿಸಿ] ಮೀಸಲಾತಿಗಾಗಿ ಹಾಗೂ ನಿಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಮೀಸಲಾತಿ ವಂಚಿತ ಸಮುದಾಯಗಳ ಪರವಾಗಿ ತಮ್ಮ ಹಕ್ಕನ್ನು ಪ್ರತಿಪಾದಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ. ನಿಮ್ಮೆಲ್ಲರ ಒತ್ತಡಕ್ಕೂ ಸರ್ಕಾರ ಸ್ಪಂದಿಸದೇ ಇದ್ದರೆ ನಮ್ಮೊಂದಿಗೆ ನಿರಂತರ ಹೋರಾಟಕ್ಕೆ ಭಾಗವಹಿಸಿ ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡರು.ಶಾಸಕ ರಾಜುಗೌಡ ಪಾಟೀಲ ಮಾತನಾಡಿ ಇಂದು ನಮ್ಮ ಮನೆಗೆ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಪೂಜ್ಯ ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಹಾಗೂ ಸಮಾಜದ ಬಾಂಧವರು ಸೇರಿ ಪತ್ರ ಚಳುವಳಿ ಮಾಡಿ ನಮಗೆ ಆಗ್ರಹ ಮಾಡಿದ ಕಾರಣದಿಂದಾಗಿ ಮುಂದಿನ ಅಧಿವೇಶನದಲ್ಲಿ ಪಕ್ಷಾತೀತವಾಗಿ ಲಿಂಗಾಯತ ಪಂಚಮಸಾಲಿ-ಮಲೆಗೌಡ ಲಿಂಗಾಯತ ಉಪಸಮಾಜಗಳಿಗೆ [ಓಬಿಸಿ] ಮೀಸಲಾತಿ ªನೀಡುವಂತೆ ನಡೆಯುವ ಹೋರಾಟಕ್ಕೆ ನಾನು ಸಹ ಬೆಂಬಲಿಸುತ್ತೇನೆ ಹಾಗೂ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದರು. ಒಂದು ವೇಳೆ ಸರ್ಕಾರವು ಸೂಕ್ತವಾದ ಸ್ಪಂದನೆ ಮಾಡದೇ ಇದ್ದರೆ ಗುರುಗಳೊಂದಿಗೆ ಹಿಂದೆ ಮುಂದೆ ಎಂದಿಗೂ ಮೀಸಲಾತಿ ಸಿಗುವರೆಗೆ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷ ಬಿ,ಎಂ,ಪಾಟೀಲ, ಗುರು ಆಕಳವಾಡ, ಬಸವರಾಜ ಡೆಂಗಿ, ಬಾಪುಗೌಡ ಪಾಟೀಲ, ಶೇಖರಗೌಡ ಪಾಟೀಲ, ಶಂಕರಗೌಡ ಪಾಟೀಲ, ನಿಂಗನಗೌಡ ಪಾಟೀಲ, ಸಚಿನಗೌಡ ಪಾಟೀಲ, ಮಡು ಸಹುಕಾರ, ಅಪ್ಪಾಸಾಹೇಬಗೌಡ ಪಾಟೀಲ, ಅನೀಲಗೌಡ ಪಾಟೀಲ, ಬಾಳಾಸಾಹೇಬಗೌಡ ಪಾಟೀಲ,ಶ್ರೀಶೈಲ್ ಮುಳಜಿ, ಹಣುಮಂತ್ರಾಯಗೌಡ ಇದ್ದರು.
ನಮ್ಮ ಸಮಾಜಕ್ಕೆ 2ಎ ಮೀಸಲಾತಿಗಾಗಿ ನಮ್ಮ ಸಮಾಜದ ಓಳಿತಿಗಾಗಿ ನನ್ನ ಶಾಸಕ ಸ್ಥಾನಕ್ಕೆ ರಾಜನಾಮೇ ಕೊಡಲು ಸಿದ್ಧನಿದ್ದೇನೆ ಹೋರಾಟ ಮಾತ್ರ ನಿಲ್ಲುವದಿಲ್ಲ.
ರಾಜೂಗೌಡ ಪಾಟೀಲ ಶಾಸಕರು ದೇವರಹಿಪ್ಪರಗಿ ವಿಧಾನಸಭಾಕ್ಷೇತ್ರ
