ಅಂಧರ ಬಾಳಿನಲ್ಲಿ ಬೆಳಕಾಗೋಣ: ಉಪ್ಪಾರ
ಬ್ಯಾಡಗಿ,ಜು12 : ಮಾನವನ ಅಂಗಾಂಗಗಳಲ್ಲಿ ಕಣ್ಣು ಅತಿ ಮಹತ್ವದಾಗಿದೆ. ಕಣ್ಣಿನ ದೃಷ್ಟಿಯಿಂದಲೇ ನಮ್ಮ ದಿನನಿತ್ಯದ ಜೀವನ ಸಾಗಿಸಲು ಹಾಗೂ ನಮ್ಮ ಸುಂದರ ಜೀವನ ನೋಡಲು ಸಾಧ್ಯವಾಗಿದ್ದು, ನಾವು ಸತ್ತ ನಂತರ ಈ ಸುಂದರ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗದೇ ನೇತ್ರದಾನ ಮಾಡುವುದರ ಮೂಲಕ ಅಂಧರ ಬಾಳಿನಲ್ಲಿ ಆಶಾಕಿರಣದ ಬೆಳಕಾಗೋಣ ಎಂದು ರೋಟರಿ ಕ್ಲಬ್ ಡಿಸ್ಟ್ರಿಕ್ ಗವರ್ನರ್ ಮಂಜುನಾಥ ಉಪ್ಪಾರ ಕರೆ ನೀಡಿದರು.
ತಾಲೂಕಿನ ಕಾಗಿನೆಲೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ಬ್ಯಾಡಗಿ ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಮತ್ತು ಜಿಲ್ಲಾ ಅಂದತ್ವ ನಿವಾರಣ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಬಿರದಲ್ಲಿ ಒಟ್ಟು 92 ಜನ ತಪಾಸಣೆಗೆ ಒಳಗಾಗಿದ್ದು ಅದರಲ್ಲಿ 12 ಜನರಿಗೆ ಕನ್ನಡಕಗಳನ್ನು ವಿತರಿಸಲಾಗಿದೆ. 46 ಜನರು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದು ಅವರನ್ನು ಶಿವಮೊಗ್ಗಕ್ಕೆ ಶಸ್ತ್ರ ಚಿಕಿತ್ಸೆ ಸಲುವಾಗಿ ಕಳಿಸಿ ಕೊಡಲಾಯಿತು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಸಿದ್ಧಲಿಂಗಯ್ಯ ಬೂದಿಹಾಳಮಠ, ಖಜಾಂಚಿ ವೀರೇಶ ಬಾಗೋಜಿ ಹಾಗು ಕಾಗಿನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿಗಳು ವೈದ್ಯರು ಮತ್ತು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.