ಸುಂದರ ನಗರವಾಗಿಸಲು ಕ್ರಮ:ಗೊಳಸಂಗಿ
ಮುದ್ಧೇಬಿಹಾಳ :ಸೆ.೨೮: ಪಟ್ಟಣದ ಬಸ್ ನಿಲ್ದಾಣದಿಂದ ಮುಲ್ಲಾರವರ ಆಸ್ಪತ್ರೆಗೆ ಹಾಯ್ದು ಹೋಗುವ ಕಾಲ್ನಡಿಗೆ ರಸ್ತೆಯ ತುಂಬೆಲ್ಲಾ ಶೌಚಾಲಯ ಹಾಗೂ ಇನ್ನೀತರ ನೀರು ಹರಿಯುವದರಿಂದ ರಸ್ತೆ ಸಂಪೂರ್ಣವಾಗಿ ಕೊಳಚೆ ಇರುವದನ್ನು ಗಮನಿಸಿದ ಪುರಸಭೆ ಆಡಳಿತ ಮಂಡಳಿ ಕೂಡಲೇ ಕ್ರಮ ಕೈಗೊಂಡು ರಸ್ತೆಯ ತುಂಬೇಲ್ಲಾ ಪಿವರ್ ಬ್ಲಾಕ್ ಗಳನ್ನು ಹೊಂದಿಸಿ, ಗೋಡೆಗೆ ಸುಣ್ಣ ಬಣ್ಣವನ್ನು ಬಡಿದು ಸುಂದರ ನಗರವನ್ನಾಗಿ ಮಾಡಲು ಶ್ರಮ ಪಡುತ್ತೇನೆ ಎಂದು ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಬಜಾರಗೆ ಹೊಗುವ ಪಾದಚಾರಿ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಈ ರಸ್ತೆಯ ಮುಖಾಂತರ ಬಜಾರಗೆ ಹೋಗಲು ಅನುಕೂಲವಾಗುತ್ತದೆ, ಆದರೆ ಗಲೀಜು ಇರುವದರಿಂದ ಸಾರ್ವಜನಿಕರಿಗೆ ತೀರುಗಾಡಲು ತೊಂದರೆಯಾಗುತ್ತಿತ್ತು , ಸದ್ಯ ಸಮಸ್ಯೆ ಬಗೆಹರಿದಿದೆ, ಕೌಂಪಾAಡ್ ತುಂಬ ವಿವಿಧ ಸಾಂಸ್ಕ್ರತಿಕ ಚಿತ್ರಗಳನ್ನು ಬರೆದು ಸುಂದರವಾಗಿ ಕಾಣುವಂತೆ ಮಾಡುತ್ತೇವೆ, ಮತ್ತು ಸಿಸಿ ಕ್ಯಾಮರಾವನ್ನು ಕೂಡಿಸುವ ವ್ಯವಸ್ಥೇ ಮಾಡುತ್ತೇವೆ ಎಂದು ವಿವರಿಸಿದರು.
ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ ಬಹಳ ದಿನಗಳಿಂದ ಬಸ್ ನಿಲ್ದಾಣದಿಂದ ಬಜಾರಗೆ ಸಂಚರಿಸುವ ರಸ್ತೆ ಬಹಳ ದಿನಗಳಿಂದ ಸ್ವಚ್ಚತೆ ಇಲ್ಲದೆ ಇರುವದರಿಂದ ಜನಸಾಮಾನ್ಯರಿಗೆ ತೊಂದರೆಯಾಗುವದನ್ನು ಗಮನಿಸಿ ರಸ್ತೆಯನ್ನು ಸುಂದರವನ್ನಾಗಿ ಮಾಡಲು ಪುರಸಭೆ ಅನುದಾನದಲ್ಲಿ ಪಿವರ್ ಬ್ಲಾಕ್ ಹೊಂದಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ, ಸದ್ಯ ಬಸ್ ನಿಲ್ದಾಣದ ಮುಂದುಗಡೆ ಪುರಸಭೆ ವತಿಯಿಂದ ಸುಲಭ ಶೌಚಾಲಯ ಮಾಡುತ್ತೇವೆ, ನಂತರ ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ತೇರುವುಗೊಳಿಸುತ್ತೇವೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸಮೀರ್ ದ್ರಾಕ್ಷಿ, ರಪೀಕ್ ದ್ರಾಕ್ಷಿ,ರಪೀಕ್ ಮೂಲಿಮನಿ,ಬಾಪ್ ಡವಳಗಿ,ಅಜರುದ್ದಿನ್ ಮೂಲಿಮನಿ,ಬಬ್ಬು ಹುಣಚಗಿ.ಮುನ್ನಾ ಮಕಾಂದಾರ ಇನ್ನೀತರರು ಇದ್ದರು.