ಜನತಾ ದರ್ಶನ ಕಾರ್ಯಕ್ರಮಕ್ಕೆ ಶಾಸಕ ಡಾ.ಜಾಧವ ಚಾಲನೆ
ಚಿಂಚೋಳಿ, ಜು.12- ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ ಶಾಸಕರಾದ ಡಾ.ಅವಿನಾಶ ಜಾಧವ, ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪುರಸಭೆ ಮಟ್ಟದ ಜನತಾ ದರ್ಶನ ಜನಸ್ಪಂದನ ಕಾರ್ಯಕ್ರಮಕ್ಕೆ ಸಸಿಗೆ ನೀರ್ ಹಾಕುವ ಮುಖಾಂತರ ಶಾಸಕರಾದ ಡಾ.ಅವಿನಾಶ ಜಾಧವ, ಅವರ ಚಾಲನೆ ನೀಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಪುರಸಭೆ ವ್ಯಾಪ್ತಿಯ 23 ವಾರ್ಡ್ ಗಳ ಸಮಸ್ಯೆಗಳನ್ನು ಆಲಿಸಿದರು ನಂತರ ಅವರು ಮಾತನಾಡಿ ಪುರಸಭೆ ಸಮಸ್ಯೆಗಳ ಬಗ್ಗೆ ಜನರು ನನ್ನತ್ರ ಬೇಜಾರಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದು ಮತ್ತು ವಿವಿಧ ಸಮಸ್ಯೆಗಳನ್ನು ಕೂಡಲೇ ಪುರಸಭೆ ವ್ಯಾಪ್ತಿಯ ಜನರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಆನಂದ್ ಟೈಗರ್ ಅವರು ಮಾತನಾಡಿ ಚಿಂಚೋಳಿ ಪುರಸಭೆಯಲ್ಲಿ ಜನರ ಸಮಸ್ಯೆಗಾಗಿ ಜನಸ್ಪಂದನ ಕಾರ್ಯಕ್ರಮ ಮಾಡಿದ್ದು ಸ್ವಾಗತಿಸುತ್ತೇನೆ ಆದರೆ ಈ ಜನಸ್ಪಂದನ ಕಾರ್ಯಕ್ರಮ ಬರೀ ಕಾಟಾಚಾರಕ್ಕೆ ಆಗಬಾರದು, ಜನರ ಸಮಸ್ಯೆಗಳನ್ನು ಆದಷ್ಟು ಬೇಗನೆ ಈ ಕಾರ್ಯಕ್ರಮ ಮೂಲಕ ಬಗೆಹರಿಸಬೇಕು ಏಕೆಂದರೆ ಪುರಸಭೆಯಲ್ಲಿ ವಿವಿಧ ವಾಡ್ರ್ಗಳಲ್ಲಿ ಜನರು ನೀರಿನ ಅಹಂಕಾರವಿದ್ದು ಬಹಳಷ್ಟು ನೀರಿನ ತೊಂದರೆಯಾಗುತ್ತಿದ್ದು ಮತ್ತು ಹೌಸಿಂಗ್ ಬೋರ್ಡ್ ಮನೆ ನಿರ್ಮಾಣ ಮಾಡುತ್ತಿದ್ದಾರೆ ಈ ಮನೆ ನಿರ್ಮಾಣ ಕಾಮಗಾರಿ, ಸಂಪೂರ್ಣ ಕಳಪೆಯಾಗಿದ್ದು ಈ ಕಾಮಗಾರಿಯ ಬಗ್ಗೆ ಅಧಿಕಾರಿಗಳಬಲ್ಲೆ ಯಾವುದೇ ಒಂದು ಎಸ್ಟಿಮೇಟ್ ಇಲ್ಲ ಯಾವುದೇ ಒಂದು ಮಾಹಿತಿ ಇಲ್ಲ ಪುರಸಭೆ ಅಧಿಕಾರಿಗಳಿಗೆ ಎಸ್ಟಿಮೇಟ್ ಇಲ್ಲದೆ ಕಾಮಗಾರಿ ಮಾಡುತ್ತಿದ್ದು, ಹಾಗಾಗಿ ಕೂಡಲೇ ಶಾಸಕರು ಇದರ ಬಗ್ಗೆ ಗಮನ ಹರಿಸಿ ಲ್ಯಾಂಡ್ ಆರ್ಮಿ ನಿರ್ಮಿಸುತ್ತಿರುವ ಮನೆಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರೇಡ 2 ತಹಶೀಲ್ದಾರ್ ವೆಂಕಟೇಶ್ ದುಗ್ಗನ್, ಪುರಸಭೆ ಅಧಿಕಾರಿಗಳಾದ ಕಾಶಿನಾಥ ಧನ್ನಿ, ಮತ್ತು ವಿವಿಧ ವಾರ್ಡಿನ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು