ಚಿತ್ರಕಲೆ ಮಕ್ಕಳ ಸಹಜ ಅಭಿವ್ಯಕ್ತಿಗೆ ಪೂರಕ
ಕಲಬುರಗಿ:ಜು.12: ಮಕ್ಕಳ ಸಹಜ ಅಭಿವ್ಯಕ್ತಿಗೆ ಚಿತ್ರಕಲೆ ಪ್ರಭಾವಶಾಲಿ ಮಾಧ್ಯಮವಾಗಿದ್ದು ಚಿತ್ರಕಲಾ ಶಿಕ್ಷಕರ ಹಾಗೂ ಪಾಲಕರ ಪ್ರೋತ್ಸಾಹ ಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಅಪರ ಆಯುಕ್ತ ಡಾ ಆಕಾಶ ಎಸ್ ಹೇಳಿದರು.
“ಬಯಲ ಬೆಳಕು” ಪ್ರೊ. ವಿ.ಜಿ. ಅಂದಾನಿ ಅವರ 75ನೇ ವರ್ಷದ ವಜ್ರಮಹೋತ್ಸವದ ಸಮಾರಂಭ ನಿಮಿತ್ತ ಹಮ್ಮಿಕೊಂಡ ಮಕ್ಕಳ ಚಿತ್ರಕಲಾ ಚಿತ್ರವನ್ನು ಚಿತ್ರ ಬರೆದು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಠ್ಯದ ಜತೆಗೆ ಇಂತಹ ಸೃಜನಶೀಲತೆಯುಳ್ಳ ಕಾರ್ಯಕ್ರಮಗಳು ಪ್ರಶಂನಾರ್ಹ ಎಂದ ಅವರು ಇಲಾಖೆ ಮಕ್ಕಳ ಸರ್ವತೋಮುಖ ಏಳಿಗೆಗೆ ಬದ್ಧವಾಗಿದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ ಎಂ ಎಸ್. ಮೂರ್ತಿ ಮಾತನಾಡಿ ಚಿತ್ರಕಲೆ ಅಕ್ಷರದ ತಾಯಿ ಎಂದು ಬಣ್ಣಿಸಿದರು.ಇಂತಹ ಸ್ಪರ್ಧೆಗಳು ಆಹ್ಲಾದಕರ ವಾತಾವರಣದಲ್ಲಿ ಮಕ್ಕಳ ಸೃಜನಶೀಲತೆಯನ್ನು ಅರಳಿಸಬಲ್ಲವು ಎಂದರು.
ಅಧ್ಯಕ್ಷತೆ ನಿವೃತ್ತ ಚಿತ್ರಕಲಾ ವಿಷಯ ಪರಿವೀಕ್ಷಕ ಟಿ. ದೇವೆಂದ್ರವಹಿಸದ್ದರು. ಡಾ. ವಿ.ಜಿ ಅಂದಾನಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಬಸವರಾಜ ಎಲ್.ಜಾನೆ, ಹಿರಿಯ ಚಿತ್ರಕಲಾವಿದೆ ಡಾ ಪೂರ್ಣಿಮಾ ಪಾಟೀಲ ವೇದಿಕೆ ಮೇಲೆ ಇದ್ದರು.
ಕಿರಣ ಪಾಟೀಲ ಪ್ರಾರ್ಥಿಸಿದರು. ರಾಶಿ ಪಾಟೀಲ ಸ್ವಾಗತಿಸಿದರು. ಸೂರ್ಯಕಾಂತ ನಂದೂರ ಪ್ರಾಸ್ತಾವಿಕ ಮಾತನಾಡಿದರು. ಶಾಂತಮಲ್ಲ ಶಿವಭೊ ನಿರೂಪಿಸಿದರು. ದೌಲತರಾಯ ದೇಸಾಯಿ ವಂದಿಸಿದರು. ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಮುದ್ದಾದ ಚಿತ್ರಗಳನ್ನು ಬಿಡಿಸಿದರು.