ಜೆಸ್ಕಾಂ ನೌಕರರು ಬೆಳಕು ನೀಡುವ ಸಿಪಾಯಿಗಳು: ಕೋರೆ
ಆಳಂದ:ಜು.12: ದೇಶ ಕಾಯಲು ಯೋಧರು ಎಷ್ಟು ಮುಖ್ಯವೋ ಕತ್ತಲೆ ತೊಲಗಿಸಿ ಬೆಳಕ ನೀಡುವ ಜೆಸ್ಕಾಂ ನೌಕರರ ಪರಿಶ್ರಮ ಅಷ್ಟೇ ಮುಖ್ಯವಾಗಿದೆ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ -659 ಜೆಸ್ಕಾಂ ಕಂಪನಿ ವಿಭಾಗದ ಉಪಾಧ್ಯಕ್ಷ ಬಾಬು ಕೋರೆ ಅವರು ಹೇಳಿದರು.
ತಾಲೂಕಿನ ಸ್ವಗ್ರಾಮ ಪಡಸಾವಳಿ ಗ್ರಾಮದಲ್ಲಿ ಅಂಭಾ ಭವಾನಿ ಮಂದಿರದಲ್ಲಿ ಗ್ರಾಮಸ್ಥರು ಹಾಗೂ ಅಭಿಮಾನಿಗಳು ನೀಡಿದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇಂದಿನ ಯುವಕರು ಪ್ರಜ್ಞಾವಂತರಾಗಿದ್ದಾರೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಸಾಧನೆಗೆ ತಕ್ಕ ಶಿಕ್ಷಣ ನೀಡಿ, ಮಕ್ಕಳಿಗಾಗಿ ಆಸ್ತಿ ಮಾಡದೇ ಮಕಳನ್ನೇ ಆಸ್ತಿಯನ್ನಾಗಿ ಮಾಡಿ, ತಮ್ಮ ಮಕ್ಕಳು ಉನ್ನತ ಹುದ್ದೆಗೆ ಏರಿದಾಗ ಅಲ್ಲಿಯ ನೌಕರರ ಸಹಕಾರದೊಂದಿಗೆ ತಾಳ್ಮೆ, ಸಹನೆ, ಎಲ್ಲರೊಂದಿಗೆ ಅನ್ಯೋನ್ಯತೆ ನಡೆದುಕೊಂಡು ಗೌರವ ತನ್ನಿಂದ ತಾನೇ ಬರುತ್ತಿದೆ, ಕರ್ತವ್ಯದಲ್ಲಿ ಇದ್ದಾಗ ಪ್ರಾಮಾಣಿಕತೆ ಕೆಲಸ ಮಾಡಬೇಕು ಅಲ್ಲದೇ ಗ್ರಾಮಾಭಿವೃದ್ಧಿಗೆ ಇಲಾಖೆಯಲ್ಲಿ ಇರುವವರೆಗೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಎಂದರು.
ಕೇಂದ್ರ ಕಾರ್ಯಕಾರಣಿ ಸಮಿತಿ ಸದಸ್ಯ ಗಣಪತಿ ಮರಪಳ್ಳಿ ಮಾತನಾಡಿ, ಕೋರೆ ಹುಟ್ಟು ಹೋರಾಟಗಾರರ ಇವರನ್ನು ಹೆತ್ತ ತಂದೆ ತಾಯಿ ಭಾಗ್ಯ ಶಾಲಿಗಳು, ಆದರ್ಶಗಳು ಎಲ್ಲರೂ ಮೈಗೊಡಿಸಿಕೊಳ್ಳಬೇಕಾಗಿದೆ, ಇಲಾಖೆಯೊಂದಿಗೆ ಸದಾ ಸಂಪರ್ಕದಲ್ಲಿ ಇರುವ ಇವರು ನೌಕರರ ಸಂಕಷ್ಟ ಬಂದಾಗ ತಮ್ಮ ಕಾರ್ಯ ವ್ಯಾಪ್ತಿ ಮೀರಿ ಕೆಲಸ ಮಾಡುವ ವ್ಯಕ್ತಿತ್ವದವರಾಗಿದ್ದಾರೆ ಎಂದರು.
ಸಮಿತಿ ಸದಸ್ಯ ಬಾಬಾಗೌಡ ಪಾಟೀಲ್, ವಿನೋಧÀ ಸಿಂಗ ಮತ್ತು ದೇವಿದಾಸ ರೆಡ್ಡಿ ಮಾತನಾಡಿದರು. ಮುಖಂಡ ಸೋವiನಾಥ ಪಾಟೀಲ್, ಕೈಲಾಸ ಬಿರಾದಾರ, ಭೋಜರಾಜ ನಿಂಬರ್ಗಿ, ಲಕ್ಷ್ಮೀಪುತ್ರ ಪಾಟೀಲ್, ಶ್ರೀಪಾದ ಭೋಗಾರ, ಶಿವಲಿಂಗಪ್ಪ ತೀರ್ಥೆ ಸಿದ್ಧರಾಮ ಬೇತಾಳೆ, ಚನ್ನಬಸಪ್ಪ ಕೋರೆ, ಶ್ರೀಶೈಲ ಕಂಬಾರ, ಮೈಬೂಬ ಗುಂಜೋಟಿ, ಗುಲಾಬ ಮುಲಗೆ ದಸ್ತಗೀರ ಗುಂಜೋಟಿ, ಯಲ್ಲಾಲಿಂಗ ಬಿರಾದಾರ, ಶಿವಕುಮಾರ ಪಾರಶಟ್ಟಿ, ದೋಂಡಪ್ಪ ಗುಡೂರೆ, ವಿಠ್ಠಲ ಹೂಗಾರ, ಯಜ್ಜಾಜ ಪಟೇಲ್, ಶಂಕರ ಪಾರಶಟ್ಟಿ, ಚಂದ್ರಕಾಂತ ಕುಂಬಾರ, ಪ್ರಭುಲಿಂಗ ಕುಂಬಾರ, ತಿಪ್ಪಣ್ಣ ಬೇಳಂ, ಧಾನಯ್ಯ ಸ್ವಾಮಿ, ವಿದ್ಯಾಧÀರ ಶೇರಿಕರ ಉಪಸ್ಥಿತರಿದ್ದರು.