ಶಾಲಾ ಸಂಸತ್ತು ರಚನೆಯಿಂದ ಪ್ರಜಾಪ್ರಭುತ್ವದ ಅರಿವು: ಶಾಂತಪ್ಪ ದಶವಂತ
ಇಂಡಿ:ಜು.12: ಶ್ರೀ ಭಾಗ್ಯವಂತಿ ವಿಧ್ಯಾವರ್ಧಕ ಸಂಘ ಚವುಡಿಹಾಳ ಇವರ ಅಡಿಯಲ್ಲಿ ನಡೆಯುವ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಪ್ರಜಾಪ್ರಭುತ್ವ ಮಾದರಿಯಲ್ಲಿ ವಿಧ್ಯಾರ್ಥಿಗಳು ಮತಗಳನ್ನು ಚಲಾಯಿಸಿ ಶಾಲಾ ಸಂಸತ್ತು ರಚನೆ ನಡೆಸಲಾಯಿತು.
ಈ ಸಂದರ್ಬದಲ್ಲಿ ಭಾಗ್ಯವಂತಿ ವಿಧ್ಯಾವರ್ಧಕ ಸಂಘದ ಸಂಸ್ಥಾಪಕ ಶಾಂತಪ್ಪ ದಶವಂತ ಮಾತನಾಡಿ ಯಾವುದೇ ಆಡಳಿತ ವ್ಯವಸ್ಥೆ ನಡೆಯಬೇಕಾದರೆ ನಾಯಕತ್ವ ಪ್ರಮುಖವಾಗಿದೆ. ಜವಾಬ್ದಾರಿ ಇಲ್ಲದ ಕೆಲಸಗಳು ಗುರಿ ತಲುಪುವುದು ಅಸಾಧ್ಯ. ಆದ್ದರಿಂದ ಇಂದು ಶಾಲೆಯಲ್ಲಿ ಚುನಾವಣಾ ಆಯೋಗ ಯಾವ ಮಾದರಿಯಲ್ಲಿ ಮತದಾನ ಪದ್ದತಿ ಅನುಸರಿಸುತ್ತದೆಯೂ ಅದೇ ಮಾದರಿಯಲ್ಲಿ ಶಾಲಾ ಸಂಸತ್ತು ರಚನೆ ಮಾಡುತ್ತಿರುವ ಕಾರ್ಯ ಶ್ಲ್ಯಾಗನೀಯವಾಗಿದೆ. ಶಾಲೆಗಳಲ್ಲಿ ಇಂತಹ ಪರಂಪರೆ ಬೆಳೆಸುವದರಿಂದ ವಿಧ್ಯಾರ್ಥಿಗಳಲ್ಲಿ ಚುನಾವಣೆಯ ಬಗ್ಗೆ ನಮ್ಮನ್ನಾಳುವ ನಾಯಕರ ಬಗ್ಗೆ ತಿಳುವಳಿಕೆ ಹೆಚ್ಚುತ್ತದೆ. ವಿಧ್ಯಾರ್ಥಿಗಳು ಭವಿಷ್ಯದ ಉತ್ತಮ ನಾಯಕತ್ವದ ಗುಣ ಬೆಳೆಸಿಕೊಂಡು ಹೋಗಬೇಕು ಎಂದರು.
ವಿಶ್ವವಾಣಿ ಪತ್ರಕರ್ತ ಶರಣಬಸಪ್ಪಾ.ಎನ್ ಕೆ ಮಾತನಾಡಿ ಶಾಲಾ ಸಂಸತ್ತು ರಚನೆ ಮಾಡುವದರಿಂದ್ದ ಪ್ರಜಾಪ್ರಭುತ್ವ ಬಗ್ಗೆ ತಿಳುವಳಿಕೆ ಉಂಟಾಗುತ್ತದೆ ಹಾಗೂ ಚುನಾವಣೆಗಳಲ್ಲಿ ಆಯ್ಕೆಯಾದ ನಂತರ ನಾಯಕತ್ವದ ಬಗ್ಗೆ ಅರಿವು ಮೂಡುತ್ತದೆ. ವಿಧ್ಯಾರ್ಥಿಗಳು ಶಿಸ್ತು, ಸ್ವಯಂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀಭಾಗ್ಯವಂತಿ ಶಿಕ್ಷಣ ಸಂಸ್ಥೆ ಕೆಲವೆ ವರ್ಷಗಳಲ್ಲಿ ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿರುವುದು ಇಡೀ ಆಡಳಿತ ಮಂಡಳಿಗೆ ಸಂದಗೌರವ. ಒಂದು ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಅನೇಕ ವಿಘ್ನಗಳು ಬರುತ್ತವೆ ಇವುಗಳೇಲ್ಲವನ್ನು ತಾಳ್ಮೇಯಿಂದ ಸಹಿಸಿ ಗಡಿ ಭಾಗದಲ್ಲಿ ಉತ್ಕøಷ್ಠ ಶಿಕ್ಷಣ ಸಂಸ್ಥೆ ತಲೆ ಎತ್ತಿರುವುದು ನಮ್ಮೇಲ್ಲರ ಸೌಭಾಗ್ಯ ಇಂತಹ ಸಂಸ್ಥೆಗಳಿಗೆ ಈ ಭಾಗದ ಜನಪ್ರತಿನಿಧಿಗಳು ,ಧಾನಿಗಳ ,ಶಿಕ್ಷಣ ಪ್ರೇಮಿಗಳ ಸಹಾಯ ಸದಾ ಇರಲಿ ಇನ್ನಷ್ಟು ಅಭಿವೃದ್ದಿಯತ್ತ್ ಸಾಗಲಿ ಎಂದು ಹಾರೈಸಿದರು.
ನಿವೃತ್ತ ಶಿಕ್ಷಕ ರಾಮಣ್ಣಾ ದಶವಂತ, ಪ್ರಾಚಾರ್ಯ ಚಂದ್ರಶೇಖರ ದಶವಂತ, ಪ್ರಕಾಶ ಹಲಸಂಗಿ, ಬಸವರಾಜ ರೋಡಗಿ ಸೇರಿದಂತೆ ಭಾಗ್ಯವಂತಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳು, ಶಿಕ್ಷಕಿಯರು ಆಡಳಿತ ಮಂಡಳಿಯ ಸರ್ವಸದಸ್ಯರು ಇದ್ದರು.