ನೇಕಾರಿಕೆಯಲ್ಲಿ ನವೀನ ಕೌಶಲ್ಯತೆ ಅಳವಡಿಸಿಕೊಳ್ಳಲು ಕರೆ
ಗುಳೇದಗುಡ್ಡ,ಜು12: ಅವಸಾನದ ಅಂಚಿನಲ್ಲಿರುವ ಮಗ್ಗಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ನೇಕಾರಿಕೆ ವೃತ್ತಿ ಜೀವನ ಮುಂದುವರೆಯಬೇಕಾದರೆ ಇಂದಿನ ಕಾಲಕ್ಕೆ ತಕ್ಕಂತೆ ನವೀನ ಕೌಶಲ್ಯತೆ ಅಳವಡಿಸಿಕೊಳ್ಳವುದು ಅನಿವಾರ್ಯ. ಮಕ್ಕಳಿಗೆ ನೇಯ್ಗೆಯ ಕೌಶಲ್ಯ ಕಲಿಸಿದರೆ ಮುಂದೆ ಅದು ಮಕ್ಕಳ ವೃತ್ತಿಗೆ ಅವಕಾಶ ನೀಡಿದಂತಾಗುತ್ತದೆ ಎಂದು ಬೆಂಗಳೂರಿನ ಐಎಫ್‍ಎ ಕಲಾಶಿಕ್ಷಣದ ಕಾರ್ಯಕ್ರಮಾಧಿಕಾರಿ ರಾಧಿಕಾ ಭಾರಧ್ವಾಜ ಹೇಳಿದರು.
ಅವರು ಪಟ್ಟಣದ ಬಾಲಕಿಯರ ಸರಕಾರಿ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಮೇಶ ಬಳ್ಳಾ ಅವರು ಸಂಪಾದಿಸಿದ ಮಕ್ಕಳ ಬರಹಗಳ ಸಂಕಲನ ಮಗ್ಗದ ಮಾತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಗ್ಗದ ಮಾತು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಯಾಶೀಲ ಬರವಣೆಗೆಯಲ್ಲಿ ತೊಡಗಿಕೊಳ್ಳಬೇಕು. ನಿರಂತರ ಓದುವುದರಿಂದ ಬರವಣೆಗೆಯಲ್ಲಿ ಕ್ರಿಯಾಶೀಲತೆ ಬೆಳಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ವೈವಿದ್ಯಮಯ ಪುಸ್ತಕಗಳ್ನು ಓದಬೇಕು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಉಪಪ್ರಾಚಾರ್ಯ ಎಂ.ಪಿ. ಮಾಗಿ, ರಮೇಶ ಬಳ್ಳಾ, ಕಿಶನರಾವ ಕುಲಕರ್ಣಿ, ಸಿ.ಎಂ. ಕುರಬರ, ಲಲಿತಾ ಅಂಗಡಿ, ಪಿ.ಆರ್. ಮೂಲಂಗಿ, ವೈ.ಜಿ.ತಳವಾರ, ಎಸ್.ಎಸ್. ಪಟ್ಟಣಶೆಟ್ಟಿ, ದೇವರಾಜ ಅಡ್ಡಿ, ಎಸ್.ಎಂ. ಬೇಸ್ಗರ, ಎಚ್.ಎಸ್. ಬಿರಾದಾರ, ಶಿಲ್ಪಾ ದಳವಾಯಿ, ಸವಿತಾ ದೇವಗಿರಕರ, ಭಾಗ್ಯಮ್ಮ ಎಸ್, ಎಸ್.ಎಸ್. ಉಳ್ಳಾಗಡ್ಡಿ, ಸಿ.ಪಿ. ಹಲಗಲಿ ಹಾಗೂ ಶಿಕ್ಷಕರು ಇದ್ದರು.