ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭ 14ಕ್ಕೆ
ಬೀದರ:ಜು.12: ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಜುಲೈ 14 ರಂದು ಬೆಳಿಗ್ಗೆ 9ಕ್ಕೆ ಪ್ರಸಕ್ತ ಸಾಲಿನ ಎಸಎಸ ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಗೊಂಡ(ಕುರುಬ) ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ತಿಂಥಣಿ ಬ್ರಿಜ್‍ನ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಉದ್ಘಾಟಿಸುವರು. ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ಅಧ್ಯಕ್ಷತೆ ವಹಿಸುವರು.
ವಿಧಾನ ಪರಿಷತ್ ಮಾಜಿ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಮುಖಂಡರಾದ ಅಮೃತರಾವ್ ಚಿಮಕೋಡೆ, ಪಂಡಿತರಾವ್ ಚಿದ್ರಿ, ಗೀತಾ ಚಿದ್ರಿ, ಬಾಬುರಾವ್ ಮಲ್ಕಾಪುರೆ, ಮಲ್ಲಿಕಾರ್ಜುನ ಬಿರಾದಾರ(ಪರಿಹಾರ), ಮುರಳಿಧರ ಎಕಲಾರಕರ್, ಎಂ.ಎಸ್. ಕಟಗಿ, ಬಸವರಾಜ ಮಾಳಗೆ, ಶರಣಪ್ಪ ವಡಗಾಂವ್, ಮಾಳಪ್ಪ ಅಡಸಾರೆ, ರಾಜಾರಾಮ ಚಿಟ್ಟಾ, ಹಣಮಂತ ಮಲ್ಕಾಪುರೆ, ಇಂದುಮತಿ ಚಿದ್ರಿ, ಡಾ. ಸಂಜೀವಕುಮಾರ ಅತಿವಾಳೆ, ಪೀರಪ್ಪ ಯರನಳ್ಳೆ, ರತಿಕಾಂತ ಜೋಜನಾ, ಬಾಬುರಾವ್ ಲದ್ದೆ ಬರಿದಾಬಾದ್, ಡಾ. ಜಿ.ಬಿ. ಮಲ್ಲಿಕಾರ್ಜುನ, ಸುಭಾಷ್ ನಾಗೂರೆ, ಅನಿಲಕುಮಾರ ಹಾಲಹಳ್ಳಿ, ಕಲ್ಲಪ್ಪ ರಾಯಗೊಂಡ, ಭೀಮಶಾ ಬಸಲಾಪುರ, ದೇವಪ್ಪ ಎಂ. ಚಾಂಬೋಳೆ, ವೈಜಿನಾಥ ಬಿರಾದಾರ ಭಾಲ್ಕಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಎಸಎಸ ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 80ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಾಧಕ ವಿದ್ಯಾರ್ಥಿಗಳ ಪಾಲಕರನ್ನೂ ಸತ್ಕರಿಸಲಾಗುವುದು ಎಂದು ಸಂತೋಷಕುಮಾರ ಜೋಳದಾಪಕೆ ತಿಳಿಸಿದ್ದಾರೆ.