ಡೋಣಿನದಿಯಿಂದ ಜಲಾವೃತ ಬೆಳೆಗಳ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರಕ್ಕೆ ತಹಸೀಲ್ದಾರರಿಗೆ ಮನವಿ
ದೇವರಹಿಪ್ಪರಗಿ:ಸೆ.೨೮:ಡೋಣಿ ನದಿ ಅಕ್ಕಪಕ್ಕದ ಜಮೀನುಗಳೆಲ್ಲ ಮಳೆ ನೀರಿನಿಂದ ಹಾನಿಯಾಗಿದ್ದು, ತಕ್ಷಣವೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ಕೊಂಡಗೂಳಿ ಗ್ರಾಮದ ರೈತರು, ಸಾರ್ವಜನಿಕರು ಮನವಿ ಸಲ್ಲಿಸಿದರು.
ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡರಾದ ಎಸ್ ಎಂ ನಾಗಾವಿ ಹಾಗೂ ಶಿವು ಗೊಬ್ಬೂರ, ರೈತರು ಡೋಣಿ ನದಿ ಪಕ್ಕದಲ್ಲಿನ ಜಮೀನುಗಳೆಲ್ಲ ಮಳೆ ನೀರಿನಲ್ಲಿ ನಿಂತು ಹೋಗಿ ಬೆಳೆಯೆಲ್ಲ ಹಾಳಾಗಿವೆ. ಬೆಳೆದ ನಿಂತ ಬೆಳೆಯೆಲ್ಲ ಜಲಾವೃತ್ತಗೊಂಡಿರುವುದರಿAದ ಅನ್ನದಾತ ಸಂಕಷ್ಟಕಿಡಾಗಿದ್ದಾನೆ. ವರ್ಷಕ್ಕಾಗುವ ಗಂಜಿಗೋಸ್ಕರ ಕಷ್ಟಪಟ್ಟು ಬೆಳೆದ ಬೆಳೆಯೆಲ್ಲ ನೀರಲ್ಲಿ ನಿಂತಿರುವದರಿAದ ಮಮ್ಮಲ ಮರಗುವಂತಾಗಿದೆ. ಅದಕ್ಕಾಗಿ ಡೋಣಿ ನದಿ ಅಕ್ಕಪಕ್ಕದಲ್ಲಿನ ಜಮೀನುಗಳನ್ನು ತಕ್ಷಣವೇ ಸಮೀಕ್ಷೆ ಮಾಡಿಸಿ ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ನಂತರ ಗ್ರೇಡ್-೨ ತಹಸೀಲ್ದಾರ್ ಎಸ್ ಎಚ್ ರಾಠೋಡ ಅವರಿಗೆ ಮನವಿ ಸಲ್ಲಿಸಿ ಸರಕಾರಕ್ಕೆ ಕಳುಹಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ರೈತಮುಖಂಡರಾದ ಮಲಕಪ್ಪ ಮಲ್ಲಾ, ನವೀನ ಕುಲಕರ್ಣಿ, ದಾವಲಸಾಬ ಕಾತ್ರಾಳ, ಯಾಶೀನ ಯಲಗಾರ, ಸಿದ್ದನಗೌಡ ಪಾಟೀಲ, ಬಸನಗೌಡ ಪಾಟೀಲ, ಗುರಲಿಂಗಪ್ಪಗೌಡ ಪಾಟೀಲ, ರುದ್ರಪ್ಪ ಹಂಗರಗಿ, ಶರಣಗೌಡ ಪಾಟೀಲ, ಎಲ್ ಎಸ್ ಪಾಟೀಲ, ಎನ್ ಎಂ ಪಾಟೀಲ, ಅನೀಲ ಕೆಂಬಾವಿ, ರೆಣುಕಾ ದಂಡೋತಿ, ಹಣಮಂತ ಕಲ್ಲೂರ, ಪ್ರಕಾಶ ಕೊಂಡಗೂಳಿ, ಶಂಕರ ಹೆಬ್ಬಾಳ, ಬಾಪು ಚೌಧರಿ, ಶಿವಪ್ಪ ಚೌಧರಿ, ಸಿದ್ದನಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಅಶೋಕ ಹಿರೇಕುರುಬರ, ನಾನಸಿಂಗ ಕುಲಕರ್ಣಿ, ಮಡಿವಾಳಪ್ಪ ಸಿಂದಗೇರಿ, ಶಿವಕುಮಾರ ಗೊಬ್ಬೂರ, ಮಲ್ಲಮ್ಮ ಸಿಂದಗೇರಿ, ಶರತ್ ಸಿಂದಗೇರಿ, ಶಾಂತಗೌಡ ಸಿಂದಗೇರಿ, ಶ್ರೀಶೈಲ ಗೊಬ್ಬೂರ ಎಸ್ ಎಸ್ ಮಲ್ಲಾಬಾದಿ ಸೇರಿದಂತೆ ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.