ಕೊಲೆ ಯತ್ನ: ಆರೋಪಿ ಬಂಧನ
ಕಲಬುರಗಿ,ಜು.12-ನಗರದ ಗಂಜ್ ಕಾಲೋನಿಯ ನಗರೇಶ್ವರ ಶಾಲೆಯ ಹತ್ತಿರದ ಜನತಾ ಮೋಟರ್ಸ್ ಕಚೇರಿಯಲ್ಲಿ ಹಣದ ವ್ಯವಹಾರ ವಿಷಯವಾಗಿ ನಡೆದ ಜಗಳದಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಚೌಕ್ ಪೊಲೀಸರು ಬಂಧಿಸಿದ್ದಾರೆ.
ಹೌಸಿಂಗ್ ಬೋರ್ಡ್ ಕಾಲೋನಿಯ ಮಹ್ಮದ್ ಸಲೀಂ ತಂದೆ ಖಾಜಾಮಿಯಾ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈತ ಹಣಕಾಸಿನ ವಿಷಯದಲ್ಲಿ ಅಕ್ಬರ್ ಭಾಗ್ ಕಾಲೋನಿಯ ಮಹೆಬೂಬ್ ಅಲಿ ಖಾನ್ ಜೊತೆ ಜಗಳ ತೆಗೆದು ಮಹೆಬೂಬ್ ಅಲಿ ಖಾನ್ ಸಹೋದರ ಮಹ್ಮದ್ ಇಮ್ರಾನ್ ಖಾನ್ ಮತ್ತು ಅಬ್ದುಲ್ ಬಾಸೀತ್‍ಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಈ ಸಂಬಂಧ ಮಹೆಬೂಬ್ ಅಲಿ ಖಾನ್ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಚೌಕ್ ಪೊಲೀಸರು ಆರೋಪಿ ಮಹ್ಮದ್ ಸಲೀಂನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.