ಸುಶೀಲಾನಗರ ಗ್ರಾಮದಲ್ಲಿ ಮಳೆಗೆ ಮನೆಗಳು ಬಿದ್ದಿರಿವುದು- ಅತಂಕದಲ್ಲಿ ಕುಟುಂಬಗಳು
ಸಂಜೆವಾಣಿ ವಾರ್ತೆ
ಸಂಡೂರು:ಜು:12: ಕಳೆದ 2 ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ ಪರಿಣಾಮ ತಾಲೂಕಿನ ಬಹುತೇಕ ಚೆಕ್ ಡ್ಯಾಂಗಳು ತುಂಬಿ ಹರಿಯುತ್ತಿವೆ.
ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ಅತ್ಯುತ್ತಮ ಮಳೆಯಿಂದಾಗಿ ಕೇಶಲಿ ಬಾಯಿ ಎನ್ನುವವರ ಮನೆ ಕುಸಿದ ಪರಿಣಾಮ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಲ್ಲದೆ ದಿನಾಂಕ 6 ರಂದು ತಾಲೂಕಿನ ಸಂಡೂರು ಮಳೆ ಮಾಪನ ಕೇಂದ್ರದಲ್ಲಿ 32.2 ಮಿ.ಮೀ., ಚೋರನೂರು ಕೇಂದ್ರದಲ್ಲಿ 7.8 ಮಿ.ಮೀ., ಕುರೇಕುಪ್ಪ ಕೇಂದ್ರದಲ್ಲಿ 20.00 ಮಿ.ಮೀ., ವಿಠಲಾಪುರ ಕೇಂದ್ರದಲ್ಲಿ 14.2 ಮಿ.ಮೀಟರ್ ಮಳೆಯಾಗಿದೆ, ಅದರಂತೆ ದಿನಾಂಕ: 9.07.2024 ರಂದು ಸಂಡೂರು ಕೇಂದ್ರದಲ್ಲಿ 4.6 ಮಿ.ಮೀ., ಚೊರನೂರು ಕೇಂದ್ರದಲ್ಲಿ 10.00 ಮಿ.ಮೀ. ಕುರೇಕುಪ್ಪದಲ್ಲಿ 3. ಮಿ. ಮೀಟರ್ ಮಳೆಯಾಗಿದೆ ಪರಿಣಾಮ ತಾಲೂಕಿನ ಸಂಡೂರು ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಚೆಕ್ ಡ್ಯಾಂ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು ಇದರಿಂದ ಅತಿ ರಭಸವಾಗಿ ನಂದಿಯಂತೆ ತುಂಬಿ ಹರಿಯುತ್ತಿರುವುದು ನೋಡುಗರ ಗಮನ ಸೆಳೆಯಿತು.
ಇದರಿಂದ ಶಿವಪುರ ಕೆರೆಗೂ ಸಹ ಹೆಚ್ಚಿನ ಪ್ರಮಾಣ ನೀರು, ನಾರಿಹಳ್ಳಕ್ಕೂ ಸಹ ನೀರಿನ ಪ್ರಮಾಣದ ಒಳ ಹರಿವು ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಕರೆ ಮತ್ತು ಡ್ಯಾಂ ತುಂಬುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.