ಡೆಂಗ್ಯೂ ಮುಂಜಾಗೃತೆ: ಫಾಗಿಂಗ್
ಲಕ್ಷ್ಮೇಶ್ವರ,ಜು12: ತಾಲೂಕಿನ ಗೋನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋನಾಳ ಗುಲಗಂಜಿಕೊಪ್ಪ ಮತ್ತು ಒಡೆಯರ ಮಲ್ಲಾಪುರ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿಯವರು ಡೆಂಗ್ಯೂ ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳಲ್ಲಿ ಫಾಗಿಂಗ್ ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜನ ಗೌಡ ಕೆಂಚನಗೌಡ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನರು ನೀರು ಸಂಗ್ರಹಿಸಿ ಅವುಗಳನ್ನು ಬಾಯಿ ತೆರೆದು ಇಡಬಾರದು. ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಲ್ಲೆಂದರಲ್ಲಿ ಕಸ ಕಡ್ಡಿಗಳ ಮತ್ತು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಡೆಂಗ್ಯೂ ದಿನದಿಂದ ದಿನಕ್ಕೆ ಹಬ್ಬುತ್ತಿದ್ದು ಸಾರ್ವಜನಿಕರು ಶುಚಿತ್ವಕ್ಕೆ ಮನ್ನಣೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪದ್ಮರಾಜ ಪಾಟೀಲ್ ಕರಿಯಪ್ಪ ಗೌಡ ಹೊಸಗೌಡ್ರ ಅಣ್ಣಪ್ಪ ರಾಮಗಿರಿ ಗ್ರಾಮದ ಮುಖಂಡರಾದ ಭರಮಣ್ಣ ರೊಟ್ಟಿಗವಾಡ ನಿಂಗನಗೌಡ ಮರಲಿಂಗನಗೌಡರ ಬಸವರಾಜ ಮಲ್ಲೂರ ಚಂದ್ರು ತಳವಾರ ನಿಂಗನಗೌಡ ಮನಕಟ್ಟಿ, ಗಂಗಾಧರ್ ಮಾದರ್ ಇದ್ದರು.