ಹಾಸ್ಟೆಲ್ ವಾರ್ಡನ್ ಬೇಡ: ಬೆಳ್ಳಂಬೆಳಿಗ್ಗೆ ಮಿಂಚಿನ ಪ್ರತಿಭಟನೆ
ಚಿತ್ತಾಪುರ: ಜು.12:ಮ್ಯಾಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಪುನಃ ಶ್ರೀಮತಿ ಅನಿತಾ ಅವರು ವಾರ್ಡನ್ ಆಗಿ ಬರುತ್ತಿರುವ ವಿಷಯ ತಿಳಿದು ವಸತಿ ನಿಲಯದ ವಿದ್ಯಾರ್ಥಿನಿಯರು ಪಟ್ಟಣದ ಲಾಡ್ಜಿಂಗ್ ಕ್ರಾಸ್ ನಲ್ಲಿ ಬೆಳ್ಳಂಬೆಳಿಗ್ಗೆ ಮಿಂಚಿನ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಪುನಃ ಶ್ರೀಮತಿ ಅನಿತಾ ಮೇಡಂ ಅವರು ವಾರ್ಡನ್ ಆಗಿ ಬರುವುದು ಬೇಡ. ಅವರ ಬದಲಿಗೆ ಬೇರೆ ಯಾರಾದರೂ ವಾರ್ಡನ್ ಬರಲಿ ಎಂಬುದು ವಿದ್ಯಾರ್ಥಿಯರ ಕೂಗಾಗಿತ್ತು.
ಮುಂಚೆ ಸಾಕಷ್ಟು ತೊಂದರೆಗಳು ಆಗಿದ್ದರಿಂದ ಅವರು ಬೇಡ ಎಂದು ಸಂಬಂಧಪಟ್ಟ ಅಧಿಕಾರಿಗಳೇ ಅವರ ಬದಲಿಗೆ ಬೇರೆಯವರನ್ನು ವಾರ್ಡನ್ ಆಗಿ ನೇಮಿಸಿತು. ಈಗ ಮತ್ತೆ ಅವರನ್ನು ನಮ್ಮ ವಸತಿ ನಿಲಯಕ್ಕೆ ವಾರ್ಡನ್ ಬರುವುದು ಬೇಡ ಎಂದು ವಿದ್ಯಾರ್ಥಿನಿಯರು ಹೇಳಿದರು.
ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸಐ ಶ್ರೀಶೈಲ ಅಂಬಾಟಿ, ಆಗಮಿಸಿ ವಿದ್ಯಾರ್ಥಿನಿಯರ ಮನವಿಗೆ ಸ್ಪಂದಿಸಿ ಪ್ರತಿಭಟನೆ ನಿಲ್ಲಿಸಿದರು ನಂತರ ವಿದ್ಯಾರ್ಥಿಯರು ತಮ್ಮ ಮನವಿಯನ್ನು ತಹಸೀಲ್ದಾರ್ ಅವರಿಗೆ ನೀಡಿ ನಮ್ಮ ಮನವಿಗೆ ಸ್ಪಂದಿಸುವಂತೆ ಕೇಳಿಕೊಂಡರು.