ಪತ್ರಕರ್ತ ವೆಂಕಟೇಶ್ ಮಾನು ನಿಧನ:ನುಡಿನಮನ
ಕಲಬುರಗಿ:ಜು.12:ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ವೆಂಕಟೇಶ್ ಮಾನು ಅವರು ನಿಧನರಾಗಿದ್ದು, ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ, ಎಸ್.ಬಿ. ಜೋಶಿ, ಡಿ. ಶಿವಲಿಂಗಪ್ಪ, ಡಾ. ಶಿವರಂಜನ್ ಸತ್ಯಂಪೇಟೆ, ದೇವೆಂದ್ರಪ್ಪ ಅವಂಟಿ, ಭವಾನಿಸಿಂಗ್ ಠಾಕೂರ್, ಸಿದ್ದಣ್ಣ ಮಾಲಗಾರ್, ಸಂಗಮನಾಥ್ ರೇವತಗಾಂವ್, ಬಿ.ವಿ. ಚಕ್ರವರ್ತಿ, ಮಹೇಶ್ ಕುಲಕರ್ಣಿ, ಸುಭಾಷ್ ಬಣಗಾರ್ ಮುಂತಾದವರು ಉಪಸ್ಥಿತರಿದ್ದರು.