ಡೆಂಘಿ ವಿರುದ್ಧ ಜಾಗೃತರಾಗಿರಿ :  ಡಾ. ಶಿವಕುಮಾರ್
ಸಂಜೆವಾಣಿ ವಾರ್ತೆ
ಹಿರಿಯೂರು.ಜು. 12 – ಇತ್ತೀಚಿಗೆ ಡೆಂಘಿ  ಜ್ವರವು  ಉಲ್ಬಣಗೊಳ್ಳುತ್ತಿದ್ದು ಇದರ ವಿರುದ್ಧ ಜಾಗೃತವಾಗಿರಬೇಕು ಎಂದು ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಶಿವಕುಮಾರ್ ಹೇಳಿದರು. ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಡೆಂಘಿ  ಜಾಗೃತಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಅವರು ಮಾತನಾಡಿದರು. ಹಗಲು ಹೊತ್ತಿನಲ್ಲಿ  ಈಡೀಸ್ ಎಂಬ ಸೊಳ್ಳೆಯು ಕಚ್ಚುವುದರಿಂದ ಡೆಂಘಿ ಹರಡುತ್ತದೆ, ಇದು ನಿಂತ ಹಳೆಯ ಕೊಳೆತ ನೀರಿನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ನಿಮ್ಮ ಮನೆಗಳ ಸುತ್ತಮುತ್ತ ಶುಚಿತ್ವವನ್ನು ಕಾಪಾಡಿಕೊಳ್ಳಿ ತೆಂಗಿನ ಚಿಪ್ಪು, ಟೈಯರ್, ಗಿಡಗಳ ಕುಂಡಗಳು ಇಂತಹ ಸ್ಥಳಗಳಲ್ಲಿ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂದು ತಿಳಿಸಿದರು. ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಹಾಕುವುದು ಮತ್ತು ಮಲಗಲು ಸೊಳ್ಳೆ ಪರದೆಗಳನ್ನು ಬಳಸುವುದು ಸುಸ್ತು ತಲೆನೋವು ಜ್ವರ ಕಂಡುಬಂದಲ್ಲಿ ಹತ್ತಿರದ ವೈದ್ಯರಿಗೆ ಸಂಪರ್ಕಿಸುವುದು ಸೂಕ್ತ ಎಂದರು .ಈ ಸಂದರ್ಭದಲ್ಲಿ ಡಾ. ರಾಘವೇಂದ್ರ, ಡಾ.ಚಂಪಾ,  ಬಸವರಾಜ್ , ಪ್ರಿಯ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ‌ ಉಪಸ್ಥಿತರಿದ್ದರು