ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಕೊಲ್ಹಾರ:ಜು.12: ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಯುಕೆಪಿಯ ಪ್ರವಾಸಿ ಮಂದಿರ ಹತ್ತಿರ ಹುಬ್ಬಳ್ಳಿ ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಸಂಭವಿಸಿದೆ.
ಮೃತ ಪಟ್ಟ ವ್ಯಕ್ತಿಯು ಜಿಲ್ಲೆಯ ಬಬಲೇಶ್ವರ ತಾಲೂಕಿನ ತಾಜಪುರ ಪಿಎಂ ಗ್ರಾಮದ ಸಾಬು ಸಿದ್ದಪ್ಪ ಔರಸಂಗ (25).ಸಿಂದಗಿ ಕಡೆಯಿಂದ ಬಾಗಲಕೋಟ ಕಡೆಗೆ ಹೊರಟಿದ್ದ ಸಿಮೆಂಟ್ ತುಂಬಿದ ಲಾರಿಗೆ ವಿಜಯಪುರ ಕಡೆಯಿಂದ ಬಂದ ಬೈಕ್ ಸವಾರ ವೇಗವಾಗಿ ಬಂದು ಲಾರಿಗೆ ಹಿಂಬದಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ಮೃತನ ಶವವನ್ನು ಕೊಲ್ಹಾರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಲಾರಿ ಚಾಲಕ ತಪ್ಪಿಸಿಕೊಂಡು ಹೊರಟಾಗ ಯುಕೆಪಿ ಹತ್ತಿರ ಕೊರೆಮ್ಮದೇವಿ ದೇವಸ್ಥಾನದ ಹತ್ತಿರ ಲಾರಿ ಸಮೇತ ಪೆÇೀಲಿಸರು ಹಿಡಿದಿದ್ದಾರೆ. ಅಪಘಾತ ಸ್ಥಳಕ್ಕೆ ಕೊಲ್ಹಾರ ಪಿಎ??? ಎಸ್.ಸಿ. ಗುರಬೆಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.