ವೀರಶೈವ ವಹಾಸಭಾ ಚುನಾವಣೆಪಂಚಾಕ್ಷರಪ್ಪ ಬಿಚ್ಚಗಲ್ ತಂಡದಿಂದ ಮತಯಾಚನೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.12: ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ 5 ವರ್ಷಗಳ  ಅವಧಿಗೆ ನಡೆಯುತ್ತಿರುವ ಚುನಾವಣೆಯ ಅಂಗವಾಗಿ ಇಂದು  ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡ ಅಧ್ಯಕ್ಷ ಸ್ಥಾನದ  ಆಕಾಂಕ್ಷಿ ಪಂಚಾಕ್ಷರಪ್ಪ ಬಿಚ್ಚಗಲ್ ಅವರ ನೇತೃತ್ವದಲ್ಲಿ  ಕಾರ್ಯಕಾರಿ ಸಮಿತಿ ಸ್ಥಾನದ ಅಭ್ಯರ್ಥಿಗಳಾದ  ಶಂಕರಮೂರ್ತಿ ಮೊದಲಾದವರು  ಇಂದು ತಾಳೂರು ರಸ್ತೆ, ರೇಣುಕಾ ನಗರ, ಶಾಸ್ತ್ರಿನಗರದಲ್ಲಿ ಮತದಾರರ  ಹಾಗೂ ಪ್ರಮುಖ ವೀರಶೈವ ಮುಖಂಡರುಗಳ
ಮನೆಗಳಿಗೆ ತೆರಳಿ  ನಮ್ಮ ತಂಡಕ್ಕೆ ಮತನೀಡಬೇಕು ಎಂದು ಮನವಿ ಮಾಡಿದರು.
ಮಹಾಸಭಾದಲ್ಲಿ ವೀರಶೈವ ಸಮುದಾಯದ ಅಭಿವೃದ್ಧಿ ಮತ್ತಿತರ ದ್ಯೇಯೋದ್ದೇಶಗಳನ್ನು ತಿಳಿಸಿ ಮತಯಾಚನೆ ಮಾಡಿದರು.
 ಈ ಸಂದರ್ಭದಲ್ಲಿ ಜಮಾಪುರದ ರುದ್ರಪ್ಪ, ಎಂ.ಆರ್. ಪಂಪನಗೌಡ ,  ಜೆ ವಿ ಮಂಜುನಾಥ, ದಾಸಾಪುರ ಅರುಣ್ ಕುಮಾರ್, ಪ್ರವೀಣ್ ಗೌಡ, ಹಲಕುಂದಿ ವೀರನಗೌಡ, ಮೆಡಿಕಲ್ ಸ್ಟೋರ್ ಪ್ರಕಾಶ್, ಶರಣಯ್ಯ, ಎಸ್. ಶರಣಬಸವನಗೌಡ, ತಿಪ್ಪೇಸ್ವಾಮಿ, ವಾಮದೇವಸ್ವಾಮಿ,ನಟರಾಜ ಗೌಡ ಮೊದಲಾದವರು ಇದ್ದರು.