ಜನಸಂಖ್ಯೆ ನಿಯಂತ್ರಿಸುವದು ಸಮಸ್ಯೆಯಾಗಿದೆ:ಡಾ.ದೀಪಾ
ತಾಳಿಕೋಟೆ:ಜು.12: ಪ್ರಪಂಚದಾದ್ಯಂತ ಜನಸಂಖ್ಯೆಯ ಸಮಸ್ಯೆಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂಲೈ 11 ರಂದು ವಿಶ್ವ ಜನಸಂಖ್ಯಾದಿನವನ್ನು ಆಚರಿಸಲಾಗುತ್ತದೆ ಎಂದು ಎಸ್.ಕೆ.ಕಲಾ ಹಾಗೂ ವಾಣಿಜ್ಯ ವಿಜ್ಞಾನ ಮಹಾ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಾಂಸ್ಕøತಿಕ ಹಾಗೂ ಚರ್ಚಾಕೂಟ ವಿಭಾಗದ ಸಂಚಾಲಕರಾದ ಶ್ರೀಮತಿ ದೀಪಾ ಮಾಳಗೆ ಅವರು ನುಡಿದರು.
ಗುರುವಾರರಂದು ವೀ.ವಿ.ಸಂಘದ ಎಸ್.ಕೆ.ಮಹಾ ವಿದ್ಯಾಲಯದ ಸಭಾಭವನದಲ್ಲಿ ಏರ್ಪಡಿಸಲಾದ ವಿಶ್ವ ಜನಸಂಖ್ಯಾದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನ ಅಲಂಕರಿಸಿ ಮಾತನಾಡುತ್ತಿದ್ದ ಅವರು ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಲಿದೆ ಇದನ್ನು ನಿಯಂತ್ರಿಸುವದು ಬಹುದೊಡ್ಡ ಸಮಸ್ಯೆಯಾಗಿದೆ ವಿಶ್ವದಲ್ಲಿ ಚೀನಾ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದರೆ ಭಾರತ ದೇಶವೂ ಸಹ ಎರಡನೇ ಸ್ಥಾನದಲ್ಲಿದೆ ಎಂದ ಅವರು ಬಾಲ್ಯ ವಿವಾಹ, ಲಿಂಗ ಸಮಾನತೆ, ಮಾನವ ಹಕ್ಕುಗಳು ಮತ್ತು ಇತರೆ ವಿಷಯಗಳ ನಡುವೆ ಕುಟುಂಭ ಯೋಜನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲೂ ಸಹ ಈ ದಿನ ಪ್ರಮುಖವಾಗಿದೆ ಎಂದ ಅವರು ದೇಶಕ್ಕೆ ಕಡಿಮೆ ಜನಸಂಖ್ಯೆಯಿಂದಾಗುವ ಪ್ರಯೋಜನಗಳ ಕುರಿತು ವಿವರಿಸಿದರು.
ಇನ್ನೋರ್ವ ಅತಿಥಿ ಸ್ಥಾನ ಅಲಂಕರಿಸಿದ ವಾಯ್.ಆರ್.ಸಿ.ಘಟಕಾಧಿಕಾರಿ ಆರ್.ಎಸ್.ರಾಠೋಡ ಅವರು ಮಾತನಾಡಿ ಅಂಕಿ ಅಂಶಗಳ ಪ್ರಕಾರ ಸುಮಾರು 7.96 ಕ್ಕೂ ಮೇಲ್ಪಟ್ಟು ಬಿಲಿಯನ್‍ನಷ್ಟು ಜನಸಂಕ್ಯೆ ಇದೆ ಇದು 2030ರಲ್ಲಿ 8.5 ಬಿಲಿಯನ್ ಬೆಳೆಯುವ ನಿರಿಕ್ಷೆ ಇದೆ ಎಂದ ಅವರು ಜನಸಂಖ್ಯೆ ಏರುತ್ತಿರುವದನ್ನು ನೋಡಿ ವಿಶ್ವ ಸಂಸ್ಥೆ 1987ನೇ ಇಸ್ವಿಯಲ್ಲಿ ಈ ವಿಶ್ವ ಜನಸಂಖ್ಯೆ ದಿನಾಚರಣೆಗೆ ಮುನ್ನುಡಿ ಬರೆಯಲಾಗಿದೆ ಅಂದಿನ ದಿನದಂದು 5 ಬಿಲಿಯನ್ ತಲುಪಿತ್ತೆಂದ ಹೇಳಿದ ಅವರು ಇಂದಿನ ಫಿಳಿಗೆಯ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ವಿವರಿಸಿದರು.
ಇನ್ನೋರ್ವ ಅತಿಥಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಬಿ.ಮಿಸ್ಕಿನ್ ಅವರು ಮಾತನಾಡಿ ಯಾರನ್ನೂ ಬಿಡಬೇಡಿ ಎಲ್ಲರನ್ನು ಎಣಿಸಿ ಎಂಬ ಘೋಷವಾಕ್ಯವನ್ನು ಹೇಳುವದರೊಂದಿಗೆ ವಿಶ್ವ ಜನಸಂಖ್ಯೆ ಕುರಿತು ಮಾಹಿತಿಯನ್ನು ನೀಡಿದರಲ್ಲದೇ ಜನಸಂಖ್ಯೆ ನಿಯಂತ್ರಣದ ಪ್ರಯೋಜನೆಗಳು ಮತ್ತು ವಾತ್ಸವ ಸ್ಥಿತಿ ಎಂಬ ವಿಷಯದ ಮೇಲೆ ಏರ್ಪಡಿಸಲಾದ ಪ್ರಭಂದ ಸ್ಪರ್ದೆಯಲ್ಲಿ ಭಾಗವಹಿಸಿದ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಮತಿ ಲಲೀತಾಗೌಡರ ಸ್ವಾಗತಿಸಿ ನಿರೂಪಿಸಿದರು. ಶ್ರೀಮತಿ ಶ್ರೀದೇವಿ ಮಾನೆ ವಂದಿಸಿದರು.