ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಗೃತಿ ಜಾಥಾಗೆ ಚಾಲನೆ
ಸಂಜೆವಾಣಿ ವಾರ್ತೆ
ಸಂಡೂರು :ಜು: 12: : ಸಂಡೂರು: ಜಗತ್ತಿನಜನಸಂಖ್ಯೆಯಲ್ಲಿ ಭಾರತ ಪ್ರಥಮಸ್ಥಾನವನ್ನು ಹೊಂದಿದೆ, ಅದರೆ ಇದು ಬಹಳಷ್ಟು ಸಂದರ್ಭದಲ್ಲಿ ಸಮಸ್ಯೆಗಳ ಉಲ್ಭಣಕ್ಕೆ , ದೇಶದ ಪ್ರಗತಿಗೆ ಮಾರಕವಾಗುವಂತಹ ಸ್ಥಿತಿ ಉಂಟಾಗುತ್ತಿದೆ, ಅದ್ದರಿಂದ ನಾವು ಜನಸಂಖ್ಯೆಯ ದಿನದಂದು ಪ್ರತಿಯೊಬ್ಬರೂ ಸಹ ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮಿಸಬೇಕು, ಜನಸಂಖ್ಯಾನೀತಿಯನ್ನು ಅನುಸರಿಸೋಣ ಎಂದು ಡಾ. ಸತೀಶ್ ಕರೆನೀಡಿದರು.
ಅವರು ಇಂದು ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ಬಳ್ಳಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಸಾರ್ವಜನಿಕ ಆಸ್ಪತ್ರೆ ಸಂಡೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಜುಲೈ 11 2024 ಈ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಜನಸಂಖ್ಯಾ ಸ್ಪೋಟದಿಂದ ಸಮಸ್ಯೆಗಳು ಉದ್ಭವವಾಗುತ್ತವೆ, ಇದರಿಂದ ಬಡತನ, ಅನಕ್ಷರತೆ, ನಿರುದ್ಯೋಗ ಹೆಚ್ಚಾಗುವ ಮೂಲಕ ಸಂಪನ್ಮೂಲಗಳ ಕೊರತೆ ಹೆಚ್ಚಾಗಿ ಸಮಸ್ಯೆ ಉಂಟಾಗುತ್ತದೆ, ಅದ್ದರಿಂದ ಚಿಕ್ಕ ಸಂಸಾರ, ಚೊಕ್ಕ ಸಂಸಾರ ನೀತಿಯನ್ನು ಅನುಸರಿಸೋಣ ಎಂದರು.
ಕಾರ್ಯಕ್ರಮದಲ್ಲಿ ದಂತ ವೈದ್ಯಾಧಿಕಾರಿಗಳಾದ ಡಾಕ್ಟರ್ ಫ್ರೋಜರಿ ಬಾನ್, ಡಾಕ್ಟರ್ ಕಲಾವತಿ ಇವರು ಈ ಜಾಥಾ ದಲ್ಲಿ ಭಾಗಿಯಾಗುವ ಮೂಲಕ ಜನಸಂಖ್ಯೆ ನಿಯಂತ್ರ ಬಹು ಮುಖ್ಯ ಎನ್ನುವುದನ್ನು ಸಾರಿದರು.
ಈ ಸಂದರ್ಭದಲ್ಲಿ  ಆಸ್ಪತ್ರೆಗಳ ಸಿಬ್ಬಂದಿ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಸಿಬ್ಬಂದಿ ವರ್ಗದವರು ಆಶಾ ಕಾರ್ಯಕರ್ತೆಯರು ಭಾಗವಹಿಸಿ ಈ ಜಾಥಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಸ್ವಾಗತ ಭಾಷಣ ಶ್ರೀ ಬಂಡೆಗೌಡರ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಇವರು ನಿರ್ವಹಿಸಿದರು ಮತ್ತು ವಿಜಯಲಕ್ಷ್ಮಿ, ನೀಲಮ್ಮ , ಶ್ರೀಮತಿ ಪವಿತ್ರ, ಕೊಟ್ರೇಶ್, ರಮೇಶ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.