ಪ್ರಗತಿ ಪರಿಶೀಲನಾ ಸಭೆ
ಗದಗ,ಜು12: ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿ.ಪಂ.ಸಿಇಒ ಎಸ್ ಭರತ್ ಇವರ ಅಧ್ಯಕ್ಷತೆಯಲ್ಲಿ ಗುರುವಾರ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಜಿ.ಪಂ.ಸಿಇಓ ಭರತ್ ಎಸ್ ಅವರು ಮಾತನಾಡಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ರೋಗವನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಗ್ರಾಮಮಟ್ಟದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಛರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣದ ವಿಷಯವಾಗಿ ಅವಶ್ಯಕತೆಯನುಸಾರ ವೈಯಕ್ತಿಕ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣ ಮಾಡಲು ಕಾರ್ಯಾದೇಶ ವಿತರಿಸಿ ತುರ್ತಾಗಿ ಪ್ರಗತಿ ಸಾಧಿಸುವಂತೆ ಸೂಚಿಸಿದರು.
ಈಗಾಗಲೇ ತಿಳಿದಿರುವಂತೆ ಗ್ರಾಮದಲ್ಲಿ ಮೂಲ ಸಮಸ್ಯೆಗಳಲ್ಲಿ ಒಂದಾದ ಕೊಳಚೆ ನೀರು ನಿರ್ವಹಣೆಯ ವಿಷಯವಾಗಿ ಹಲವಾರು ಸವಾಲುಗಳು ತಲೆದೂರುತ್ತಿದ್ದು ತುರ್ತಾಗಿ ಬೂದು ನೀರು ನಿರ್ವಹಣೆಯ ಕಾಮಗಾರಿಗಳನ್ನು ಪ್ರಾರಂಭಿಸಿ ಮುಕ್ತಾಯಗೊಳಿಸಲು ಕ್ರಮ ವಹಿಸಬೇಕೆಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಿ ಗುತಿಸಿರುವ ವೈಯಕ್ತಿಕ ಫಲಾನುಭವಿಗಳಿಗೆ ಕಾಮಗಾರಿ ಆದೇಶವನ್ನು ನೀಡಿ ಕೂಡಲೇ ಶೌಚಾಲಯವನ್ನು ನಿರ್ಮಾಣ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು.
ಗ್ರಾಮಗಳಲ್ಲಿ ಮನೆ-ಮನೆಗಳಿಂದ ಸಂಗ್ರಹಿಸಬೇಕಿರು ಹಸಿ ಮತ್ತು ವಣ ಕಸಗಳನ್ನು ವಿಂಗಡಣೆ ಮಾಡಿ ಸಮಗ್ರವಾಗಿ ನಿರ್ವಹಣೆ ಮಾಡುವ ಬಗ್ಗೆ ಎಲ್ಲಾ ಪಂಚಾಯತಿಗಳ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ಹೆಚ್ಚಿನ ಗಮನಹರಿಸುವುದು.
ಜಿಲ್ಲೆಯಲ್ಲಿ ಕಳೇದೆರಡು ವರ್ಷಗಳಿಂದ ಮುಕ್ತಾಯಗೊಳಿಸದೇ ಬಾಕಿ ಉಳಿದಿರುವ ಸುಮಾರು ಕಾಮಗಾರಿಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮುಕ್ತಾಯಗೋಳಿಸದೇ ಇರುವುದು ಕಂಡುಬಂದಿದ್ದು ಸಂಭಂಧಿಸಿದ ಅಧಿಕಾರಿ/ಸಿಬ್ಬಂದಿಗಳು ಈಬಗ್ಗೆ ತುರ್ತಾಗಿ ಕಾಮಗಾರಿವಾರು ಮತ್ತೊಮ್ಮೆ ಪರಿಶೀಲಿಸಿ ಮುಕ್ತಾಯಗೊಳಿಸುವುದು.
ಸಾಮಾಜಿಕ ಲೆಕ್ಕ ಪರಿಶೋಧನೆ ಅಡಾಕ್ ಸಭೆ ಆಯೋಜನೆ ಮತ್ತು ವಸೂಲಾತಿ ಬಗ್ಗೆರಾಜ್ಯಮಟ್ಟದಲ್ಲಿಈ ವಿಷಯವಾಗಿ ಆಗಿಂದ್ದಾಗ್ಗೆ ಪ್ರಗತಿ ಪರಿಶೀಲನೆ ಕೈಗೊಳ್ಳುತ್ತಿದ್ದು ತಾಲ್ಲೂಕು ಮಟ್ಟದಲ್ಲಿ ನಿಯಮಾನುಸಾರ ವೇಳಾಪಟ್ಟಿಯಂತೆ ಅಡಾಕ್ ಸಭೆಗಳನ್ನು ಆಯೋಜಿಸುವುದು ಹಾಗೂ ಜಿಲ್ಲೆಯಲ್ಲಿ ದಾಖಲಾಗಿರುವ ಸಾಮಾಜೀಕ ಲೆಕ್ಕ ಪರಿಶೋಧನಾ ದೂರುಗಳನ್ನು ವಸೂಲಾತಿ ಮಾಡಿ ಇತ್ಯರ್ಥಪಡಿಸುವುದು.
ಆಸ್ತಿ ತೆರಿಗೆ ವಸೂಲಾತಿ : ಗ್ರಾಮ ಪಂಚಾಯತಿಯಲ್ಲಿ ನಿರಿಕ್ಷಿತ ಮಟ್ಟದಲ್ಲಿ ತರಿಗೆ ಸಂಗ್ರಹಣೆ ಆಗುತ್ತಿಲ್ಲದ ಕಾರಣ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದಾಗಿ ಗಮನಹರಿಸಿ ಅಂತಹ ಗ್ರಾಮ ಪಂಚಾಯತಿಗಳಿಗೆ ಭೇಟಿಮಾಡುವುದು, ಸಿಬ್ಬಂದಿಗಳ ಸಮಸ್ಯೆ ಇರುವಲ್ಲಿ ಸರ್ಕಾರದ ನಿರ್ದೇಶನದಂತೆ ಸ್ವ-ಸಹಾಯ ಸಂಘದ ಸದಸ್ಯರಿಂದ ವಸೂಲು ಮಾಡಿಸಲು ಕ್ರಮವಹಿಸುವಂತೆ ಸೂಚಿಸಿದರು.
ಅಧಿಕಾರಿಗಳು ಹಾಜರಿದ್ದರು.