ಲಕ್ಷ ವೃಕ್ಷ ಅಭಿಯಾನದ ಅಡಿ ಸಸಿ ವಿತರಣೆ
ಬೀದರ:ಜು.12:ವ್ಯಕ್ತಿಯ ಸಕಾರಾತ್ಮಕ ಚಿಂತನೆಯು ಅವನನ್ನು ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯುತ್ತದೆ ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಉಪ ಹಣಕಾಸು ಅಧಿಕಾರಿ ವೀರಭದ್ರಪ್ಪ ಉಪ್ಪಿನರವರು ಅಭಿಪ್ರಾಯ ಪಟ್ಟರು.
ಅವರು ಪವೈವಿವಿ ಯ ಫ್ರೆಂಡ್ಸ್ ಮನಿ ಕ್ಲಬ್‍ನ ವತಿಯಿಂದ, ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಡೀನ್‍ರಾಗಿ ನೇಮಕಗೊಂಡ ಡಾ. ಎಮ. ಕೆ. ತಾಂದಳೆ ಯವರಿಗೆ ಸನ್ಮಾನಿಸಿ ಮಾತ ನಾಡುತ್ತಿದ್ದರು. ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಅವನ ಕಠಿಣ ಪರಿಶ್ರಮ, ಕರ್ತವ್ಯ ನಿಷ್ಠೆ, ಪ್ರಾಮಾಣಿ ಕತೆಯ ನಡೆ ಹಾಗೂ ಮಿತ ಭಾಷೆಯು ಕೆಲಸ ಮಾಡಿರುತ್ತದೆ. ನಕಾರಾತ್ಮಕ ಭಾವನೆಗಳನ್ನು ಹತ್ತಿರ ಸುಳಿಯಲು ಬಿಡದಂತೆ, ತನ್ನ ಉನ್ನತ ಗುರಿಯತ್ತ ಧ್ಯಾನವನ್ನು ಕೇಂದ್ರೀಕರಿಸುವವರು ಮಾತ್ರ ಗುರಿಯನ್ನು ಮುಟ್ಟಬಲ್ಲರು. ಅದಕ್ಕೆ ಡಾ. ತಾಂದಳೆಯವರು ಉದಾಹರಣೆಯಾಗಿದ್ದಾರೆ ಎಂದು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿ ಡಾ. ತಾಂದಳೆ ಯವರು ಮಾತನಾಡುತ್ತ, ಬೀದರ ಪಶುವೈದ್ಯಕೀಯ ಮಹಾ ವಿದ್ಯಾಲಯವನ್ನು ಉನ್ನತ ಮಟ್ಟಕ್ಕೇರಿಸಲು ಶಕ್ತಿಮೀರಿ ಪ್ರಯತ್ನಿಸುವೆ. ಇದಕ್ಕೆ ಎಲ್ಲರು ಸೂಕ್ತ ಸಲಹೆ ಮತ್ತು ಸಹಕಾರವನ್ನು ನೀಡಬೇಕೆಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿದ್ದ ಪರೀಕ್ಷಾ ನಿಯಂತ್ರಕರಾದ ಡಾ. ವಿವೇಕ ಕಸರಳ್ಳಿಕರ ರವರು, ಮಾತನಾಡಿ, ಡಾ. ತಾಂದಳೆಯವರು ಎಲ್ಲರ ಜೊತೆಗೆ ಸೌಹಾರ್ದ ಪೂರ್ಣ ಸಂಬಂಧ ಹೊಂದಿರುವುದರಿಂದ ಅವರು ಮಹಾ ವಿದ್ಯಾಲಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಉಪ ಕುಲ ಸಚಿವರಾದ ದೇವೇಂದ್ರ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಸಿಗೆ ನೀರೆರೆಯುವ ಮೂಲಕ ಸ್ನೇಹ ಕೂಟಕ್ಕೆ ಚಾಲನೆ ನೀಡಲಾಯಿತು. ಪರಿಸರ ಸಂರಕ್ಷಣೆ ಅಭಿಯಾನದ ಅಂಗವಾಗಿ, ತಾಂದಳೆ ಯವರಿಗೆ ಸಸಿಗಳನ್ನು ವಿತರಿಸಲಾಯಿತು.
ಹಿರಿಯ ಆಪ್ತ ಕಾರ್ಯ ದರ್ಶಿ ಗ್ರೇಡ್ 1 ಗಳಾದ ನಾಗಭೂಷಣ ಹುಗ್ಗೆಯವರು ಸ್ವಾಗತಿಸಿದರೆ, ಎಸ್. ನಾಗೇಂದ್ರರವರು ವಂದಿಸಿದರು. ಪ್ರಾಧ್ಯಾಪಕ ಡಾ. ಆರ್. ಜಿ.ಬಿಜೂರಕರ ಸಹ ಪ್ರಾಧ್ಯಾಪಕ ಡಾ. ಪ್ರಶಾಂತ ವಾಘಮಾರೆ, ನಿವೃತ್ತ ಹಿರಿಯ ಫಾರ್ಮಾಸಿಸ್ಟ ಪ್ರಭುಸಿಂಗ ಪವಾರ, ಕಚೇರಿ ಸಹಾಯಕ ಸೋಮೇಶ್ವರ, ನಿವೃತ್ತ ಅಧಿಕಾರಿ ಸುಂದರ ಕಾಂಬಳೆಯವರು ಹಾಜರಿದ್ದರು.