ವಾಂತಿ ಬೇಧಿಗೆ ಕಲುಷಿತ ಆಹಾರವೇ ಕಾರಣ
ಸಂಜೆವಾಣಿ ವಾರ್ತೆ
ಸಂಡೂರು:ಜು:12::  ಸಂಡೂರು ತಾಲೂಕಿನ ಚೋರನೂರು ಹೋಬಳಿಯ ನಾಗೇನಹಳ್ಳಿಯಲ್ಲಿ ನಡೆದ ವಾಂತಿಬೇಧಿ ಪ್ರಕರಣಕ್ಕೆ ಕಲುಷಿತ ಆಹಾರ ಸೇವನೆ ಕಾರಣವಾಗಿರುವ ಸಾಧ್ಯತೆ ಇದೆ. ಈ ವಿಚಾರವಾಗಿ ಸಾರ್ವಜನಿಕರ ಮನೆಗೆ ತೆರಳಿ ಕುದಿಸಿ ಆರಿಸಿ ನೀರನ್ನು ಕುಡಿಯಲು ಮತ್ತು ಶುದ್ಧ ಆಹಾರ ಸೇವನೆ ಕುರಿತು ಜಾಗೃತಿ ಮೂಡಿಸಲಾಘುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿಯಂತ್ರಣದಲ್ಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು ದಿನದ 24 ಗಂಟೆ ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ವೈದ್ಯಕೀಯ ತಂಡ ಸ್ಥಳದಲ್ಲೆ ಇದ್ದು ಸೂಕ್ತ ಚಿಕಿತ್ಸೆ ನೀಡಲಿದೆ. ಆಶಾಕಾರ್ಯಕರ್ತೆಯರು ಮತ್ತು ವೈದ್ಯರು, ಸಿಬ್ಬಂದಿಯು ಒಂಬತ್ತು ತಂಡ ರಚಿಸಿ ಪ್ರತಿ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸ್ವಚ್ಛತೆಯ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಎಲ್ಲಾ ರಮೇಶ ಬಾಬು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮರಿಯಂಬಿ. ವಿ.ಕೆ. ತಾಲೂಕು ಪಂಚಾಯಿತಿ ಕಾರ್ಯಾನಿರ್ವಾಹಕ ಅಧಿಕಾರಿ ಷಡಾಕ್ಷರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್, ವೈದ್ಯಾಧಿಕಾಋಇ ಅಕ್ಷಯ ಶಿವಪುರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್., ದಾಸಪ್ಪ, ಪಿ.ಡಿ.ಓ. ಕುಮಾರಸ್ವಾಮಿ, ಯರಿಸ್ವಾಮಿ, ಹನುಮಂತಪ್ಪ ಹಾಗೂ ಇತರರು ಉಪಸ್ಥಿತರಿದ್ದರು.