ಮಹಿಳಾ ಸಬಲೀಕರಣಕ್ಕೆ ಮಹಾನ್ ಪುರುಷರ ಕೊಡುಗೆ ಅಪಾರ
ಹುಮನಾಬಾದ್:ಜು.12:ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ವಿಶ್ವ ಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿ ಅನೇಕ ಮಹಾನ್ ಪುರುಷರು ನೀಡಿರುವ ಕೊಡುಗೆ ಅಪಾರ ಎಂದು ಬೀದರ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಮಹಾದೇವಿ ಹೆಬ್ಬಾಳೆ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವೀರಭದ್ರೇಶ್ವರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ದೇಶಿಸಿ ಮಾತನಾಡಿದರು.
12 ನೇ ಶತಮಾನದ ಶ್ರೇಷ್ಠವಚನಕಾರ ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಕಾಯಕದ ಮಹತ್ವವನ್ನು ಹಾಗೂ ಮಹಿಳೆಯರಿಗೆ ದಕ್ಕಬೇಕಾದ ಪ್ರಾತಿನಿಧ್ಯದ ನೀಡಿ, ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ ಮೊದಲ ದಾರ್ಶನಿಕ. ಹೀಗಾಗಿ ಮಹಿಳೆಯರು ಮಹಾನ್ ಪುರುಷರ ತತ್ವ ಆದರ್ಶಗಳು ಮೈಗೂಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಎನ್ ಎಸ್ ಎಸ್ ಅಧಿಕಾರಿ ಡಾ. ಜಯಕುಮಾರ ಸಿಂಧೆ, ಎನ್ ಎಸ್ ಎಸ್ ಸಂಯೋಜಕ ಶಾಂತಕುಮಾರ, ಸಂಪತಕುಮಾರಿ, ಜಯಶ್ರೀ ಶಟ್ಟಿ, ಡಾ. ಪೆದ್ದಪ್ಪ, ರಾಜಾಬಾಯಿ, ಡಾ. ರವಿ ನಾಯಕ ಸೇರಿ ಅನೇಕರಿದ್ದರು.