ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅವೈಜ್ಞಾನಿಕ ನೇಮಕಾತಿ ಜಿಲ್ಲಾಧಿಕಾರಿಗಳಿಗೆ ದೂರು
ಬೀದರ:ಜು.12: ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಯ ಜೀವನವನ್ನು ಸುಮಧುರವಾದ ಕ್ಷಣವೆಂದು ಪರಿಗಣಿಸಲಾಗುವುದು. ಅವರ ಶಿಕ್ಷಣದ ವ್ಯವಸ್ಥೆಯನ್ನು ಉತ್ತಮವಾದ ನಿಯಮದಿಂದ ಕೂಡಿದರೆ ಅದು ಸೃಜನಶಿಲವಾದ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯವಾಗುವುದು. ಆದರೆ ಜಿಲ್ಲಾ ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆ ಬೀದರನಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ಅಂದರೆ ಅಲ್ಪಸಂಖ್ಯಾಂತರ ಮೂರಾರ್ಜಿ ದೇಸಾಯಿ (ಆಂಗ್ಲ ಮಾಧ್ಯಮ) ವಸತಿ ಶಾಲೆ ಬೀದರನಲ್ಲಿ ನಮಗೆ ಕಂಡುಬಂದ ಹಾಗೆ ನಿಯಮ ಬಾಹಿರವಾದ ರೀತಿಯಲ್ಲಿ ಪ್ರವೇಶವನ್ನು ತೆಗೆದುಕೊಳ್ಳಲಾಗಿದೆ ಎಂದು ಕಂಡು ಬರುತ್ತಿದೆ.
ಬೇಡಿಕೆಗಳು ಃ ವಿದ್ಯಾರ್ಥಿಗಳ ಪ್ರವೇಶವು ನಿಯಮಾನುಸಾರ ನಡೆಯಬೇಕು. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ತಿಳಿಸಬೇಕು. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಬೇಕು.ಆಯ್ಕೆಯಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳ (ಶಾಲಾವಾರು) ಪ್ರವೇಶಾತಿಯ ಮಾಹಿತಿಯನ್ನು ಒದಗಿಸಬೇಕು. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಕುಂಠಿತಗೊಂಡಿರುವುದಕ್ಕೆ ಕಾರಣವೆನೆಂದು ತಿಳಿಸುವುದು. 2024-25ನೇ ಸಾಲಿನಲ್ಲಿ ಪ್ರಾರಂಭವಾದ ಮೂರಾರ್ಜಿ ದೇಸಾಯಿ ವಸತಿ ಶಾಲೆ (ಆಂಗ್ಲ ಮಾಧ್ಯಮ) ಹಮೀಲಾಪೂರ ಬೀದರನಲ್ಲಿ ಅಡುಗೆ ಸಹಾಯಕ ಸಿಬ್ಬಂದಿ, ‘ಡಿ’ ಗ್ರೂಪ್ ಹುದ್ದೆ ಮತ್ತು ಅತಿಥಿ ಶಿಕ್ಷಕರ ನೇಮಕಾತಿಯನ್ನು ರದ್ದುಪಡಿಸಿ ನಿಯಮಾನುಸಾರವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಇಂದು ಅಹಿಂದ ಚಿಂತಕರ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಯಿತು.
ಈ ಸಂದರ್ಭದಲ್ಲಿ ವಿಭಾಗಿಯ ಹೈದ್ರಾಬಾದ ಕರ್ನಾಟಕ ಅಧ್ಯಕ್ಷರಾದ ದೀಲಿಪಕುಮಾರ ವರ್ಮಾಜಿಲ್ಲಾ ಗೌರವಾಧ್ಯಕ್ಷರಾದ ಘಾಳೆಪ್ಪಾ ಅಂತಿ, ಜಿಲ್ಲಾಧ್ಯಕ್ಷರಾದ ಕೆ.ಧನರಾಜ, ಸಮಾಜ ಸೇವಕರಾದ ರಾಮಣ್ಣಾ, ಬಬಿತಾ ಭಾಲ್ಕಿ ಸೇರಿಂತೆ ಇತರರು ಉಪಸ್ಥಿತರಿದ್ದರು.