ಕೂಡ್ಲಿಗಿಯಲ್ಲಿ ಬೆಳ್ಳಂಬೆಳಿಗ್ಗೆ,ಆಟದ ಮೈದಾನದಲ್ಲಿ  ಕರಡಿ ವಾಕಿಂಗ್.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.12 :- ಕೂಡ್ಲಿಗಿ ಪಟ್ಟಣದಲ್ಲಿ ಕೆಲದಿನಗಳ ಹಿಂದೆ ಪ್ರವಾಸಿ ಮಂದಿರದ ಮುಂದೆ ರಾತ್ರಿ ಸಮಯದಲ್ಲಿ ಕಾಣಿಸಿಕೊಂಡ ಕರಡಿಯ ನೆನಪು ಮಾಸುವ ಮುನ್ನವೇ  ಇಂದು ಬೆಳ್ಳಂಬೆಳಿಗ್ಗೆ 4ಗಂಟೆ ಸುಮಾರಿಗೆ  ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಕರಡಿಯೊಂದು ವಾಕಿಂಗ್ ಮಾಡುತ್ತಿದ್ದದ್ದನ್ನು ನಸುಕಿನ ಜಾವ  ಜಾಗಿಂಗ್ ಮಾಡಲು ಕ್ರೀಡಾಂಗಣಕ್ಕೆ ಬಂದ ಪಟ್ಟಣದ ವಾಸಿ  ಸಮರ್ಥ ಎನ್ನುವವರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತುಂಬಾ  ವೈರಲ್ ಆಗುವ ಜೊತೆಗೆ ಪಟ್ಟಣದ  ಜನತೆಗೆ ಭಯದ ವಾತಾವರಣ ಸೃಷ್ಟಿಯಾಗಿದೆ.
ಸುಮಾರು ಎರಡರಿಂದ ಮೂರುವರ್ಷದ ಕರಡಿ ಇದಾಗಿದ್ದು ಬಹುಷಃ ಆಹಾರ ಅರಸಿ ಬಂದಿರಬಹುದು ಎಂದು ಊಹಿಸಲಾಗಿದೆ. ಇಂದು ಬೆಳಿಗ್ಗೆ 4ಗಂಟೆ ಸಮಯ ಸಮರ್ಥ ಎನ್ನುವ ಯುವಕ ಜಾಗಿಂಗ್ ಮಾಡಲು ಮಹಾದೇವ ಮೈಲಾರ ಕ್ರೀಡಾಂಗಣಕ್ಕೆ ಹೋಗಿ ಜಾಗಿಂಗ್ ಮಾಡುತ್ತಿರುವಾಗ್ಗೆ ಬಾಸ್ಕೆಟ್ ಬಾಲ್ ಮೈದಾನದಿಂದ ಸ್ಟೇಡಿಯಂ ಪಕ್ಕದಲ್ಲಿ ಲೈಟ್ ಬೆಳಕಿನಲ್ಲಿ ಒಂಟಿಯಾಗಿದ್ದ ಕರಡಿ ವಾಕಿಂಗ್ ಮಾಡುತ್ತ ಆಸ್ಪತ್ರೆ ಕಡೆಗೆ ಸಾಗಿದ್ದನ್ನು  ಕಂಡು ಭಯಗೊಂಡ ಸಮರ್ಥ ಕೆಲವೇ ಅಂತರದ ದೂರದಲ್ಲಿ ನಿಂತು ಮೊಬೈಲ್ ವಿಡಿಯೋ ಮೂಲಕ ಕರಡಿಯ ಓಡಾಟವನ್ನು ಸೆರೆಹಿಡಿದಿದ್ದಾರೆ ನಂತರ ಕ್ರೀಡಾಂಗಣಕ್ಕೆ ಬಂದವರಿಗೆ ವಿಷಯ ತಿಳಿಸಿದ್ದಾರೆ ಮತ್ತು ಕೆಲವರ ಮೊಬೈಲ್ ಗಳಿಗೆ ಈ ವಿಡಿಯೋ ಕಳಿಸಿದ್ದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತುಂಬಾ ವೈರಲ್ ಆಗಿದೆ ಎಂದು ಹೇಳಬಹುದಾಗಿದೆ.
