ಗಣಿ ಬಾಧಿತ ಪ್ರದೇಶಗಳನ್ನು ಅಭಿವೃದ್ದಿ; ಸಂಸದರ ಕಾರ್ಯಕ್ಕೆ ಶ್ಲಾಘನೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಜು.12: ಗಣಿ ಬಾಧಿತ ಪ್ರದೇಶಗಳನ್ನು ಅಭಿವೃದ್ದಿಗೆ ಮಾಡುವ ಬಗ್ಗೆ ಲೋಕಸಭಾ ಸದಸ್ಯ ಗೋವಿಂದ ಕಾರಜೋಳ ಅವರು ಕೈಗೊಂಡಿರುವ ಕಾರ್ಯ ಶ್ಲಾಘನೀಯವಾದದ್ದು ಎಂದು ಅಮ್ ಆದ್ಮಿ ಪಾರ್ಟಿ ಅಧ್ಯಕ್ಷ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಹೇಳಿದ್ದಾರೆ.ಭೀಮಸಮುದ್ರ, ಮ್ಯಾಗಲಹಳ್ಳಿ, ಕಡ್ಲೆ ಗುದ್ದು  ಮಧ್ಯಭಾಗದಲ್ಲಿದೆ 5 ಗಣಿ ಕಂಪನಿಗಳು ಗಣಿಗಾರಿಕೆ ನಡೆಸುತ್ತಿದ್ದು, ಇದುವರೆಗೂ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸಿಲ್ಲ. ಸುಮಾರು 50 ವರ್ಷಗಳಿಂದ ಕಂಪೆನಿಗಳು ಗಣಿಗಾರಿಕೆ ಮಾಡುತ್ತಿದ್ದು, ರೈತರ ಕೃಷಿ ಜಮೀನ ಮೇಲೆ ಪರಿಣಾಮ ಬೀರುವ ನಿಟ್ಟಿನಲ್ಲಿ ಗಣಿಗಾರಿಕೆ ನಡೆಸುತ್ತಿವೆ. ಇದರಿಂದ ರೈತರು ಅಸಹಾಯಕರಾಗಿದ್ದಾರೆ. ಅಲ್ಲದೆ ರೈತರ ಮೇಲೆ ಎಷ್ಟೋ ಸಾರಿ ಕಂಪನಿಗಳು ದೌರ್ಜನ್ಯ ನಡೆಸಿವೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದರು.ರೈತರಿಂದ ಗಣಿ ಕಂಪನಿಗಳಿಗೆ ತೊಂದರೆ ಇಲ್ಲ. ಆದರೆ ಗಣಿ ಕಂಪನಿಗಳಿಂದ ರೈತರಿಗೆ ತೊಂದರೆ  ಆಗುತ್ತಿದೆ. ಇಲ್ಲಿನ ರಸ್ತೆಗಳು ಶಾಸಕರ ಅನುದಾನದಲ್ಲಿ ಆಗಿದೆ ಹೊರತು ಯಾವುದೇ ಸಿಎಸ್ಆರ್ ಫಂಡ್ ಮೂಲಕ ಮಾಡಿಲ್ಲ ಗಣಿ ಲಾರಿಗಳ ಓಡಾಟದಿಂದ ರಸ್ತೆಗಳು ಆಳಾಗುತ್ತಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಗಣಿ ಗಣಿಗಾರಿಕೆ ಮಾಡುವುದು ರದ್ದು ಮಾಡಬೇಕು. ಇದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಮತ್ತು ರೈತರ ಜಮೀನಿಗಳಿಗೂ ಅನುಕೂಲ ಆಗಲಿದೆ ಎಂದರು.ರಸ್ತೆಯಲ್ಲಿ ಗಣಿಗಾರಿಕೆ ಲಾರಿ ಹಾದಿರು ಹೊರಡುತ್ತವೆ ಕಾಲ್ ಜಾಡು ಎಂಬುವ ಮಾರ್ಗವಿದ್ದರೂ ಇಲ್ಲಿ ಲಾರಿಗಳದ್ದೇ ದರ್ಬಾರ್ ಯಾರೂ ಕೇಳುವವರಿಲ್ಲಗಣಿಗಾರಿಕೆ ಪ್ರದೇಶದ ಸುತ್ತಮುತ್ತ 5 ಗ್ರಾಮಗಳಿದ್ದು, ಈ ಗ್ರಾಮಗಳಿಗೆ  ರಸ್ತೆ  ಶೌಚಾಲಯ, ಶಾಲೆಗಳಿಗೆ ಕಂಪ್ಯೂಟರ್ ಉಪಕರಣ ಸಮವಸ್ತ್ರ, ಊಟದ ವ್ಯವಸ್ಥೆ ಮಕ್ಕಳಿಗೆ ಶೌಚಾಲಯದ ವ್ಯವಸ್ಥೆ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡುವುದರ ಜೊತೆಗೆ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ವ್ಯವಸ್ಥೆ ಮಾಡಬಹುದು ಈ ನಿಟ್ಟಿನಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಸಭೆ ಕರೆದು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.