ಯುವಕ ಅರೆಸ್ಟ್ ,ಬಿಜೆಪಿ ಮುಖಂಡರಿಂದ ದಿಢೀರ್ ಧರಣಿ
ಮುದ್ದೇಬಿಹಾಳ: ಜು.12:ಅಕ್ರಮ ಮರಳು ಕುರಿತು ಜಿಪಂ ಮಾಜಿ ಅಧ್ಯಕ್ಷ ಮುನ್ನಾಧಣಿ ನಾಡಗೌಡರ ಪುತ್ರ ಅಕ್ಷಯ್ ಫೇಸಬುಕ್‍ನಲ್ಲಿ ಹಾಕಿದ್ದ ಪೆÇೀಸ್ಟ್ ಹಿನ್ನೆಲೆ ಅಕ್ಷಯ್ ಕಾರು ಚಾಲಕ ರಾಹುಲ್ ಮಾದರ ವಿರುದ್ಧ ಪ್ರಕರಣ ದಾಖಲಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ಮುಖಂಡರು ಬುಧವಾರ ಸಂಜೆ ಪೆÇಲೀಸ್ ಠಾಣೆ ಎದುರು ದಿಢೀರ್ ಧರಣಿ ನಡೆಸಿ ಶಾಸಕರಿಗೆ, ಪಿಎಸೈಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಹಾಡುಹಗಲೇ ನಡೆಯುತ್ತಿರುವ ಮರಳು ದಂಧೆ ತಡೆಯುವಂತೆ ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್, ದಾಖಲೆ ಸಮೇತ ಪೆÇೀಸ್ಟ್ ಹಾಕಿ ಸಿ.ಎಸ್.ನಾಡಗೌಡರಿಗೆ, ರಾಹುಲ್ ನಾಡಗೌಡರಿಗೆ ಕಮಿಷನ್ ಎಷ್ಟು ಎಂದು ಪ್ರಶ್ನಿಸಿದ್ದರು.
ಇದರಿಂದ ಕೆರಳಿದ ಶಾಸಕ ನಾಡಗೌಡರ ಕಡೆಯವರು ಇದಕ್ಕೆಲ್ಲ ರಾಹುಲ್ ಪ್ರಚೋದನೆ ಕಾರಣವೆಂದು ಭಾವಿಸಿ ಕ್ರಮಕ್ಕೆ ಪಿಎಸ ಐಗೆ ತಿಳಿಸಿದ್ದರು. ಇದರಿಂದಾಗಿ ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಇದರಿಂದಾಗಿ ಠಾಣೆಯ ಎದುರು ಜಮಾವಣೆಯಾದ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಆಡಳಿತದ ವಿರುದ್ದ ಆಕ್ರೋಶ ಹೊರಹಾಕಿ ಈ ಸಂಧರ್ಭದಲ್ಲಿ ತಾಪಂ ಮಾಜಿ ಸದಸ್ಯ ಪ್ರೇಮಸಿಂಗ್ ಚವ್ಹಾಣ ಮಾತನಾಡಿ, ರಾಹುಲ್ ಬಂಧಿಸಿದ ಕಾರಣ ಕೇಳಿದರೆ ನಾಳೆ ಹೇಳ್ತವೆ ಅಂತಾರೆ. ಡಿಎಸ್ಪಿ ಎಸ್ಪಿ ಬರುವವರೆಗೂ ಧರಣಿ ನಡೆಸುತ್ತೇವೆ. ಜೈಲಿಗೆ ಹಾಕಿದರೂ ಹೋಗಲು ಸಿದ್ಧರಿದ್ದೇವೆ ಎಂದು ಕಿಡಿಕಾರಿದರು.
ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ ಮಾತನಾಡಿ, ಅಕ್ಷಯ್ ಹಾಕಿದ್ದ ಪೆÇೀಸ್ಟ್ ವಿಚಾರವಾಗಿ ದಲಿತ ಯುವಕ ರಾಹುಲ್‍ನನ್ನು ಠಾಣೆಗೆ ಕರೆತಂದಿರುವದು ಯಾಕೆ ಎಂದರು. ನಂತರ ಮಾತನಾಡಿದ ಅಕ್ಷಯ್ ನಾಡಗೌಡ, ರಕ್ಕಸಗಿ ಗ್ರಾಪಂ ಸದಸ್ಯನಾಗಿದ್ದ ನನಗೆ ಅಕ್ರಮ ಮರಳು ದಂಧೆಯ ಸಂಪೂರ್ಣ ಮಾಹಿತಿ ಇದ್ದು ಈ ಕುರಿತ ದಾಖಲೆಗಳು ನನ್ನ ಹತ್ತಿರ ಇವೆ. ಫೇಸ್ ಬುಕ್ ನಲ್ಲಿ ಪೆÇೀಸ್ಟ್ ಹಾಕಿ ಪ್ರಶ್ನಿಸಿದ್ದು ನಾನು, ಪೆÇಲೀಸರು ನನಗೂ ಬೆದರಿಕೆ ಹಾಕಿ ರಾಹುಲ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಕೊಂಡಿದ್ದಾರೆ ಎಂದು ದೂರಿದರು.ಇದೇ ವೇಳೆ ರಾಹುಲ್‍ನನ್ನು ಯಾವ ಕಾರಣಕ್ಕಾಗಿ ಬಂಧಿಸಿದ್ದೀರಿ, ಆತನು ಮಾಡಿರುವ ಅಪರಾಧವೇನು ಅನೋ ಮಾಹಿತಿ ನೀಡುವಂತೆ ಕೋರಿ ಮುಖಂಡರು ಪಿಎಸ್ ಐಗೆ ಮನವಿ ಸಲ್ಲಿಸಿದರು.
ಸೋಮನಗೌಡ ಪಾಟೀಲ ನಡಹಳ್ಳಿ, ಸೋಮನಗೌಡ ಬಿರಾದಾರ, ಲಕ್ಷ್ಮಣ ಬಿಜೂರ, ಶಶಿಕುಮಾರ ಹಂಗರಗಿ, ಶೇಖರ ಮಾದರ, ಅಶೋಕ ರಾಠೋಡ, ಸಂಜು ಬಾಗೇವಾಡಿ, ರಾಜಶೇಖರ ಹೊಳಿ, ಗಿರೀಶಗೌಡ ಪಾಟೀಲ, ಉದಯಸಿಂಗ್ ರಾಯಚೂರ, ಪವನ್ ಲಮಾಣಿ, ಮಾಯಪ್ಪ ಮಾದರ, ನಿಖಿಲ್ ಮಲಗಲದಿನ್ನಿ ಸಂಗು ಬಿಸಲದಿನ್ನಿ ಮತ್ತಿತರರು ಇದ್ದರು.