ಮಕಂಜದ ವಿವಾಹಿತ ಮಹಿಳೆ ನಾಪತ್ತೆ
ಸುಳ್ಯ:ಮಕಂಜ ಗ್ರಾಮದ ಮಿತ್ತಡ್ಕ ಮೋಹನರವರ ಪತ್ನಿ ಶೋಭಾಲತರವರ ಮಂಗಳವಾರ ಮದ್ಯಾಹ್ನದಿಂದ ನಾಪತ್ತೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ.
ಶೋಭಾಲತಾರವರು ಕಾಣೆಯಾದ ಬಳಿಕ ಸಂಬಂಧಿಕರ ಮನೆ ಸೇರಿದಂತೆ ಊರಿನಲ್ಲಿಯೂ ಹುಡುಕಾಟ ನಡೆದಿದೆ. ಆದರೂ ಪತ್ತೆಯಾಗಲಿಲ್ಲ. ಹೀಗಾಗಿ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಸಂಪಾಜೆ ವಲಯದವರು ಬಂದು ಮನೆಯ ಬಾವಿಯಲ್ಲಿ ಹುಡುಕಾಡುವುದಕ್ಕಾಗಿ ಬಾವಿಯ ನೀರನ್ನು ಖಾಲಿ ಮಾಡತೊಡಗಿದರು. ಆಗ ಬಾವಿಯ ಸುತ್ತ ಮಣ್ಣು ಜರಿಯತೊಡಗಿತ್ತೆನ್ನಲಾಗಿದೆ. ಹೀಗಾಗಿ ಬಾವಿಯ ನೀರು ಖಾಲಿ ಮಾಡುವ ಪ್ರಕ್ರಿಯೆ ಕೈಬಿಟ್ಟರು. ಅಲ್ಲದೇ ಪೈಚಾರ್ ನಿಂದ ಮುಳುಗು ತಜ್ಞರು ಬಂದು ಇಳಿಯಲು ನೋಡಿದಾಗ ಬಾವಿ ಜರಿಯುತ್ತಿರುವುದರಿಂದ ಅವರು ನೀರಿಗೆ ಇಳಿಯಲಿಲ್ಲ. ಬಳಿಕ ಸುಳ್ಯದಿಂದ ಅಗ್ನಿಶಾಮಕ ದಳದವರು ಬಂದು ಪರಿಕರಗಳನ್ನು  ಹಾಕಿ ಬಾವಿಯನ್ನು ಶೋಧಿಸಿದರು. ಆದರೆ ಅದರಲ್ಲಿ ಮೃತದೇಹ ಪತ್ತೆಯಾಗಿರಲಿಲ್ಲ.ಗೀ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.