ಡೆಂಘೀ ತಡೆಯಿರಿ, ಶುದ್ಧ ನೀರು, ಸ್ವಚ್ಛತೆಗೆ ಒತ್ತಾಯನಗರವಷ್ಟೇಯಲ್ಲ ಹಳ್ಳಿಯಲ್ಲೂ ಜನಸಾಮಾನ್ಯರಿಗೆ ತೊಂದರೆ: ಈರಣ್ಣಾ
ಆಳಂದ:ಜು.12: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಅಶುದ್ಧ ಕುಡಿಯುವ ನೀರು ಪೂರೈಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಅಲ್ಲದೆ, ಸಾರ್ವಜನಿಕ ವಲಯದಲ್ಲಿ ಡೆಂಘೀ ಮತ್ತು ಸಾಂಕ್ರಮಿಕ ಜ್ವರ ಭೀತಿ ಆವರಿಸುತ್ತಿದ್ದು, ಈ ಕೂಡಲೇ ತಾಲೂಕು ಆಡಳಿತ ಮುಂಜಾಗೃತೆ ಕ್ರಮ ಕೈಗೊಳ್ಳಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಈರಣ್ಣಾ ಜಿ. ಆಳಂದ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಗುರುವಾರ ಹೇಳಿಕೆ ನೀಡಿರುವ ಅವರು, ಮಳೆಯಾದಾಗೊಮ್ಮೆ ಪಟ್ಟಣದ ಅಲ್ಲಲ್ಲಿನ ಬಡಾವಣೆ, ರಸ್ತೆಗಳಲ್ಲಿ ಮತ್ತು ಶ್ರೀರಾಮ ಮಾರುಕಟ್ಟೆಯಲ್ಲಿ ಕೊಳಚೆಗುಂಡಿಯಲ್ಲಿ ಕೊಳೆ ನೀರು, ಕಸದ ರಾಶಿಯಿಂದ ಸೊಳ್ಳೆ ಉತ್ಪತಿಯಾಗಿ ಜನರಲ್ಲಿ ಮಲೇರಿಯಾ ಮತ್ತು ಸಾಂಕ್ರಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈ ಕುರಿತು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ್ಯ ಪರಿಸ್ಥಿತಿ ಅರಿತು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಮಳೆಯಾದರೆ ಪಟ್ಟಣದ ಬಸ್ ನಿಲ್ದಾಣ ಸೋರುತ್ತಿದೆ. ಕಟ್ಟಡದೊಳಗೆ ಮಳೆ ನೀರಿನ ರಾಡಿಯಿಂದಾಗಿ ಆಸನಗಳಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ. ಮಕ್ಕಳು ಮಹಿಳೆಯರು, ವಯೋವೃದ್ಧರಿಗೆ ತೊಂದರೆಯಾಗುತ್ತಿದೆ. ಆವರಣದಲ್ಲಿ ವಾಹನ ಪಾರ್ಕಿಂಗ ವ್ಯವಸ್ಥೆ ಇಲ್ಲದೆ ಬೇಕಾಬಿಟ್ಟಿ ದ್ವಿಚಕ್ರವಾನಗಳು ನಿಲ್ಲುತ್ತಿದ್ದರಿಂದ ಬಸ್ ನಿಲ್ದಾಣದೊಳಗೆ ಜನರ ಓಡಾಟಕ್ಕೆ ಅಡ್ಡಿಯಾಗುತ್ತಿದೆ. ನಿಲ್ದಾಣದಲ್ಲಿ ಕೊಳಚೆ ನೀರು ನಿಂತು ಗಬ್ಬು ವಾಸನೆ ಹರಡಿಕೊಂಡಿದೆ ಸಂಬಂಧಿತ ಸಾರಿಗೆ ಅಧಿಕಾರಿಗಳು ತುರ್ತು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲೂ ಸಾರ್ವಜನಿಕರಿಗೆ ಕುಡಿಯುವ ಶುದ್ಧ ನೀರು ಪೂರೈಕೆಯಿಲ್ಲದೆ, ಮಳೆಗಾಲದ ಕಲುಷಿತ ನೀರು ಸೇನೆಮಾಡಿದ ಅನೇಕ ಬಡವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜೂನ್ ತಿಂಗಳಿಂದ ಆಸ್ಪತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಿವೆ ಎಂದು ಅವರು ಹೇಳಿದರು.
ಪುರಣದ ಪುರಸಭೆ ಮತ್ತು ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಂದ ಇದುವರೆಗೂ ಕೇವಲ ನೀರು, ಸ್ವಚ್ಛತೆ, ಕೊಳಚೆ ನೀರು ತೆರುವಿಗೆ ತೋರಿಕೆಯ ಕೆಲವಾಗದೇ ವಾಸ್ತವ್ಯದಲ್ಲಿ ತಳಮಟ್ಟದಲ್ಲಿ ಪರಿಹಾರ ಕಂಡು ಜನರು ಆರೋಗ್ಯವನ್ನು ಕಾಪಾಡಲು ಮುಂಜಾಗೃತ ವಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮೇಲಾಧಿಕಾರಿಗಳಿಗೆ ಅವರು ಒತ್ತಾಯಿಸಿದರು.
ಸೂಕ್ತ ಕಸವಿಲೆವಾರಿ ಕೈಗೊಳ್ಳಬೇಕು. ರಸ್ತೆ, ತೆಗ್ಗು ಗುಂಡಿಗಳಲ್ಲಿ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಚರಂಡಿಗಳ ನಿರ್ವಾಹಣೆ ಮಾಡಿ, ವಾರಕ್ಕೊಮ್ಮೆಯಾದರು ಫಾಗಿಂಗ್ ಸಿಂಪರಣೆ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಸೂಕ್ತ ಚಿಕಿತ್ಸೆಗೆ ಕ್ರಮವಹಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಔಷದೋಪಚಾರ ಒದಗಿಸಬೇಕು. ಈ ಜನಪರ ಬೇಡಿಕೆಗಳಿಗೆ ವಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಹೋದಲ್ಲಿ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಈರಣ್ಣಾ ಆಳಂದ ಅವರು ಎಚ್ಚರಿಸಿದ್ದಾರೆ.