ರಾಜ್ಯಕ್ಕೆ ಏಮ್ಸ್ ಮಂಜೂರಾತಿಗಾಗಿ ಕಲ್ಯಾಣ ಕರ್ನಾಟಕದಲ್ಲಿ ನಿರಂತರ ಪ್ರತಿಭಟನೆ. 16ರಂದು ಜಿಲ್ಲಾ ಕೇಂದ್ರದಲ್ಲಿ ಮನವಿ.
ಸಂಜೆವಾಣಿ ವಾರ್ತೆ
ಹೊಸಪೇಟೆ ಜು12: ರಾಜಕೀಯ ಇಚ್ಛಾಶಕ್ತಿ ಯ ಕೊರತೆಯಿಂದ ರಾಜ್ಯಕ್ಕೆ ಮಂಜೂರಾದ ಏಮ್ಸ್ಆಸ್ಪತ್ರೆ ರಾಯಚೂರಿನಲ್ಲಿಯೆ ಆಗಬೇಕು ಎಂದು ಜುಲೈ16ರಂದು ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲಿಯೂ ಪ್ರತಿಭಟನೆ ಮಾಡಲಾಗುವುದು ಎಂದು ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಅಶೋಕಕುಮಾರ ಜೈನ್ ತಿಳಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕದ ಬಹುತೇಕ 7ಜಿಲ್ಲೆಯಲ್ಲಿ ಮೂಲಸೌಕರ್ಯ, ವೈದ್ಯಕೀಯ, ಶಿಕ್ಷಣ ರಾಜಕೀಯ ಇಚ್ಛಾಶಕ್ತಿ ಕೊರತೆಯಲ್ಲಿ ಸೊರಗುತ್ತಿದ್ದು ಬಿಸಿಲು, ಉಷ್ಣ ವಿದ್ಯುತ್ ಸ್ಥಾವರಗಳ ಕಾರಣವೂ ರಾಯಚೂರು ರೋಗದಲ್ಲಿ ನರಳುವಂತೆ ಮಾಡಿದೆ. ಅಪೌಷ್ಟಿಕತೆಯಲ್ಲಿಯೂ ದೇಶದ ಗಮನ ಸೆಳೆದಿದ್ದು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಏಮ್ಸ್ ಅವಶ್ಯಕತೆ ಇದೆ, ಮುಖ್ಯಮಂತ್ರಿ, ಆರೋಗ್ಯ ಸಚಿವರು ಸೇರಿದಂತೆ ಎಲ್ಲಾ ಮನವಿಗೆ ಪುರಸ್ಕಾರ ನೀಡಿ ರಾಯಚೂರಿನಲ್ಲಿ ಸುದೀರ್ಘ ಹೋರಾಟವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಏಮ್ಸ್ ಸ್ಥಾಪನೆಗೆ ಮುಂದಾಗಬೇಕು ಬಜೆಟ್ ನಲ್ಲಿ ಅನುದಾನ ನೀಡಿ ಏಮ್ಸ್ ಆರಂಭಕ್ಕೆ ಮುಂದಾಗದಿದ್ದರೆ, ಉಗ್ರ ಹೋರಾಟಕ್ಕೆ ಮುಂದಾಗವುದಾಗಿ ತಿಳಿಸಿದರು.
ಕಲ್ಯಾಣ ಕರ್ಮಾಟಕದ ಸಮಘತ ಅಭಿವೃದ್ಧಿಗೆ ಹಾಗೂ ಮುಂದಿನ ಪೀಳಿಗೆಯ ಉಜ್ವಲಭವಿಷ್ಯ ಹಾಗೂ ಆರೋಗ್ಯ ವೃದ್ಧಿಗೆ ನಿರಂತರ ಹೋರಾಟವನ್ನು ಪರಿಗಣಿಸಿ ಏಮ್ಸ್ ನ್ನು ರಾಯಚೂರಿನಲ್ಲಿಯೆ ಆರಂಭಿಸಲು ಮುಂದಾಹಬೇಕು.
ಸುದ್ಧಿಗೋಷ್ಠಿಯಲ್ಲಿ ಬೋಡಾರಾಮಪ್ಪ, ಪಿ.ವೆಂಕಟೇಶ, ಗುಜ್ಜಲ ಗಣೇಶ್, ಪರಮೇಶಗೌಡ, ಮಧುರಚೆನ್ನಶಾಸ್ತ್ರಿ, ಘಂಟೆ ಸೋಮಶೇಖರ, ಭರತ್ ಕುಮಾರ ಬಾಲೆಸಾಬ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
One attachment • Scanned by Gmail