ಬಸ್ ತಂಗುದಾನದಲ್ಲಿ ಮರಿಗಳ ಜೊತೆ ನಾಯಿಯನ್ನು ತಂದು ಬಿಟ್ಟರು !
ಸುಳ್ಯ:ಮರಿ ಹಾಕಿದ ತಾಯಿ ನಾಯಿಯನ್ನು ಬಸ್ ತಂಗುದಾನದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಎಡಮಂಗಲ ಸಮೀಪದ ಬಸ್ ತಂಗುದಾನದಲ್ಲಿ ನಡೆದಿದೆ.
ಸುಮಾರು ೮ ಮರಿಗಳನ್ನು ಹಾಗೂ ಅದರ ತಾಯಿ ನಾಯಿಯನ್ನು ಎಡಮಂಗಲದ ಸುಳಂತ್ತಡ್ಕ ಸಮೀಪದ ಮಹಾಕಾಳಿ ಬಸ್ ತಂಗುದಾನದಲ್ಲಿ ಕೆಲ ದಿನಗಳ ಹಿಂದೆ ತಂದು ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು ೧೦-೨೦ ದಿನಗಳು ಕಳೆದಿರುವ ಮರಿಗಳು ತಾಯಿ ನಾಯಿ ಜೊತೆಗೆ ಬಸ್ ತಂಗುದಾನದಲ್ಲೇ ದಿನ ಕಳೆಯುತ್ತಿರುವ ದೃಶ್ಯವನ್ನು ಸಾರ್ವಜನಿಕರು ನಿತ್ಯ ನೋಡುವಂತಾಗಿದೆ. ಎಲ್ಲೋ ಮರಿ ಹಾಕಿರುವ ನಾಯಿಯನ್ನು ಮರಿಗಳ ಜೊತೆಗೆ ಇಲ್ಲಿ ತಂದು ಬಿಟ್ಟು ಹೋಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂತಹ ಕೃತ್ಯ ಎಸಗಿದ ವ್ಯಕ್ತಿಗಳ ನಡೆಯನ್ನೂ ಖಂಡಿಸಲಾಗಿದೆ.