ಕರಾಟೆ ಪಂದ್ಯಾವಳಿ
ಬಾಗಲಕೋಟೆ,ಜು12: ಇತ್ತೀಚಿಗೆ ನಡೆದ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಗದಗ ಜಿಲ್ಲೆಯಲ್ಲಿ ನ್ಯಾಷನಲ್ ಲೆವೆಲ್ ಇನ್ವಿಟೇಶನ್ ಕರಾಟೆ ಚಾಂಪಿಯನ್ ಶಿಪ್ ತಂಡದವರ ಸಹಭಾಗಿತ್ವದಲ್ಲಿ, ಗೋಲ್ಡನ್ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ( ರಿ ) ಧಾರವಾಡ ಇವರು ಆಯೋಜಿಸಲಾದ ಗದಗ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಇದೆ ಜುಲೈ 6 ಮತ್ತು 7 ನೇ ದಿನದಂದು ನಡೆದ ಕಮತಗಿಯ ಪಟ್ಟಣದ ಬ್ರುಸ್ಲಿ ಕಿಂಗ್ ಕರಾಟೆ ತರಗತಿಯ ವಿದ್ಯಾರ್ಥಿಗಳು ಜಯಶಾಲಿಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಬ್ರುಸ್ಲೀ ಕಿಂಗ್ ಕರಾಟೆ ತರಬೇತಿಯ ಶಿಕ್ಷಕರಾದ ರಾಜೇಂದ್ರ ಡಿ ಭಜಂತ್ರಿ ಅವರು ಮಾತನಾಡಿ ಕಮತಗಿ ಪಟ್ಟಣದ ಕರಾಟೆ ತರಗತಿಯ ವಿದ್ಯಾರ್ಥಿಗಳು ಕಟದಲ್ಲಿ ಒಂಬತ್ತು ಟ್ರೋಪಿಯನ್ನು, ಕುಮಟೆಯಲ್ಲಿ ಒಂಬತ್ತು ಟ್ರೋಪಿಯನ್ನು ಪಡೆದು ಕಮತಗಿಯ ಪಟ್ಟಣದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಮತ್ತು ನ್ಯಾಷನಲ್ ಲೆವೆಲ್ ಕರಾಟೆಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದರು.
ಈ ಪಂದ್ಯಾವಳಿಯಲ್ಲಿ ಜಯಶಾಲಿಯಾದ ಮಕ್ಕಳು ಮೇಘವರ್ಷಿಣಿ ಪಲ್ಲ, ಕಟ ಟ್ರೋಫಿ, ಕುಮಟೆ ಟ್ರೋಫಿ, ಅರ್ಪನಾಜ್- ಕಟ ಟ್ರೋಫಿ, ಮನನ -ಕಟ ಟ್ರೋಫಿ, ಕುಮಟೆ ಟ್ರೋಫಿ, ಧನ್ವಿ -ಕಟ ಟ್ರೋಫಿ, ಪೂರ್ವಿಕ -ಕಟ ಟ್ರೋಫಿ, ರಾಜೇಶ್ವರಿ- ಕಟ ಟ್ರೋಫಿ, ಕುಮಟಾ ಟ್ರೋಫಿ, ಮುತ್ತುರಾಜ್ – ಕಟ ಟ್ರೋಫಿ, ಕುಮಟೆ ಟ್ರೋಫಿ, ಆದರ್ಶ-ಕಟ ಟ್ರೋಫಿ, ಕುಮಟೆ ಟ್ರೋಫಿ, ಮಲ್ಲು -ಕಟ ಟ್ರೋಫಿ, ಕುಮಟಾ ಟ್ರೋಫಿ ಯನ್ನು ಪಡೆದುಕೊಂಡಿದ್ದಾರೆ ಎಂದು ರಾಜೇಂದ್ರ ಡಿ ಬಜಂತ್ರಿ ಹೇಳಿ ಹರ್ಷ ವ್ಯಕ್ತಪಡಿಸಿದರು.