ಶ್ರೀ ಖಾಸ್ಗತ ಮಠದಲ್ಲಿ ಸಪ್ತ ಭಜನೆ ಪ್ರಾರಂಭ
ತಾಳಿಕೋಟೆ:ಜು.12: ಪಟ್ಟಣದ ಶ್ರೀ ಖಾಸ್ಗತೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿವರ್ಷದಂತೆ ಜರುಗುವ ಸಪ್ತ ಭಜನಾ ಕಾರ್ಯಕ್ರಮವು ಗುರುವಾರರಂದು ನಸುಕಿನ ಜಾವ ಪ್ರಾರಂಭಗೊಂಡಿತು.
9 ದಿನಗಳವರೆಗೆ ಜರುಗಲಿರುವ ಸಪ್ತ ಭಜನಾ ಕಾರ್ಯಕ್ರಮಕ್ಕೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಚಾಲನೆ ನೀಡಿದರು. ಪ್ರತಿದಿನ ಹಗಲು ರಾತ್ರಿ ಸತತವಾಗಿ ನಡೆದು ಜೂಲೈ 18 ರಂದು ಬೆಳಿಗ್ಗೆ 5 ಗಂಟೆಗೆ ಗೋಪಾಲಕಾವಲಿ(ಮೊಸರುಗಡಿಗೆ) ಒಡೆಯುವ ದಿನದಂದು ಮುಕ್ತಾಯಗೊಳ್ಳಲಿದೆ.
ಸುಮಾರು 160 ಕ್ಕೂ ಹೆಚ್ಚು ಗ್ರಾಮಸ್ಥರರು ಈ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಸಾಗಿದ್ದಾರೆ ದಿನದ 1 ಗಂಟೆಗೆ ಒಂದು ಗ್ರಾಮಸ್ಥರರಿಗೆ ಭಜನೆಯಲ್ಲಿ ಭಾಗವಹಿಸಲು ಹಂಚಿಕೆ ಮಾಡಲಾಗಿದ್ದು ಸಪ್ತ ಭಜನೆಯಲ್ಲಿ ಓಂ ನಮಃ ಶಿವಾಯ ನಾಮಾಂಕಿತ ಮಠಕ್ಕೆ ಆಗಮಿಸುತ್ತಿರುವ ಭಕ್ತಾಧಿಗಳಿಗೆ ಭಕ್ತಿಯ ಮಾರ್ಗದತ್ತ ಕೊಂಡೊಯುತ್ತಿದೆ.
ಈ ಸಮಯದಲ್ಲಿ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು, ವೇ.ವಿಶ್ವನಾಥ ವಿರಕ್ತಮಠ, ಮೊದಲಾದವರು ಇದ್ದರು.