ಧನಾತ್ಮಕ ಗುಣ  ಬೆಳೆಸಿಕೊಳ್ಳಲು ಶಾಲಾ ಸಂಸತ್ತು ಉತ್ತಮ ವೇದಿಕೆ- ಎಸ್ಪಿ.ಉಮಾ ಪ್ರಶಾಂತ್
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೩; ಪೊಲೀಸ್ ಪಬ್ಲಿಕ್ ಶಾಲೆಯ ಶಾಲಾ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭವು ಶಾಲಾ ಅವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಳೆದ ತಿಂಗಳು ನಡೆದ ವಿದ್ಯಾರ್ಥಿ ಪರಿಷತ್ತಿನ ಚುನಾವಣೆಯಲ್ಲಿ ಶಾಲೆಯ ಎಲ್ಲಾ ಮಕ್ಕಳುತಮ್ಮ ನಾಯಕರನ್ನು ಆರಿಸಿದ್ದರು. ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀಮತಿ ಉಮಾ ಪ್ರಶಾಂತ್  ಮುಖ್ಯ ಅತಿಥಿಯಾಗಿ ಭಾಗವಹಿಸಿ ದ್ದರು.  ಶಾಲೆಯ ಎಲ್ಲಾ ನಾಲ್ಕು ತಂಡಗಳಿಂದ ಕವಾಯತ್ತು ವಂದನೆ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ಶಾಲಾ ವಿದ್ಯಾರ್ಥಿ ಪರಿಷತ್ತಿನ ಎಲ್ಲಾ 12 ಸದಸ್ಯರಿಗೆ ಬ್ಯಾಡ್ಜ್, ಸ್ಯಾಶೆಗಳನ್ನು ನೀಡಿ ಹಾರೈಸಿದರು. ಪ್ರಾಂಶುಪಾಲರಾದ ಯತೀಶ್ ಹೆಚ್ ವಿ  ಎಲ್ಲಾ ಸದಸ್ಯರಿಗೆ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು ವೇಣುಗೋಪಾಲ್ ಈ.ಆರ್  ಶಾಲಾ ನಾಯಕನಾಗಿ ಮತ್ತು ಅನ್ವಯಿ ಎ ಶಾಲಾ ನಾಯಕಿಯಾಗಿ , ರಿಷಿಕ್ ಎನ್ ಜಾದವ್ ಕ್ರೀಡಾ ನಾಯಕನಾಗಿ ಪರಿಮಳ ಪ್ರಸಾದ್ ಜಿ ಸಾಂಸ್ಕೃತಿಕ ನಾಯಕಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಶಾಲಾ ನಾಯಕರ ಜೊತೆಗೆ  ಶಾಲೆಯ  ನಾಲ್ಕು ತಂಡಗಳ (ಕಾವೇರಿ, ನೇತ್ರಾವತಿ, ಶರಾವತಿ, ಕೃಷ್ಣ) ನಾಯಕ , ಉಪನಾಯಕರೂ ಗೌಪ್ಯತೆಯನ್ನು ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಡಿವೈಎಸ್ಪಿ ಪ್ರಕಾಶ್  ಪಿಬಿ  ಉಪಸ್ಥಿತರಿದ್ದರು.ವಿದ್ಯಾರ್ಥಿ ಪರಿಷತ್ತಿನ ನಾಯಕರು ಮತ್ತು ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್  ನಮ್ಮ ಪ್ರಜಾಪ್ರಭುತ್ವದ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿ ಸಂಸತ್ ಮಹತ್ವದ ಪಾತ್ರವಹಿಸುತ್ತದೆ . ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವಲ್ಲಿ, ಉತ್ತಮ ಕಲಿಕೆಯ ವಾತಾವರಣ ಕಲ್ಪಿಸುವಲ್ಲಿ ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿ ಸಂಸತ್ ವಿದ್ಯಾರ್ಥಿಗಳಿಗೆ ಪ್ರಮುಖ ವೇದಿಕೆಯಾಗಲಿದೆಯೆಂದು ಅಭಿಪ್ರಾಯಸಿದರು . ಈ ವಿದ್ಯಾರ್ಥಿ ಸಂಸತ್ತನ್ನು  ಮಕ್ಕಳು ಧನಾತ್ಮಕ ಗುಣಗಳನ್ನು  ಬೆಳೆಸಿಕೊಳ್ಳಲು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು
ಈ ಸಮಾರಂಭದಲ್ಲಿ ಪೋಷಕರು ಮತ್ತು ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಈ ಸಮಾರಂಭವನ್ನು ವಿದ್ಯಾರ್ಥಿಗಳಾದ ಚೈತನ್ಯ  ಆರ್.ಎಂ  ಮತ್ತು ಪರಿಣಿಕ ನಿರೂಪಿಸಿದರೆ,   ದರ್ಶನ್ ಎ ಸ್ವಾಗತಿಸಿದರು ಮತ್ತು ಶಾಲಾ ನಾಯಕಿ ಅನ್ವಯಿ ಎ ವಂದಿಸಿದರು.