ಕಾಲುವೆಗಳಿಗೆ ನೀರು ಹರಿಸಲು ಆಗ್ರಹ.
ಕೊಲ್ಹಾರ:ಜು.13: ಕೊಲ್ಹಾರ ಹಾಗೂ ಬ. ಬಾಗೇವಾಡಿ, ತಾಲ್ಲೂಕ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳಗಾರರ ಒಕ್ಕೂಟ ತಾಲೂಕಾ ಘಟಕದ ವತಿಯಿಂದ ಶುಕ್ರವಾರ ತಾಲೂಕ ದಂಡಾಧಿಕಾರಿ ಎಸ್.ಎಸ್ ನಾಯಕಲಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ ಕೊಲ್ದಾರ ಹಾಗೂ ಬ. ಬಾಗೇವಾಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ರೈತರ ಜಮೀನುಗಳಿಗೆ ತಕ್ಷಣದಿಂದಲೇ ಕಾಲುವೇಗಳಿಗೆ ನೀರು ಹರಿಸಬೇಕು.
ಕಾಲುವೇಗಳ ಹೂಳು ಎತ್ತುವ ಪ್ರಕ್ರಿಯೆ ನಡೆಯುತ್ತಿದ್ದು ಹೂಳೆತ್ತುವ ಪ್ರಕ್ರಿಯೆ ಸ್ಥಗಿತಗೊಳಿಸಿ ಕೂಡಲೇ ಕಾಲುವೇಗಳಿಗೆ ನೀರು ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳು ಇದ್ದರು.