ಮೂಲಸೌಲಭ್ಯಕ್ಕೆ ಆಗ್ರಹಿಸಿ ಆಳಂದನಲ್ಲಿ ಜಂಟಿ ಸತ್ಯಾಗ್ರಹ
ಆಳಂದ:ಜು.12: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ, ರಸ್ತೆ ಅಗಲೀಕರಣದಂತ ಪ್ರಮುಖ ಹಲವು ಬೇಡಿಕೆಗೆ ಆಗ್ರಹಿಸಿ ಪಟ್ಟಣದ ಪುರಸಭೆ ಕಚೇರಿಯ ಮುಂದೆ ಅಖಿಲ ಭಾರತ ಕಿಸಾನಸಭಾ ಮತ್ತು ಆಲ್ ಇಂಡಿಯಾ ತಂಜೀಮ್-ಎ-ಇನ್ಸಾಫ್ ಹಾಗೂ ಎದ್ದೇಳು ಕರ್ನಾಟಕ ಸಂಘಟನೆಯ ಜಂಟಿ ಆಶ್ರಯದಲ್ಲಿ ಧರಣಿ ಸತ್ಯಾಗ್ರಹ ಗುರುವಾರ ಆರಂಭಗೊಂಡಿದೆ.
ಧರಣಿಗೆ ಬೆಂಬಲಿಸಿ ಮುಖಂಡ ಬಸವಲಿಂಗಪ್ಪ ಗಾಯಕವಾಡ, ಪುರಸಭೆ ಮಾಜಿ ಸದಸ್ಯ ಸೈಫಾನ್ ಜವಳೆ, ಕರವೇ ತಾಲೂಕು ಅಧ್ಯಕ್ಷ ಈರಣ್ಣಾ ಜಿ. ಆಳಂದ ಧಂಗಾಪೂರ ಮೊದಲಾದವರು ಪಾಲ್ಗೊಂಡಿದ್ದರು.
ಕಿಸಾನಸಭಾ ರಾಜ್ಯಾಕಾರ್ಯಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ ಬೇಡಿಕೆಗೆ ಆಗ್ರಹಿಸಿ ಮಾತನಾಡಿದ ಅವರು, ನಗರಕ್ಕೆ ದಿನನಿತ್ಯ ಬೇಕಾಗಿರುವ ನೀರು ತಿಂಗಳಲ್ಲಿ ಎರಡು ಬಾರಿ ಮಾತ್ರ ಬಿಡುತ್ತಿದ್ದು ಅದ ನೀರು ಅಶುದ್ಧವಾಗಿದ್ದು, ಇದರಿಂದಾಗಿ ನೀರು ನಗರ ವಾಸಿಗಳು ಆರೋಗ್ಯಕ್ಕೆ ಹಾನಿಕಾರವಾಗಿದೆ. ಅದಕ್ಕಾಗಿ ನಗರಕ್ಕೆ ನೀರು ಫಿಲ್ಟರ ಮಾಡಿ ಸ್ವಚ್ಚ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು. ನಗರದಲ್ಲಿ ಸ್ವಚ್ಛತೆ ಆಗಲಾರದ ಕಾರಣ ಹಾಗೂ ಮಳೆ ನೀರು ಮತ್ತು ಚರಂಡಿ ನೀರಿಗೆ ಯೋಜನಾ ಬದ್ಧವಾಗಿ ಕ್ರಮ ಕ್ರಮ ಅನುಸರಿದೇ ಇರುವುದು ನಗರದಲ್ಲಿ ಗಲೀಜು ನೀರು ತುಂಬಿ ಕೊಳಚೆ ಪ್ರದೇಶವಾಗಿ ಮಾರ್ಪಡುತ್ತಿದೆ. ಪಟ್ಟಣದ ಸ್ವಚ್ಛತಾ ಕಾರ್ಮಿಕರು ಅದಕ್ಕೆ ಬೇಕಾಗಿರುವ ವಿಲೆವಾರಿ ಯೋಜನೆಗಳು ಪೂರ್ತಿಗೋಳಿಸಬೇಕು ಎಂದು ಹಲವು ಬೇಡಿಕೆಗೆ ಒತ್ತಾಯಿಸಿದರು.
ಸ್ಥಳಕ್ಕೆ ಪುರಸಭೆ ವ್ಯವಸ್ಥಾಪಕ ಲಕ್ಷ್ಮಣ ಕಟ್ಟಿಮನಿ ಅವರು ಭೇಟಿ ನೀಡಿ ಬೇಡಿಕೆಗೆ ಸ್ಪಂದಿಸುವ ಮುಖ್ಯಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಮನವಿ ಸ್ವೀಕರಿದ್ದರಾದರು ಧರಣಿ ನಿರತರು ಹಿಂಪಡೆಯುವ ಬಗ್ಗೆ ಸ್ಪಷ್ಟಪಡಿಸಲಿಲ್ಲ.
ಈ ಸಂದರ್ಭದಲ್ಲಿ ಆಲ್ ಇಂಡಿಯಾ ತಂಜೀಮ್-ಎ-ಇನ್ಸಾಫ್ ನಗರ ಅಧ್ಯಕ್ಷ ಭಾಕರಅಲಿ ಜಮಾದಾರ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಎದ್ದೇಳು ಕರ್ನಾಟಕ ಸಂಚಾಲಕ ಆರೀಪ್‍ಅಲಿ ಲಂಗಡೆ, ಕೆ.ಯು. ಇನಾಮದಾರ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.