ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ;ಜಿ.ಎಂ.ಗುರುಪ್ರಸಾದ
ಸೈದಾಪುರ:ಸೆ.೨೮:ಅನುಭವಿ ನುರಿತ ಉಪನ್ಯಾಸಕರು ನೀಡಿರುವ ಸಲಹೆ ಸೂಚನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆದುಕೊಂಡಾಗ ಮಾತ್ರ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ ಎಂದು ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ ಅಭಿಪ್ರಾಯಪಟ್ಟರು.
ಪಟ್ಟಣದ ಮಲ್ಹಾರ ಕಾರಡ್ಡಿ ಬಸವಂತರಾಯ ಮತ್ತು ಸಿದ್ದಪ್ಪ ಸ್ಮಾರಕ ವಿದ್ಯಾ ವರ್ಧಕ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾ ವರ್ಧಕ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಿಚಾರ ಸಂಕಿರ್ಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಯಾದಗಿರಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮನೋಹರ ನಂದೇಪಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಉತ್ತಮ ಸಾಧನೆಗೆ ಪಠ್ಯಕ್ರಮದ ಸಂಪೂರ್ಣ ಮಾಹಿತಿ ಮುಖ್ಯವಾಗಿದೆ. ಇದನ್ನು ವಿಚಾರ ಸಂಕೀರ್ಣದಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ವಿದಧ ಕಾರ್ಯಕ್ರಮ ಉಪನ್ಯಾಸಕರು ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಉಪನ್ಯಾಸಕ ಮನೋಹರ ನಂದೇಪಲ್ಲಿ ಮಾತನಾಡಿ, ಉತ್ತಮ ಸಾಧನೆಗೆ ಸತತ ಪ್ರಯತ್ನ ಅತಿ ಮುಖ್ಯವಾಗಿದೆ. ಪಠ್ಯ ವಸ್ತುವನ್ನು ಪರೀಕ್ಷೆಗೆ ಸಿಮೀತಗೊಳಸದೆ ಅರ್ಥವತ್ತಾದ ಕಲಿಕೆಯೊಂದಿಗೆ ವಿದ್ಯಾರ್ಥಿಗಳು ಪ್ರಯತ್ನ ಮಾಡಿದಾಗ ಅಂಕಗಳ ಜೊತೆಗೆ ಜ್ಞಾನವಂತರು ನಾವಾಗುತ್ತೇವೆ. ಬದಲಾದ ಪರೀಕ್ಷೆ ವಿಧಾನದಲ್ಲಿ ಶೃಜಶೀಲತೆ ಹಾಗೂ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಕಿವಿ ಮಾತುಗಳನ್ನು ಹೇಳಿದರು. ಉಪನ್ಯಾಸಕರಾದ ಚಂದ್ರಶೇಖರ ಡೊಣ್ಣೆಗೌಡ, ಶಾಂತಲ.ಎನ್, ರಾಜಶೇಖರ ಪಾಟೀಲ, ಇಂದಿರ ತೂರೆ, ಸದಾಶಿವ ಸೇರಿದಂತೆ ಇತರರಿದ್ದರು.