ಭಯದ ಭೀತಿಯಲ್ಲಿ ಜನತೆ : ಕೆಲದಿನಗಳ ಹಿಂದಷ್ಟೇ ಪ್ರವಾಸಿ ಮಂದಿರದ ಮುಂದೆ ಕರಡಿ ಪ್ರತ್ಯಕ್ಷ ಕಂಡಿದ್ದ ಜನತೆ ಅದರ ನೆನಪು ಮಾಸುವ ಮುನ್ನವೇ ಇಂದು ಕರಡಿ ಆಟದ ಮೈದಾನದಲ್ಲಿ ಬೆಳ್ಳಂ ಬೆಳಿಗ್ಗೆ ಕಾಣಿಸಿಕೊಂಡ ಹಿನ್ನಲೆಯಲ್ಲಿ  ಮತ್ತು ಪಟ್ಟಣದ ಹೊರವಲಯದ ಅಮರದೇವರಗುಡ್ಡ ಹಾಗೂ ಗುಂಡಿನಹೊಳೆ ರಸ್ತೆ ಮಧ್ಯೆ ಚಿರತೆ ಸಹ ರಾಜಾರೋಷವಾಗಿ ಓಡಾಡುತ್ತಿದ್ದೂ ಇದರಿಂದ ಬಾಪೂಜಿ ನಗರದ ಕಡೆಗೆ ಹೋಗುವ ಜನತೆ ಹಾಗೂ ಗುಂಡಿನಹೊಳೆ ಕಡೆಗೆ ಹೋಗುವ ರೈತರು ಹಾಗೂ ಚೋರುನೂರು ಕಡೆ ವಾಹನದಲ್ಲಿ ಸಂಚರಿಸುವ ಜನರು  ಭಯಭೀತಾರಾಗಿದ್ದಾರೆ ಅಲ್ಲದೆ   ಜನರ ಪ್ರಾಣ ರಕ್ಷಣೆ ಕೋರಿ ಅರಣ್ಯ ಇಲಾಖೆ ಮೊರೆ ಹೋಗಿದ್ದು ಸಿಬ್ಬಂದಿ ನೇಮಿಸಿ ಪ್ರಾಣಿಗಳು ಹಾಗೂ ಜನರ ನಡುವಿನ ಸಂಘರ್ಷ ತಪ್ಪಿಸಲು ಮುಂದಾಗುವುದಾಗಿ ಕೂಡ್ಲಿಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
@12bc =  ವಾಯುವಿಹಾರ ಮಾಡುವವರಿಗೆ ಅರಣ್ಯ ಅಧಿಕಾರಿ  ಕಿವಿಮಾತು :
ಪಟ್ಟಣದಲ್ಲಿ ಇಂದು ಬೆಳಿಗ್ಗೆ ಕಾಣಿಸಿಕೊಂಡ ಕರಡಿಯ ಬಗ್ಗೆ ಮಾಹಿತಿ ಸಿಕ್ಕಿದ್ದು ಕರಡಿಗಳು ಸೇರಿದಂತೆ ಕಾಡು ಪ್ರಾಣಿಗಳಾದ ಚಿರತೆ ಅರಣ್ಯ ವ್ಯಾಪ್ತಿಯಂತಹ ಸಮೀಪದ  ಪ್ರದೇಶದತ್ತ ಆಹಾರ ಹುಡುಕಿಕೊಂಡು ರಾತ್ರಿ ಸಮಯದಲ್ಲಿ ಓಡಾಡುವುದು ಇಂದು ನಿನ್ನೆಯದಲ್ಲ ಈಗೀಗ ಅವುಗಳ ಪ್ರತ್ಯಕ್ಷವಾಗಿದೆ ಎನ್ನುವುದಕ್ಕೆ ಸಿ ಸಿ ಕ್ಯಾಮರಾ ಹಾಗೂ ಮೊಬೈಲ್ ನಲ್ಲಿ ಸೆರೆಯಾಗುವುದು ಸಾಕ್ಷಿಯಾಗಿದೆ. ಬಹಳಷ್ಟು ವರ್ಷಗಳಿಂದ ಕಾಡು ಪ್ರಾಣಿಗಳಾದ ಕರಡಿ ಹಾಗೂ ಚಿರತೆ ಆಹಾರ ಅರಸಿ ನಾಡೊಳಗೆ ಬರುತ್ತಿವೆ ಆದರೆ ಇವೆರಡು ಪ್ರಾಣಿಗಳು ಮನುಷ್ಯನ ಮೇಲೆ ಏಕಾಏಕಿ ದಾಳಿ ಮಾಡುವುದಿಲ್ಲ ಆದರೆ ಜನರ ಕಿರುಚಾಟ ಮಾಡಿದರೆ ಜೀವಭಯದಲ್ಲಿ ದಾಳಿ ಮಾಡುತ್ತವೆ.
ವಾಯುವಿಹಾರಕ್ಕೆ ಹೋಗುವವರು ಬೆಳಕಾದ ಮೇಲೆ ಹೋಗುವುದು ಉತ್ತಮ ಕೂಡ್ಲಿಗಿ ಪಟ್ಟಣದಿಂದ ಅಮರದೇವರಗುಡ್ಡ ಕಡೆಗೆ ವಾಕಿಂಗ್  ಹೋಗುವಾಗ ಒಬ್ಬಂಟಿಯಾಗಿ ಹೋಗದೆ ಇಬ್ಬರಿಗಿಂತ ಜಾಸ್ತಿ ಹೋಗುವುದು, ಕೈಯಲ್ಲಿ ಬ್ಯಾಟರಿ ಇರುವುದು ಮತ್ತು ಕತ್ತಲಲ್ಲಿ ವಾಕಿಂಗ್ ಹೋಗದೆ ಬೆಳಕಾದ ಮೇಲೆ ಹೋಗುವುದು ಸುರಕ್ಷತೆಯೆ ಸರಿ ಎಂದು ವಾಯುವಿಹಾರದ ಜನತೆಗೆ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಸಂದೀಪಕುಮಾರ  ನಾಯಕ ಪತ್ರಿಕೆ ಮೂಲಕ ಸುರಕ್ಷತೆಯ ಕಿವಿಮಾತು ತಿಳಿಸಿದ್ದಾರೆ.
One attachment • Scanned by Gmail